ವಿಟ್ಲ: ಜೀವನದ ಪ್ರತಿ ದಿನದ ಜಂಜಾಟದ ಕೆಲಸದ ಒತ್ತಡದಲ್ಲಿ ಸ್ವಲ್ಪ ಸಮಯ ಕ್ರೀಡೆಗೆ ಮೀಸಲಿರಿಸಿದಾಗ ನಾವು ಮಾನಸಿಕವಾಗಿ ಹಾಗೂ ದೈಹಿಕವಾಗಿ ಆರೋಗ್ಯವಾಗಿರಲು ಸಾಧ್ಯ. ಕ್ರೀಡೆ ನಮ್ಮೆಲ್ಲರನ್ನೂ ಒಗ್ಗೂಡಿಸಲು ಸಹಕಾರಿ ಎಂದು ಬಂಟ್ವಾಳ ಮೆಸ್ಕಾಂ ಕಾರ್ಯನಿರ್ವಾಹಕ ಇಂಜಿನೀಯರ್ ಪ್ರಶಾಂತ್ ಪೈ ಹೇಳಿದರು.
ಅವರು ವಿಟ್ಲ ಮೆಸ್ಕಾಂ ಅಧಿಕಾರಿ,ನೌಕರರ ಸಂಘ, ಕೆಪಿಟಿಸಿಎಲ್ ಹಾಗೂ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆ ದಾರರ ಸಂಘ ಪ್ರಾಥಮಿಕ ಸಮಿತಿ, ವಿಟ್ಲ ಮೆಸ್ಕಾಂ ಉಪ ವಿಭಾಗ ಇದರ ಆಶ್ರಯದಲ್ಲಿ ವಿಟ್ಲ ಮಾದರಿ ಶಾಲೆಯ ಮೈದಾನದಲ್ಲಿ ನಡೆದ ೯ನೇ ವರ್ಷದ ದಸರಾ ಕ್ರೀಡಾ ಕೂಟವನ್ನು ಉದ್ಘಾಟಿಸಿ ಮಾತಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಟ್ಲ ಮೆಸ್ಕಾಂ ಸಹಾಯಕ ಇಂಜಿನೀಯರ್ ಪ್ರವೀಣ ಜೋಷಿ ವಹಿಸಿದ್ದರು. ಅತಿಥಿಗಳಾಗಿ ಬಂಟ್ವಾಳ ಮೆಸ್ಕಾಂ ವಿಭಾಗೀಯ ಕಛೇರಿಯ ಲೆಕ್ಕಾಧಿಕಾರಿ ಚಂದ್ರಶೇಖರ, ಕೆಪಿಟಿಸಿಎಲ್ ವಿಟ್ಲ ಮೆಸ್ಕಾಂ ಸಹಾಯಕ ಇಂಜಿನೀಯರ್ ಈರಣ್ಣ ಗೌಡ, ಕೆಪಿಟಿಸಿಎಲ್ ನೌಕರರ ಸಂಘದ ಕೇಂದ್ರೀಯ ಸಮಿತಿ ಸದಸ್ಯ ಶಂಕರ ಪ್ರಕಾಶ, ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಜಿಲ್ಲಾ ಸಮಿತಿ ಸದಸ್ಯ ಬಾಲಕೃಷ್ಣ ಸೆರ್ಕಳ, ವಿದ್ಯುತ್ ಗಿತ್ತಿಗೆ ದಾರರ ಸಮಿತಿ ಉಪಾಧ್ಯಕ್ಷ ಕೃಷ್ಣ ಬನಾರಿ, ಮೆಸ್ಕಾಂ ಪ.ಜಾ.ಪ.