ಸೆ. 24: ಪುತ್ತೂರಿನಲ್ಲಿ ರೂ. 2.20 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಪುತ್ತೂರು ಪಿಎಲ್‌ಡಿ ಬ್ಯಾಂಕ್‌ನ ನೂತನ ಕಟ್ಟಡ, ರೈತ ಸೌಧ ಉದ್ಘಾಟನೆ

0

ಪುತ್ತೂರು: ಪುತ್ತೂರಿನಲ್ಲಿ ರೂ. 2.20 ಕೋಟಿ ರೂ, ವೆಚ್ಚದಲ್ಲಿ ನಿರ್ಮಾಣಗೊಂಡ ಪುತ್ತೂರು ಪಿಎಲ್‌ಡಿ ಬ್ಯಾಂಕ್‌ನ ನೂತನ ಸುಸಜ್ಜಿತ ಕಟ್ಟಡ ಸೆ. 24 ರಂದು ಉದ್ಘಾಟನೆಗೊಳ್ಳಲಿದೆ ಎಂದು ಬ್ಯಾಂಕಿನ ಅಧ್ಯಕ್ಷ ಭಾಸ್ಕರ ಎಸ್.ಗೌಡ ಇಚ್ಲಂಪಾಡಿ ಹೇಳಿದರು.

ಅವರು ಸೆ. 21ರಂದು ಪುತ್ತೂರು ಸುದ್ದಿ ಮೀಡಿಯಾ ಸೆಂಟರ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಬ್ಯಾಂಕಿನ ನೂತನ ಕಟ್ಟಡದಲ್ಲಿ ವಾಣಿಜ್ಯ ಸಂಕೀರ್ಣ ಮತ್ತು ನೂತನ ಕಚೇರಿಯನ್ನು ಹೊಂದಿರುವ ರೈತ ಸೌಧ ಲೋಕಾರ್ಪಣೆ ಕಾರ್ಯಕ್ರಮವು ಬೆಳಗ್ಗೆ 10.30 ಕ್ಕೆ ಸಭಾ ಕಾರ‍್ಯಕ್ರಮವು ಪುತ್ತೂರು ಕಿಲ್ಲೆ ಮೈದಾನದಲ್ಲಿ ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆಯಲ್ಲಿ ನಡೆಯಲಿದೆ. ಸಂಸದ ನಳಿನ್‌ಕುಮಾರ್ ಕಟೀಲ್‌ರವರು ದೀಪ ಪ್ರಜ್ವಲನೆ ಮಾಡಲಿದ್ದಾರೆ. ಮಾಜಿ ಮುಖ್ಯ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರು ರೈತ ಸೌಧ ಸಂಕಿರ್ಣವನ್ನು ಉದ್ಘಾಟನೆ ಮಾಡಲಿದ್ದಾರೆ. ಸಹಕಾರ ಸಚಿವ ಎಸ್.ಟಿ.ಸೋಮಶೇಖರ್‌ರವರು ನೂತನ ಕಚೇರಿ ಉದ್ಘಾಟನೆ ಮಾಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್‌ರವರು ನಾಮ-ಲಕ ಅನಾವರಣಗೈಯಲಿದ್ದಾರೆ. . ಸಚಿವ ಎಸ್. ಅಂಗಾರರವರು ಭದ್ರತಾ ಕೊಠಡಿ ಉದ್ಘಾಟಿಸಲಿದ್ದಾರೆ. ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ| ಎಂ.ಎನ್, ರಾಜೇಂದ್ರ ಕುಮಾರ್‌ರವರು ಕಂಪ್ಯೂಟರ್ ವಿಭಾಗ ಉದ್ಘಾಟನೆ ಮಾಡಲಿದ್ದು, ಕ,ರಾ.ಸ.ಕೃ ಮತ್ತು ಗ್ರಾ.ಅ.ಬ್ಯಾಂಕ್ ಬೆಂಗಳೂರು ಇದರ ವ್ಯವಸ್ಥಾಪಕ ನಿರ್ದೇಶಕ ಲಿಂಗರಾಜು ಬಿ.ಆರ್‌ರವರು ಆಡಳಿತ ಮಂಡಳಿಯ ಸಭಾಂಗಣವನ್ನು ಉದ್ಘಾಟನೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪುತ್ತೂರು ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್, ಕ,ರಾ.ಸ.ಕೃ ಮತ್ತು ಗ್ರಾ.ಅ.ಬ್ಯಾಂಕ್ ಬೆಂಗಳೂರು ಇದರ ದ.ಕ ಹಾಗೂ ಉಡುಪಿ ಜಿಲ್ಲಾ ನಿರ್ದೇಶಕ ರಾಜಶೇಖರ್ ಜೈನ್ ಎನ್, ಪುತ್ಥೂರು ನಗರ ಅಭಿವೃದ್ಧಿ ಪ್ರಾಽಕಾರದ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಮೈಸೂರು ವಿಭಾಗದ ಸಹಕಾರ ಸಂಘಗಳ ಜಂಟಿ ನಿಬಂಧಕ ಪ್ರಕಾಶ್ ರಾವ್, ದ.ಕ, ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕ ಪ್ರವೀಣ್ ಬಿ.ನಾಯಕ್, ದ.ಕ ಜಿಲ್ಲಾ ಸಹಕಾರ ಸಂಘಗಳ ಲೆಕ್ಕಪರಿಶೋಧಕ ಬಾಲಸುಬ್ರಹ್ಮಣ್ಯರವರುಗಳು ಭಾಗವಹಿಸಲಿದ್ದಾರೆ.

