ಪುತ್ತೂರು : ಪುತ್ತೂರು ಧರ್ಮಸ್ಥಳ ಕಟ್ಟಡದಲ್ಲಿ ವ್ಯವಹರಿಸುತ್ತಿರುವ ಕೆನರಾ ಬ್ಯಾಂಕ್ನಲ್ಲಿ ರಿಟೇಲ್ ಕ್ಲಸ್ಟರ್ ಮೇಳ ನಡೆಯಿತು. ಕೆನರಾ ಬ್ಯಾಂಕ್ ಮಂಗಳೂರು ವೃತ್ತ ಕಛೇರಿಯ ಡಿಜಿಎಂ ರಾಘವೇಂದ್ರ ನಾಯ್ಕ ಮನೆ, ವಾಹನ, ವ್ಯಾಪಾರ ಅಭಿವೃದ್ಧಿಗೆ ಫಲಾನುಭವಿಗಳಿಗೆ ವಿವಿಧ ಸಾಲವನ್ನು ಮಂಜೂರು ಮಾಡಿ ವಿತರಿಸಿ ಮಾತನಾಡಿ ಪುತ್ತೂರು ಕೆನರಾ ಬ್ಯಾಂಕ್ ದೇಶದಲ್ಲಿ ಮೂರನೇ ಸ್ಥಾನದಲ್ಲಿ ಇದೆ. ಸಿಂಡಿಕೇಟ್ ಬ್ಯಾಂಕ್ ವಿಲೀನ ಸಮಯ ಸರ್ವರ್ ಸಮಸ್ಯೆಯಾಗಿದ್ದು ಪ್ರಸ್ತುತ ಎಲ್ಲಾ ಕಾರ್ಯಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಮುಂದೆ ದ್ವಿತೀಯ ಸ್ಥಾನವನ್ನು ಗಳಿಸಲು ಗ್ರಾಹಕರ ಸಹಕಾರ ಅಗತ್ಯವಿದೆ. ಎಲ್ಲಾ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡಲು ಬ್ಯಾಂಕ್ ಸಿಬ್ಬಂದಿ ಸಿದ್ಧವಿದ್ದಾರೆ ಎಂದರು. ಸರಿಯಾದ ದಾಖಲೆ ಪತ್ರಗಳನ್ನು ನೀಡಿದಲ್ಲಿ ಶೀಘ್ರ ಸಾಲ ಮಂಜೂರು ಮಾಡಲಾಗುತ್ತದೆ ಎಂದು ಹೇಳಿ ಶುಭಹಾರೈಸಿದರು. ಪುತ್ತೂರು ರೀಜನಲ್ ಶಾಖೆಯ ರಿಜಿನಲ್ ಮ್ಯಾನೇಜರ್ ನರೇಂದ್ರ ರೆಡ್ಡಿ, ಡಿ.ಎಂ. ಲೀಲಾಧರ ಭಂಡಾರ್ಕಾರ್, ಡಿ.ಎಂ, ಸುಮಿತ್ ವಾರ್ತಿ, ಚೀಫ್ ಮ್ಯಾನೇಜರ್ ಮೊಹಮ್ಮದ್ ಅಶ್ರಫ್, ಚೀಫ್ ಮ್ಯಾನೇಜರ್ ಶ್ರೀನಿವಾಶ, ಹಲೋಕ್, ಪ್ರಮೋದ್ ನಾಯಕ್ ಹಾಗೂ ಶಾಖೆಯ ಮ್ಯಾನೇಜರ್ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು. ಸೀನಿಯರ್ ಎನ್ಎನ್ಡಿ ಸಂಗ್ರಾಹಕ ಉಲ್ಲಾಸ ಪೈ ಸಹಕರಿಸಿದರು.