ಉಪ್ಪಿನಂಗಡಿ ಲಕ್ಷ್ಮಿನಗರದ ಅಯೂಬ್ ಅಗ್ನಾಡಿ ಮನೆಗೆ ಎನ್.ಐ.ಎ. ದಾಳಿ

0

ಉಪ್ಪಿನಂಗಡಿ: ಉಪ್ಪಿನಂಗಡಿಯ ಲಕ್ಷ್ಮೀನಗರದಲ್ಲಿರುವ ಅಯೂಬ್ ಅಗ್ನಾಡಿ ಮನೆಗೆ ಸೆ.22ರಂದು ಬೆಳಿಗ್ಗೆ ಎನ್ಐಎ ತಂಡ ದಾಳಿ ನಡೆಸಿತು.


ಪ್ರವೀಣ್ ನೆಟ್ಟಾರು ಹತ್ಯೆ ಹಾಗೂ ಭಯೋತ್ಪಾದಕ ಕೃತ್ಯಗಳ ಬಗ್ಗೆ ತನಿಖೆ ನಡೆಸುತ್ತಿರುವ ಎನ್ ಐಎ ತಂಡ ನ್ಯಾಯಾಲಯದ ಸರ್ಚ್ ವಾರಂಟ್ ಪಡೆದುಕೊಂಡು ಸ್ಥಳೀಯ ಪೊಲೀಸರೊಂದಿಗೆ ದಾಳಿ ನಡೆಸಿ ಮನೆಯ ಶೋಧ ಕಾರ್ಯ ನಡೆಸಿತು.

ಈ ಸಂದರ್ಭ ಅಯೂಬ್ ಅವರು ಮನೆಯಲ್ಲಿರಲಿಲ್ಲ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಈ ದಾಳಿ ಯಾವ ಕಾರಣಕ್ಕೆ ನಡೆದಿದೆ ಎಂಬುದು ನಿಖರವಾಗಿ ತಿಳಿದುಬಂದಿಲ್ಲ.

ಎನ್ಐಎ ದಾಳಿಯ ಮಾಹಿತಿ ಪಡೆದ ಪಿಎಫ್ಐ ಮುಖಂಡರು ಹಾಗೂ ಕಾರ್ಯಕರ್ತರು ಅಯೂಬ್ ಅಗ್ನಾಡಿಯವರ ಮನೆಗೆ ದೌಡಾಯಿಸಿದ್ದು, ಎನ್ಐಎ ದಾಳಿಗೆ ವಿರೋಧ ವ್ಯಕ್ತಪಡಿಸಿದರು. ಬಳಿಕ ಪೊಲೀಸರು ಅವರನ್ನು ಸಮಾಧಾನಿಸಿದರು. ಪರಿಶೀಲನೆ ಮುಗಿದ ಬಳಿಕ ಎನ್ಐಎ ತಂಡ ಸ್ಥಳದಿಂದ ತೆರಳಿದ್ದು, ಬಳಿಕ ಪಿಎಫ್ಐ ಕಾರ್ಯಕರ್ತರು ಉಪ್ಪಿನಂಗಡಿ ಬಸ್ ನಿಲ್ದಾಣದ ಸಮೀಪದ ವೃತ್ತದ ಬಳಿ ಜಮಾಯಿಸಿ ಪ್ರತಿಭಟನೆ ನಡೆಸಿದರಲ್ಲದೆ, ಎನ್ಐ ಎ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here