ಸನ್ಮಾನ ಸಮಾರಂಭ: ಸಂಘದ ಮಾಜಿ ಅಧ್ಯಕ್ಷರುಗಳಾದ ಬಿ.ಆರ್. ದೇವಪ್ಪ ಗೌಡ, ಎನ್ ನಾಗಣ್ಣ ಗೌಡ, ಕೆ.ಬಾಲಕೃಷ್ಣ ಬೋರ್ಕರ್, ಎಸ್.ಬಿ.ಜಯರಾಮ ರೈ, ಕಡಮಜಲು ಸುಭಾಷ್ ರೈ, ಬಿ.ರಾಮ ಭಟ್ ಹಸಂತಡ್ಕ, ರಂಗನಾಥ ರೈ ಗುತ್ತು ಹಾಗೂ ಎ.ಬಿ ಮನೋಹರ್ ರೈ ಹಾಗೂ ಬ್ಯಾಂಕಿನ ಮಾಜಿ ವ್ಯವಸ್ಥಾಪಕರುಗಳಾದ ಕೆ.ಹೊನ್ನಪ್ಪ ಗೌಡ, ಎಂ. ಧನಕೀರ್ತಿ ಶೆಟ್ಟಿ, ಜಯಶ್ರೀ ಕೆ.ರೈ, ಆಲ್ಬರ್ಟ್ ಲೂಯಿಸ್, ಯಶೋಧರ್ ಜೈನ್, ದಯಾಮಣಿ ಕೆ.ವಿ ಹಾಗೂ ಬಾಲಕೃಷ್ಣ ಪಿರವರುಗಳಿಗೆ ಸನ್ಮಾನ ನಡೆಯಲಿದೆ ಎಂದು ಬ್ಯಾಂಕಿನ ಅಧ್ಯಕ್ಷ ಭಾಸ್ಕರ್ ಎಸ್ .ಗೌಡ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಬ್ಯಾಂಕಿನ ಕೋಶಾಽಕಾರಿ ನಾರಾಯಣ ಪೂಜಾರಿ ಕುರಿಕ್ಕಾರ, ನಿರ್ದೇಶಕರುಗಳಾದ ಎ.ಬಿ.ಮನೋಹರ್ ರೈ, ಯುವರಾಜ ಪೆರಿಯತ್ತೋಡಿ, ದೇವಯ್ಯ ಗೌಡ ಹಾಗೂ ವ್ಯವಸ್ಥಾಪಕ ಶೇಖರ್ ಯಂರವರು ಉಪಸ್ಥಿತರಿದ್ದರು.

