




ಕಾಣಿಯೂರು: ಅಜ್ಞಾನವೆಂಬ ಕತ್ತಲನ್ನು ಹೋಗಲಾಡಿಸಿ ಜ್ಞಾನವೆಂಬ ಬೆಳಕನ್ನು ನೀಡುವ ಶಿಕ್ಷಣವು ಮನುಷ್ಯನ ಜೀವನದಲ್ಲಿ ಅತ್ಯಂತ ಮಹತ್ವದ ಘಟ್ಟವಾಗಿದೆ. ವಿದ್ಯಾರ್ಥಿಗಳು ಕುಟುಂಬದ ಕಣ್ಮಣಿಗಳಾಗಿದ್ದು, ಪೋಷಕರ ಅಭಿಲಾಷೆಯಂತೆ ವಿದ್ಯಾಭ್ಯಾಸದಲ್ಲಿ ತೊಡಗಿ ಪ್ರಗತಿ ಸಾಧಿಸಬೇಕು. ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸುವುದು ವಿದ್ಯಾರ್ಥಿಗಳ ಮುಖ್ಯ ಗುರಿಯಾಗಬೇಕು. ವಿದ್ಯಾರ್ಥಿ ಜೀವನದ ದೆಸೆಯಿಂದಲೇ ಉತ್ತಮ ಕ್ರಿಯಾಶೀಲ ಹವ್ಯಾಸಗಳನ್ನು ರೂಢಿಸಿಕೊಂಡು ಆದರ್ಶ ವ್ಯಕ್ತಿತ್ವದೊಂದಿಗೆ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಕಡಬ ತಾಲೂಕು ಅಖಿಲಾ ಕರ್ನಾಟಕ ಜನಜಾಗೃತಿ ವೇದಿಕೆಯ ಅಧ್ಯಕ್ಷರು, ನ್ಯಾಯವಾದಿ ಆಗಿರುವ ಮಹೇಶ್ ಕೆ.ಸವಣೂರು ಹೇಳಿದರು. ಅವರು ಡಿ.6ರಂದು ಬೊಬ್ಬೆಕೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಪ್ರತಿಭಾ ದಿನೋತ್ಸವವನ್ನು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ದೇಶದ ಭವಿಷ್ಯವಾಗಿರುವ ಯುವ ಸಮುದಾಯ ಸನ್ಮಾರ್ಗದಲ್ಲಿ ಮುನ್ನಡೆದು ದೇಶದ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು. ಉತ್ತಮ ಸಂಸ್ಕಾರ, ಸಂಸ್ಕೃತಿ ಪಡೆದು ಸಮಾಜದಲ್ಲಿ ಆದರ್ಶ ಪ್ರಜೆಗಳಾಗಿ ಜೀವನ ನಡೆಸಬೇಕು ಎಂದರು.





ಮಾತಿನ ಮಂಟಪವನ್ನು ಉದ್ಘಾಟಿಸಿ ಮಾತನಾಡಿದ ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶೋಕ್ ಗೌಡರವರು, ಮೌಲ್ಯ ತುಂಬಿದ ಶಿಕ್ಷಣದೊಂದಿಗೆ ಮಕ್ಕಳಿಗೆ ಸಂಸ್ಕಾರವನ್ನು ನೀಡುವ ಹೊಣೆಗಾರಿಕೆಯನ್ನು ಪೋಷಕರು ಹಾಗೂ ಶಿಕ್ಷಕರು ಜತೆಯಾಗಿ ಮಾಡಬೇಕು. ಕಲಿಕೆಯ ಜೊತೆಗೆ ನಯ, ವಿನಯತೆಯನ್ನು ಮೈಗೂಡಿಸಿಕೊಂಡ ವ್ಯಕ್ತಿಗಳೇ ಮುಂದೆ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳುತ್ತಾರೆ. ಹಿರಿಯರ ಮಾರ್ಗದರ್ಶನದಲ್ಲಿ ಯುವ ಜನತೆ ಸಾಗಿದಾಗ ಸಂಸ್ಕಾರಯುತ ಜೀವನ ನಿರ್ಮಾಣವಾಗುತ್ತದೆ ಎಂದರು. ಬೊಬ್ಬೆಕೇರಿ ಸ.