ಪುತ್ತೂರು: ನ್ಯಾಯವಾದಿ ಆರೋನ್ ಡಿ’ಸೋಜರವರನ್ನು ಸಹಾಯಕ ಸರಕಾರಿ ಅಭಿಯೋಜಕರಾಗಿ ನೇಮಕಗೊಳಿಸಿ ಸರಕಾರ ಆದೇಶ ಹೊರಡಿಸಿದೆ.
ಬಂಟ್ವಾಳ ತಾಲೂಕಿನ ವಿಟ್ಲ ಚರ್ಚ್ ಬಳಿಯ ಗನ್ನರ್ ಫಾರ್ಮ್ ನಿವಾಸಿ ಜೋನ್ ಡಿ’ಸೋಜ ಹಾಗೂ ಜಾನೆಟ್ ಡಿ’ಸೋಜರವರ ಪುತ್ರ ಆರೋನ್ ಡಿ’ಸೋಜರವರು ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆ.ವಿರವರ ಕಛೇರಿಯಲ್ಲಿ ಜೂನಿಯರ್ ವಕೀಲರಾಗಿ ಕಾರ್ಯ ನಿರ್ವಹಿಸಿ, ಪ್ರಸ್ತುತ ವಿಟ್ಲದಲ್ಲಿ ಸ್ವಂತ ಕಛೇರಿ ಹೊಂದಿರುತ್ತಾರೆ. ಆರೋನ್ ಡಿ’ಸೋಜರವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ವಿಟ್ಲ ಸೈಂಟ್ ರೀಟಾ ಶಾಲೆಯಲ್ಲಿ, ಪ್ರೌಢಶಿಕ್ಷಣ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ವಿಠಲ ಪ್ರೌಢಶಾಲೆಯಲ್ಲಿ, ಕಾನೂನು ಶಿಕ್ಷಣವನ್ನು ವಿವೇಕಾನಂದ ಕಾನೂನು ಮಹಾ ವಿದ್ಯಾಲಯದಲ್ಲಿ ಪೂರೈಸಿದ್ದರು. ಆರೋನ್ ಡಿ’ಸೋಜರವರು ಗ್ಲೋರಿಯಾ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ, ಸೈಂಟ್ ಮಿಲಾಗ್ರಿಸ್ ಸೌಹಾರ್ದ ಕೋ-ಅಪರೇಟಿವ್ ಸೊಸೈಟಿ, ಸ್ವಾಭಿಮಾನಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ಕಾನೂನು ಸಲಹೆಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆರೋನ್ ಡಿ’ಸೋಜರವರು ತಂದೆ-ತಾಯಿ, ಪತ್ನಿ ಜೋಯ್ಲಿನ್ ಲೋಬೊರವರೊಂದಿಗೆ ವಿಟ್ಲದಲ್ಲಿ ವಾಸವಾಗಿದ್ದಾರೆ.