ಬ್ಯಾಂಕ್ ನಡೆದು ಬಂದ ದಾರಿ-: 84 ವರ್ಷಗಳ ಹಿಂದೆ ಪ್ರಾರಂಭವಾದ ಪುತ್ತೂರು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಸಹಕಾರಿ ಪಿತಾಮಹಾ ಮೊಳಹಳ್ಳಿ ಶಿವರಾಯರು ಪ್ರವರ್ತಕರಾಗಿ , ಅಧ್ಯಕ್ಷರಾಗಿ, ಪುತ್ತೂರು ಡಿವಿಜನ್ ಸಹಕಾರಿ ಭೂಮಿ ಅಡವಿನ ಬ್ಯಾಂಕ್ ಎಂಬುದಾಗಿ 1938 ರಲ್ಲಿ ನೋಂದಣಿಯಾಗಿ ಪ್ರಾರಂಭಗೊಂಡಿತು. ಅದೇ ವರ್ಷ ಮಂಗಳೂರು ಮತ್ತು ಉಡುಪಿಯಲ್ಲಿ ಭೂ ಅಡಮಾನ ಬ್ಯಾಂಕ್‌ಗಳನ್ನು ತೆರೆದು ಪೂರ್ಣ ಜಿಲ್ಲೆಯನ್ನು ಅಡಮಾನ ಕಾರ‍್ಯ ವ್ಯಾಪ್ತಿಗೆ ತಂದರು. ಕೇವಲ ಕೃಷಿ ಅಭಿವೃದ್ಧಿಯಾದರೆ ಸಾಲದು, ಕೃಷಿಗೆ ಪೂರಕ ಕೃಷಿಯೇತರ, ಮುಂತಾದ ಸಾಲವನ್ನು ನೀಡಿ ಸರ್ವ ವಿಧದಲ್ಲೂ ಗ್ರಾಮೀಣ ಅಭಿವೃದ್ಧಿಯಾಗುವಂತೆ ಸಾಲ ನೀಡುವುದು ಅಗತ್ಯವೆಂದು ಮನಗೊಂಡು ನಬಾರ್ಡ್ ಸಂಸ್ಥೆಯಿಂದ ಸಾಲ ನೀಡುವ ಯೋಜನೆಗಳು ಅನುಷ್ಠಾನಗೊಂಡಿದ್ದು. ಆ ನಂತರದಿಂದ ಭೂ ಅಭಿವೃದ್ಧಿ ಬ್ಯಾಂಕ್‌ಗಳು ತಮ್ಮ ಹೆಸರನ್ನು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಎಂದು ಬದಲಾಯಿಸಿಕೊಂಡು ಕಾರ್ಯ ನಿರ್ವಹಿಸುತ್ತಾ ಬಂದಿವೆ. ಪ್ರಕೃತ ಬ್ಯಾಂಕ್ ತಾಲೂಕಿನ ರೈತ ಸದಸ್ಯರುಗಳಿಗೆ ತಮ್ಮ ಕೃಷಿ ಜಮೀನಿನಲ್ಲಿ ಸಣ್ಣ ನೀರಾವರಿ ಯೋಜನೆಗಳಾದ ಹೊಸ ನೀರಾವರಿ, ತುಂತುರು ನೀರಾವರಿ, ನೀರು ಶೇಖರಣಾ ತೊಟ್ಟಿ, ತೋಟದ ಕೆರೆ. ಪೈಪ್ ಲೈನ್, ಬಾವಿ ಆಳಪಡಿಸುವಿಕೆ, ವಿಶೇಷ ಯೋಜನೆಗಳಾದ ಅಡಿಕೆ , ತೆಂಗು ತೋಟ ಅಭಿವೃದ್ಧಿಗೆ, ಅಡಿಕೆ ಒಣಗಿಸುವ ಕಣ ರಚೆನೆಗೆ, ರಬ್ಬರ್ ಸಂಸ್ಕರಣಾ -ಟಕಗಳಿಗೆ, ತೋಟಗಾರಿಕೆಗೆ ಸಂಬಂಧಿಸಿದಂತೆ ಹೊಸ ರಬ್ಬರ್ ತೋಟ,ಗೇರು ತೋಟ, ತೆಂಗು ತೋಟ ನಿರ್ಮಾಣಕ್ಕೆ, ವ್ಯೆವಿಧ್ಯಮಯ ಯೋಜನೆಗಳಲ್ಲಿ ದ್ವಿಚಕ್ರ ವಾಹನ ಖರೀದಿ, ಕೃಷಿ ಪೂರಕ ಚಟುವಟಿಕೆಗಳಾದ ಹೈನುಗಾರಿಕೆ, ಕೋಳಿ ಸಾಕಣೆ, ಹಾಗೂ ರೈತರಿಗೆ ಕೃಷಿಯೇತರ ಯೋಜನೆಗಳಲ್ಲಿ ಸಣ್ಣ ಉದ್ದಿಮೆ, ಸೇವಾ ಚಟುವಟಿಕೆಗಳಿಗೆ, ನಬಾರ್ಡ್ ಮೂಲದಿಂದ ಕಸ್ಕಾರ್ಡ್ ಬ್ಯಾಂಕಿನ ಮೂಲಕ ಆರ್ಥಿಕ ನೆರವನ್ನು ಪಡೆದು ದೀರ್ಘಾವಽ ಸಾಲ ಸೌಲಭ್ಯವನ್ನು ನೀಡಲಾಗುತ್ತಿದೆ. ಕರ್ನಾಟಕ ಸರಕಾರ ದೀರ್ಘಾವಽ ಕೃಷಿ ಹಾಗೂ ಕೃಷಿ ಪೂರಕ ಸಾಲಗಳಿಗೆ ಪ್ರಕಟಿಸಿದ ಶೇ ೬, ಶೇ ೪ ಮತ್ತು ಶೇ ೩ ಬಡ್ಡಿ ಸಹಾಯಧನದ ಸಾಲಗಳನ್ನು ಒದಗಿಸಿ ರೈತರಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ. ಬ್ಯಾಂಕ್ ಆರ್ಥಿಕ ಸ್ವಾವಲಂಬನೆಗೆ ಒತ್ತು ನೀಡಿ, ಸದಸ್ಯರಿಂದ ನಿರಂತರವಾಗಿ ವಿವಿಧ ರೀತಿಯ ಠೇವಣೆಗಳನ್ನು ಸಂಗ್ರಹಿಸುತ್ತಾ ಅವರಲ್ಲಿ ಉಳಿತಾಯದ ಮನೋಭಾವನೆ ಬೆಳಸುತ್ತಿದೆ,. ಬ್ಯಾಂಕಿನ ಕಾರ್ಯವ್ಯಾಪ್ತಿಯಲ್ಲಿರುವ ಕಡಬ ವಲಯ ಹಾಗೂ ಬಿಳಿನೆಲೆ ವಲಯಗಳ ಸದಸ್ಯರುಗಳಿಗೆ ಉತ್ತಮ ಹಾಗೂ ತ್ವರಿತ ಬ್ಯಾಂಕಿಂಗ್ ಸೇವೆಯನ್ನು ನೀಡುವ ದೃಷ್ಟಿಯನ್ನು ಇರಿಸಿಕೊಂಡು ಕಡಬ ಪಟ್ಟಣದ ಭಾಗೀರಥಿ ಟವರ‍್ಸ್ ನಲ್ಲಿ ಶಾಖೆ ಕಾರ್ಯ ನಿರ್ವಹಿಸುತ್ತಿದೆ. ಬ್ಯಾಂಕ್‌ನ ಹಿಂದಿನ ಅಧ್ಯಕ್ಷರಾಗಿದ್ದ ರಂಗನಾಥ ರೈ ಗುತ್ತು ಮತ್ತು ಮನೋಹರ್ ರೈರವರುಗಳು ಬ್ಯಾಂಕಿನ ಹೊಸ ಕಟ್ಟಡಕ್ಕಾಗಿ ಬಹಳಷ್ಟು ಕೆಲಸವನ್ನು ಮಾಡಿದ್ದಾರೆ ಎಂದು ಭಾಸ್ಕರ್ ಎಸ್ ಗೌಡರವರು ತಿಳಿಸಿದ್ದಾರೆ.