ಹಿ.ಪ್ರಾ.ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷೆ ಸುನೀತಾ ಗಣೇಶ್ ಅವರು ಅಧ್ಯಕ್ಷತೆ ವಹಿಸಿದ್ದರು. ಕಾಣಿಯೂರು ಗ್ರಾ.ಪಂ.ಸದಸ್ಯರಾದ ಸುನಂದಾ ಅಬ್ಬಡ, ಪ್ರವೀಣ್‌ಚಂದ್ರ ರೈ ಕುಮೇರು, ಮುಖ್ಯಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ನಿಂಗರಾಜು ಕೆ.ಪಿ, ನಿವೃತ್ತ ಮುಖ್ಯಗುರು ಸೋಮಪ್ಪ ಕೆ, ಕಾಣಿಯೂರು ಕ್ಲಸ್ಟರ್ ಸಿಆರ್‌ಪಿ ಯಶೋದ, ಪಂಬೆತ್ತಾಡಿ ಸ.ಹಿ.ಪ್ರಾ.ಶಾಲೆಯ ಪ್ರಭಾರ ಮುಖ್ಯಗುರು ಭವ್ಯ ಗಣೇಶ್ ನಾವೂರು, ಶಾಲಾ ಎಸ್‌ಡಿಎಂಸಿ ಉಪಾಧ್ಯಕ್ಷ ರಮೇಶ್ ಉಪ್ಪಡ್ಕ, ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರೀಶ್ ಪೈಕ, ಉಪಾಧ್ಯಕ್ಷ ತೀರ್ಥಕುಮಾರ್ ಪೈಕ, ಕಾರ್ಯದರ್ಶಿ ಅಶ್ವಿನ್ ಕರಿಮಜಲು, ಕೋಶಾಧಿಕಾರಿ ಸುಕುಮಾರ ಕಲ್ಪಡ, ಶಾಲಾ ವಿದ್ಯಾರ್ಥಿ ನಾಯಕಿ ಛಾಯಾ ಉಪಸ್ಥಿತರಿದ್ದರು. ಸಂದ್ಯಾ ಕಾರಡ್ಕ, ಸುಕುಮಾರ್ ಕಲ್ಪಡ, ಸದಾನಂದ ಕಡೀರ, ಸೋಮನಾಥ ದರ್ಖಾಸು, ಸುಧಾಕರ್ ಕಾಣಿಯೂರು, ಹೇಮಲತಾ ಕಾರ್ಯ, ಸುರೇಶ್ ಬೆದ್ರಂಗಳ, ಬುಶ್ರಾ ಅಬ್ಬಡ, ಶೋಭ ಉಪ್ಪಡ್ಕ, ಮಹೇಶ್ ಪೈಕ, ದಿನೇಶ್ ಪಾಪೆತ್ತಡಿ, ದಿನೇಶ್ ಪೈಕ, ರಾಮಣ್ಣ ಗೌಡ ಮೂಡೈಮಜಲು, ಉಷಾ ಮದ್ಕೂರು, ರಕ್ಷಿತಾ ನಿಡ್ಡಾಜೆ ಅತಿಥಿಗಳನ್ನು ಗೌರವಿಸಿದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಾಲಾ ಮುಖ್ಯಗುರು ಶಶಿಕಲಾರವರು ಸ್ವಾಗತಿಸಿ, ಶಿಕ್ಷಕ ಜನಾರ್ದನ ಹೇಮಳ ವಂದಿಸಿದರು. ಶಿಕ್ಷಕಿ ಶೋಭಿತಾರವರು ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ಗೀತಾಕುಮಾರಿ, ಸುರೇಖಾ, ಶೃತಿ, ದಿವ್ಯಾ, ಸುಶ್ಮಿತಾ, ಜಯಲತಾರವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳ, ಪೋಷಕರ, ಹಿರಿಯ ವಿದ್ಯಾರ್ಥಿಗಳ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.





ಸಾಂಸ್ಕೃತಿಕ ವೈಭವ:
ಸಭಾ ಕಾರ್ಯಕ್ರಮದ ಬಳಿಕ ಬೊಬ್ಬೆಕೇರಿ, ಏಲಡ್ಕ ಅಂಗನವಾಡಿ ಪುಟಾಣಿಗಳಿಂದ, ಬೊಬ್ಬೆಕೇರಿ ಶಾಲಾ ವಿದ್ಯಾರ್ಥಿಗಳ ಸಾಂಸ್ಕೃತಿಕ ವೈಭವ ನಡೆಯಿತು.

ಸನ್ಮಾನ:
ಕಳೆದ ಎಸ್‌ಎಸ್‌ಎಲ್‌ಸಿಯಲ್ಲಿ ಗರೀಷ್ಠ ಅಂಕ ಗಳಿಸಿದ ಚೈತನ್ಯ ಅಬ್ಬಡ, ಶಾಲೆಯಲ್ಲಿ ಗೌರವ ಶಿಕ್ಷಕಿಯರಾಗಿ ಸೇವೆಸಲ್ಲಿಸುತ್ತಿರುವ ಸುರೇಖಾ, ಶೃತಿ, ದಿವ್ಯಾ, ಸುಶ್ಮಿತಾ, ಜಯಲತಾ, ಅಡುಗೆ ಸಿಬ್ಬಂದಿಗಳಾದ, ಮಹಾಲಕ್ಷ್ಮೀ, ಚಿತ್ರಾ, ಲತಾ, ಇನ್ಪ್ಲೇಸರ್ ಅವಾರ್ಡ್ ಸಾಧಕ ವಿದ್ಯಾರ್ಥಿಗಳಾದ ಹವ್ಯಶ್ರೀ, ಮನ್ವಿತಾ ಸಿ.ಕೆ, ಅವರು ಸನ್ಮಾನ ಸ್ವೀಕರಿಸಿದರು. ಹಾಗೂ ಕಲಿಕೆ, ಹಾಜರಾತಿ, ಆದರ್ಶ ವಿದ್ಯಾರ್ಥಿ, ಜಲಜೀವನ್ ಮಿಷನ್ ನಡೆಸಿರುವ ಚಿತ್ರಾಕಲೆ ಸ್ಪರ್ಧೆ ವಿಜೇತರನ್ನು ಅಭಿನಂದಿಸಲಾಯಿತು.
ಅದೃಷ್ಟ ವ್ಯಕ್ತಿ ಆಯ್ಕೆ:
ಕಾರ್ಯಕ್ರಮದಲ್ಲಿ ಅದೃಷ್ಟ ವ್ಯಕ್ತಿಯನ್ನು ಚೀಟಿ ತೆಗೆಯುವ ಮೂಲಕ ಆಯ್ಕೆ ಮಾಡಲಾಯಿತು. ಅದೃಷ್ಠ ವ್ಯಕ್ತಿಯಾಗಿ ಆಯ್ಕೆಗೊಂಡ ಹೊನ್ನಮ್ಮ ಅಂಬಲಾಜೆ ಅವರನ್ನು ಸನ್ಮಾನಿಸಲಾಯಿತು.
ಮಾತಿನ ಮಂಟಪ ಉದ್ಘಾಟನೆ:
ದಿ.ಭೂಪಣ್ಣ ಗೌಡ ಕಡೀರರವರ ಸ್ಮರಣಾರ್ಥವಾಗಿ ಇವರ ಪುತ್ರ ಬೆಂಗಳೂರು ತೇಜಸ್ ನೆಟ್‌ವರ್ಕ್ ಟಾಟಾ ಗ್ರೂಪ್‌ನ ತಂತ್ರಜ್ಞಾನ ವಿಭಾಗದ ಉಪಾಧ್ಯಕ್ಷರಾದ ಶಿವಕುಮಾರ್ ಗೌಡ ಕಡೀರ ಇವರು ಬೊಬ್ಬೆಕೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕೊಡುಗೆಯಾಗಿ ನೀಡಿದ ಮಾತಿನ ಮಂಟಪವನ್ನು ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶೋಕ್ ಗೌಡರವರು ಉದ್ಘಾಟಿಸಿದರು.