ಪಂ ಕೇಂದ್ರ ಸಮಿತಿ ಸದಸ್ಯ ದಿನೇಶ್, ಕಿರಿಯ ಇಂಜೀನಿಯರ್ ಗೀತಾ. ಮಾಪಕ ಓದುಗರ ಮೇಲ್ವಿಚಾರಕ ಅಕ್ಷಯ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪದ್ಮನಾಭ ಪಿ. ರವರನ್ನು ಸನ್ಮಾನಿಸಲಾಯಿತು. ಸಾಯಂಕಾಲ ನಡೆದ ಸಮಾರೋಪ ಸಮಾರಂಭದಲ್ಲಿ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ವಿಟ್ಲ ಉಪ ಸಮಿತಿ ಅಧ್ಯಕ್ಷ ಲಕ್ಷ್ಮೀನಾರಾಯಣ ಅಡ್ಯಂತಾಯರವರು ಅಧ್ಯಕ್ಷತೆ ವಹಿಸಿದ್ದರು. ನೆಟ್ಲ ಮುಡ್ನೂರು ಕೆಪಿಟಿಸಿಎಲ್ ಸಹಾಯಕ ಕಾರ್ಯನಿವಾಹಕ ಇಂಜಿನೀಯರ್ ದೇವದಾಸ್ ಕೊಟ್ಟಾರಿ, ಮೆಸ್ಕಾಂ ಮಂಗಳೂರು ವೃತ್ತದ ಸಹಾಯಕ ರವಿಚಂದ್ರ, ವಿಟ್ಲ ಮೆಸ್ಕಾಂ ಸಹಾಯಕ ಲೆಕ್ಕಾಧಿಕಾರಿ ನೆಲ್ಸನ್ ನವೀನ್ ಕುಮಾರ್, ಶೀಬಾ ಇಲೆಕ್ಟ್ರಿಕಲ್ನ ಜಾನ್, ವಿದ್ಯುತ್ ಗುತ್ತಿಗೆದಾರ ಬಾಬು ಮೂಲ್ಯ, ಶಾಖಾಧಿಕಾರಿಗಳಾದ ಸತೀಶ್ ಮತ್ತು ಪ್ರಸನ್ನ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕ್ರಿಕೆಟ್ ನಲ್ಲಿ ಪ್ರಥಮ ಕೆಪಿಟಿಸಿಎಲ್ ದ್ವಿತೀಯ ಮಾಣಿ ಮೆಸ್ಕಾಂ ಪಡೆದುಕೊಂಡಿತು. ಕಬಡ್ಡಿಯಲ್ಲಿ ಪ್ರಥಮ ಸಾಲೆತ್ತೂರು ಮೆಸ್ಕಾಂ, ದ್ವಿತೀಯ ಉಕ್ಕುಡ ಮೆಸ್ಕಾಂ ಪಡೆದುಕೊಂಡಿತು. ವಾಲಿಬಾಲ್ನಲ್ಲಿ ಪ್ರಥಮ ಸಾಲೆತ್ತೂರು ಮೆಸ್ಕಾಂ, ದ್ವಿತೀಯ ವಿಟ್ಲ ಮೆಸ್ಕಾಂ ಪಡೆದುಕೊಂಡಿತು. ಹಗ್ಗಜಗ್ಗಾಟದಲ್ಲಿ ಪ್ರಥಮ ಕೆಪಿಟಿಸಿಎಲ್, ದ್ವಿತೀಯ ವಿದ್ಯುತ್ ಗುತ್ತಿಗೆದಾರರ ಸಂಘ ವಿಟ್ಲ ಪಡೆದುಕೊಂಡಿತು. ಶಿಸ್ತು ಬದ್ಧ ತಂಡ ಪ್ರಶಸ್ತಿಯನ್ನು ಕನ್ಯಾನ ಮೆಸ್ಕಾಂ ಪಡೆದುಕೊಂಡಿತು. ವಿಟ್ಲ ಮೆಸ್ಕಾಂ ಸಹಾಯಕ ಇಂಜಿನಿಯರ್ ಸತೀಶ ಸಪಲ್ಯ ಸ್ವಾಗತಿದರು. ಉಕ್ಕುಡ ಶಾಖಾಧಿಕಾರಿ ಆನಂದ ವಂದಿಸಿದರು. ಕೆಪಿಟಿಸಿಎಲ್ ವಿಟ್ಲ ನೌಕರರ ಸಂಘದ ಪ್ರಾಥಮಿಕ ಸಮಿತಿ ಅಧ್ಯಕ್ಷ ಪದ್ಮನಾಭ ಅಡ್ಯೇಯಿ ಕಾರ್ಯಕ್ರಮ ನಿರೂಪಿಸಿದರು.