ವಿಶೇಷ ಬಡ್ಡಿಯ ಕೊಡುಗೆ- ಬ್ಯಾಂಕಿನ ನೂತನ ಕಟ್ಟಡದ ಉದ್ಘಾಟನಾ ಪ್ರಯುಕ್ತ ಅಕ್ಟೋಬರ್ 1 ರಿಂದ 31 ರತನಕ ಬ್ಯಾಂಕಿನಲ್ಲಿ ಡಿಪಾಸಿಟ್ ಮಾಡುವ ಗ್ರಾಹಕರಿಗೆ ಅರ್ಧ ಶೇಕಡಾ ಬಡ್ಡಿಯನ್ನು ಹೆಚ್ಚುವರಿಯಾಗಿ ನೀಡಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.

ಸುಸಜ್ಜಿತ ಕಟ್ಟಡ

9692 ಮಂದಿ ಸದಸ್ಯರನ್ನು ಹೊಂದಿರುವ ಪಿಎಲ್‌ಡಿ ಬ್ಯಾಂಕ್, ಪುತ್ತೂರು ಮತ್ತು ಕಡಬ ತಾಲೂಕಿನ 69 ಗ್ರಾಮಗಳ ರೈತರ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಪುತ್ತೂರು ಪಟ್ಟಣದ ಮೊಳಹಳ್ಳಿ ಶಿವರಾವ್ ರಸ್ತೆಯ ಸಮೀಪ ಇರುವ ಬ್ಯಾಂಕಿನ ಸ್ವಂತ ನಿವೇಶನದಲ್ಲಿ ನೂತನ ವಾಣಿಜ್ಯ ಸಂಕೀರ್ಣ ಹಾಗೂ ಬ್ಯಾಂಕಿನ ಕಚೇರಿಯ ಕಟ್ಟಡ ನಿರ್ಮಾಣಕ್ಕೆ ರೂ 2.20 ಕೋಟಿ ವೆಚ್ಚ ತಗಲಿದ್ದು, ಕಟ್ಟಡದ ಬೇಸ್ ಮೆಂಟ್‌ನಲ್ಲಿ ವಾಹನ ಪಾರ್ಕಿಂಗ್‌ಗೆ ಅವಕಾಶ ನೀಡಲಾಗಿದೆ. ನೆಲ ಅಂತಸ್ತಿನಲ್ಲಿ 5 ವಾಣಿಜ್ಯ ಕೊಠಡಿಗಳು, ಮೊದಲನೆ ಮಹಡಿಯಲ್ಲಿ ಬ್ಯಾಂಕಿನ ನೂತನ ಕಛೇರಿ ಹಾಗೂ ಎರಡನೇ ಮಹಡಿಯಲ್ಲಿ 6 ವಾಣಿಜ್ಯ ಕೊಠಡಿಗಳು, ಬ್ಯಾಂಕ್ ಆಡಳಿತ ಮಂಡಳಿ ಸಭೆಯ ಹಾಲ್ , ಅತಿಥಿ ಗೃಹ ಹೊಂದಿರುತ್ತದೆ., ಲಿಫ್ಟ್ ಹಾಗೂ ಸೋಲಾರ್ ವಿದ್ಯುತ್ ವ್ಯವಸ್ಥೆ ಮಾಡಲಾಗಿದೆ.‌

ಭಾಸ್ಕರ್ ಎಸ್. ಗೌಡ ಇಚ್ಲಂಪಾಡಿ ಅಧ್ಯಕ್ಷರು, ಪಿಎಲ್‌ಡಿ ಬ್ಯಾಂಕ್ ಪುತ್ತೂರು

LEAVE A REPLY

Please enter your comment!
Please enter your name here