ಕೀರ್ತನ ಸೌಹಾರ್ದ ಸಹಕಾರಿಯ ಮಹಾಸಭೆ

0

ಪುತ್ತೂರು ಕಲ್ಲಿ ಮಾರು ಕೀರ್ತನ ಪ್ಯಾರಡೈಸ್ ಸಂರ್ಕೀಣದಲ್ಲಿ ವ್ಯವಹರಿಸುತ್ತಿರುವ ಕೀರ್ತನ ಸೌಹಾರ್ದ ಸಹಕಾರಿ ಇದರ 21-22 ನೇ ಸಾಲಿನ ವಾರ್ಷಿಕ ಮಹಾಸಭೆ ಸೆ.18 ರಂದು ಸಹಕಾರಿಯ ಅಧ್ಯಕ್ಷರಾದ ವಸಂತ ಕಾಮತ್. ಕೆ ಇವರ ಅಧ್ಯಕ್ಷತೆಯಲ್ಲಿ ಕಚೇರಿಯ ಸಭಾಂಗಣದಲ್ಲಿ ನಡೆಯಿತು.


ವರದಿ ಸಾಲಿನಲ್ಲಿ ಸುಮಾರು ಸಂಘದಲ್ಲಿ 452 ಸದಸ್ಯರಿದ್ದು, ರೂಪೈ 9.5 ಲಕ್ಷ ಪಾಲು ಬಂಡವಾಳ ಹೊಂದಿದೆ. ವರ್ಷಾಂತ್ಯಕ್ಕೆ ರೂ.46.8 ಲಕ್ಷ ಠೇವಣಿ ಇದ್ದೂ , ಸುಮಾರು 40 ಲಕ್ಷ ರೂಪಾಯಿ ಸಾಲ ವಿತರಿಸಲಾಗಿದೆ ಎಂದರು.

ಹೊರಬಾಕಿ ಸಾಲ ರೂಪಾಯಿ 14.88ಇದ್ದು , ಕ್ಲಪ್ತ ಸಮಯಕ್ಕೆ ಸಾಲ ಮರುಪಾವತಿ ಗೆ ಸಹಕರಿಸಿದ ಸದಸ್ಯ ರೂ ಹಾಗೂ ಗ್ರಾಹಕರಿಗೆ ಕೃತಜ್ಞತೆ ಸಲ್ಲಿಸಿದರು.

ಸಂಘ ನಮ್ಮದೆನ್ನುವ ಭಾವನೆ ಎಲ್ಲರಲ್ಲೂ ಮೂಡಿರೋ ಕಾರಣ , ಸತತ ಎರಡು ವರ್ಷಗಳಿಂದ ಸಹಕಾರಿ ಲಾಭದೆಡೆಗೆ ಹೆಜ್ಜೆಯಿಟ್ಟದೆ. ಅಭಿವೃದ್ದಿಗೆ ಮುಂದೆಯೂ ಇದೇ ರೀತಿಯಲ್ಲಿ ನಿಮ್ಮ ಪ್ರೋತ್ಸಾಹ ,ಬೆಂಬಲ ಸಿಗಲಿಯೆಂದು ಹೇಳಿ , ಸಹಕಾರ ಯಾಚಿಸಿದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನ್ನಪೂರ್ಣೇಶ್ವರಿ ಕೆ.ಆರ್ ಲೆಕ್ಕಪತ್ರ ಮಂಡಿಸಿದರು. ಸಿಬ್ಬಂದಿ ಅನಿತಾ ಹೆಗ್ಡೆ ವರದಿ ವಾಚಿಸಿದರು. ಸದಸ್ಯರಾದ ಬಾಲ ಸುಬ್ರಹ್ಮಣ್ಯ ಭಟ್ ,ವಾಸು ಪೂಜಾರಿ ಹಾಗೂ ಕರುಣಾಕರ್ ಟಿ.ಎನ್ ಅನಿಸಿಕೆ ವೈಕ್ತಪಡಿಸಿದರು. ನಿರ್ದೇಶಕರುಗಳಾದ ಗೋವಿಂದ ನಾಯಕ್ ಎಸ್.ಎಲ್, ಸತೀಶ್ ಭಟ್ ಎನ್, ಶ್ರೀಮತಿ ವೀಣಾ ಕುಮಾರಿ ,ದಿವಾಕರ್ ಬಳ್ಳಾಲ್, ಶ್ರೀಮತಿ ದೀಪ ನಾಯಕ್ ಹಾಗೂ ಜಾನ್ ಬ್ಯಾಪ್ಟಿಸ್ಟ್ ಡಯಾಸ್ ಹಾಜರಿದ್ದರು. ಸದಸ್ಯೆ ಯಶೋಧ ಪ್ರಾರ್ಥನೆ ನೆರವೇರಿಸಿ, ಬಿ.ನಾರಾಯಣ ಹಗ್ಡೆ ನಿರೂಪಣೆ ಮಾಡಿ, ನಿರ್ದೇಶಕಿ ದೀಪಾ ನಾಯಕ್ ವಂದಿಸಿದರು. ಕಿಶೋರ್ ಭಟ್ ಎಲ್ಲ ರೀತಿಯಲ್ಲಿ ಸಹಕರಿಸಿದರು.

LEAVE A REPLY

Please enter your comment!
Please enter your name here