ವಿಟ್ಲ: ಇಡ್ಕಿದು ಸೇವಾ ಸಹಕಾರಿ ಸಂಘ, ಹಾಲು ಉತ್ಪಾದಕರ ಸಹಕಾರಿ ಸಂಘ ಇಡ್ಕಿದು ಮತ್ತು ಸೂರ್ಯ ಇವರ ಸಹಕಾರದೊಂದಿಗೆ ಇಡ್ಕಿದು ಗ್ರಾಮ ಪಂಚಾಯತ್ ವತಿಯಿಂದ ಮಿತ್ತೂರು ಹಿ.ಪ್ರಾ. ಶಾಲೆಯಲ್ಲಿ ನಡೆದ ಗ್ರಾಮೀಣ ಕ್ರೀಡಾ ಕೂಟವನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಎಂ. ಸುಧೀರ್ ಕುಮಾರ್ ಶೆಟ್ಟಿ ರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಗ್ರಾಮ ಮಟ್ಟದಲ್ಲಿನ ಕೆಲವೊಂದು ಸುಪ್ತ ಪ್ರತಿಭೆಗಳಿದ್ದು ಅವರನ್ನು ಗುರುತಿಸುವ ನಿಟ್ಟಿನಲ್ಲಿ ಸರಕಾರದ ನಿರ್ದೇಶನದಂತೆ ಈ ಒಂದು ಕ್ರೀಡಾ ಕೂಟದ ಆಯೋಜನೆ ಮಾಡಲಾಗಿದೆ ಎಂದವರು ಹೇಳಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಸಾಯಂಕಾಲ ನಡೆದ ಸಮಾರೋಪ ಸಮಾರಂಭದಲ್ಲಿ ಇಡ್ಕಿದು ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಸುಧಾಕರ ಶೆಟ್ಟಿ ಬೀಡಿನಮಜಲುರವರು ಅಧ್ಯಕ್ಷತೆ ವಹಿಸಿದರು. ಈ ಸಂದರ್ಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಣೆ ಮಾಡಿ ಪ್ರಥಮ ಬಹುಮಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾದ ತಂಡಗಳಿಗೆ ಅವರು ಕೋರಿದರು.
ಖೋಖೋ ಪುರುಷರ ವಿಭಾಗದಲ್ಲಿ ಪ್ರಥಮ ಸ್ಥಾನ ಶ್ರೀಆದಿಶಕ್ತಿ ಮಿತ್ತೂರು, ದ್ವಿತೀಯ ದರ್ಬೆ ಫ್ರೆಂಡ್ಸ್ ಪಡೆದುಕೊಂಡಿತು. ಮಹಿಳಾ ವಿಭಾಗದಲ್ಲಿ ಪ್ರಥಮ ಸ್ಥಾನ ಷಣ್ಮುಖ ಕೋಲ್ಪೆ, ದ್ವಿತೀಯ ಸ್ಥಾನ ಸಂಜೀವಿನಿ ಮಾತೃ ಮಂಡಳಿ ಸೂರ್ಯ ಪಡೆದುಕೊಂಡಿತು. ಕಬಡ್ಡಿ ಪುರುಷರ ವಿಭಾಗದಲ್ಲಿ ಪ್ರಥಮ ಸ್ಥಾನ ಷಣ್ಮುಖ ಕೋಲ್ಪೆ, ದ್ವಿತೀಯ ಸ್ಥಾನ ಶ್ರೀ ಆದಿಶಕ್ತಿ ಮಿತ್ತೂರು ಪಡೆದುಕೊಂಡಿತು. ಮಹಿಳಾ ವಿಭಾಗದಲ್ಲಿ ಪ್ರಥಮ ಸ್ಥಾನ ಷಣ್ಮುಖ ಕೋಲ್ಪೆ, ದ್ವಿತೀಯ ಸ್ಥಾನ ಸಂಜೀವಿನಿ ಮಾತೃ ಮಂಡಳಿ ಸೂರ್ಯ ಪಡೆದುಕೊಂಡಿತು. ಈ ಸಂದರ್ಭದಲ್ಲಿ ಪಂ.ಸದಸ್ಯರಾದ ಚಿದಾನಂದ ಪೆಲತ್ತಿಂಜ, ಸಂಜೀವ ದರ್ಬೆ, ಭಾಗೀರಥಿ, ಜಯಂತಿ, ಪುರುಷೋತ್ತಮ ಕೋಲ್ಪೆ, ತಿಲಕ್‌ರಾಜ್ ಶೆಟ್ಟಿ, ಪದ್ಮನಾಭ, ಲಲಿತ, ಶೋಭಾ ಮೊದಲಾದವರು ಉಪಸ್ಥಿತರಿದ್ದರು. ತೀರ್ಪುಗಾರರಾಗಿ ಚಿನ್ನಪ್ಪ, ಉಮೇಶ, ವಿಠ್ಠಲ್ ನಾಯ್ಕ, ರೂಪಿತ್ ರೈ, ವಿಶ್ವನಾಥ ರಾಥೋಡ್ ಸಹಕಾರ ನೀಡಿದರು. ಮಿತ್ತೂರು ಶಾಲಾ ಸಹಶಿಕ್ಷಕ ಸಂಜೀವ ನಾಯ್ಕ್ , ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು, ಫ್ರೇಂಢ್ಸ್ ಕ್ಲಬ್ ಮಿತ್ತೂರು ಇದರ ಕ್ರೀಡಾ ಕಾರ್ಯದರ್ಶಿ ಈಶ್ವರ ಗೌಡ ಕುವೆತ್ತಿಲ, ಹಾಗೂ ಸದಸ್ಯರು ಸಹಕರಿಸಿದರು. ಪಂ.ಅಭಿವೃದ್ದಿ ಅಧಿಕಾರಿ ಗೋಕುಲ್‌ದಾಸ್ ಭಕ್ತ ಸ್ವಾಗತಿಸಿ, ವಂದಿಸಿದರು.