





ಪುತ್ತೂರು:ಯಾವುದೇ ರಾಸಾಯನಿಕ ಪದಾರ್ಥಗಳಿಲ್ಲದೆ ಮನೆಯಲ್ಲಿಯೇ ತಯಾರಿಸಲಾಗುವ ರುಚಿಯಾದ ಪಾನೀಯ ‘ಕಪ್ಪು ದ್ರಾಕ್ಷೆ ಹಣ್ಣಿನ ರಸ’ ಸೆ.26ರಂದು ಬೆಳಿಗ್ಗೆ ಕುರಿಯ ಗ್ರಾಮದ ಬೂಡಿಯಾರ್ ಫಾರ್ಮ್ ಹೌಸ್‌ನಲ್ಲಿ ಪುತ್ತೂರು ಮಾರುಕಟ್ಟೆಗೆ ಬಿಡುಗಡೆಯಾಗಲಿದೆ.


ಮೈಸೂರು ಮತ್ತು ಬೆಂಗಳೂರಿನಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುವ ಕಲಬೆರಕೆ ಪದಾರ್ಥಗಳಿಲ್ಲದ ಪಾನೀಯ, ಆಲಡ್ಕ ಹೋಂ ಪ್ರೊಡಕ್ಟ್ಸ್‌ನ ಫ್ರೆಶ್ ಗ್ರೇಪ್ ಫ್ರೂಟ್ ಜ್ಯೂಸ್ ‘ಕಪ್ಪು ದ್ರಾಕ್ಷೆ ಹಣ್ಣಿನ ರಸ’ ಇದೀಗ ಪುತ್ತೂರಿನ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿದೆ.ರೈತರ ಉತ್ಪನ್ನಗಳನ್ನು ರೈತರಿಂದಲೇ ಖರೀದಿಸಿ ಸ್ವಾವಲಂಬಿಗಳನ್ನಾಗಿಸುವ ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ‘ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆ ಯೋಜನೆ(ಪಿಎಂಎಫ್ ಎಂಇ)’ಗೆ ಪೂರಕವಾಗಿ ಇದೇ ಮೊದಲ ಬಾರಿಗೆ ಈ ಭಾಗದಲ್ಲಿ ಈ ಜ್ಯೂಸ್ ತಯಾರಿಸಿ ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದೆ. ವಿದ್ಯಾರ್ಥಿ, ವಿದ್ಯಾರ್ಥಿನಿಯರ ಸಹಿತ ಯುವ ಸಮುದಾಯ ಹಾಗೂ ಅಬಾಲವೃದ್ಧರಾದಿಯಾಗಿ ಎಲ್ಲ ವಯಸ್ಸಿನವರಿಗೂ ಉಲ್ಲಾಸಭರಿತ ಆರೋಗ್ಯಕ್ಕೆ ಪೂರಕವಾದ ಕಪ್ಪು ದ್ರಾಕ್ಷೆ ಹಣ್ಣಿನ ರಸವನ್ನು ಸಕ್ಕರೆ ಕಾಯಿಲೆಯವರ ಹೊರತು ಯಾವುದೇ ಅನಾರೋಗ್ಯ ಪೀಡಿತರೂ ಸೇವಿಸಬಹುದಾಗಿದೆ.ಕೆದಂಬಾಡಿ ಗ್ರಾಮದ ಕುಕ್ಕುಂಜೋಡ್ ಹೌಸ್‌ನಲ್ಲಿ ಇದರ ತಯಾರಿಕಾ ಘಟಕವಿದ್ದು ಯಾವುದೇ ಶುಭಸಮಾರಂಭಗಳಿಗೆ ರಖಂ ದರದಲ್ಲಿಯೂ ಪೂರೈಕೆ ಮಾಡಲಾಗುತ್ತದೆ.ಆಸಕ್ತರಿಗೆ,ಜ್ಯೂಸ್ ವಿತರಣಾ ಏಜೆನ್ಸಿಯನ್ನೂ ನೀಡಲಾಗುವುದು.ಹೆಚ್ಚಿನ ಮಾಹಿತಿಗಾಗಿ ಮಹಾಬಲ ರೈ ಕುಕ್ಕುಂಜೋಡು(ಮೊ:9164991719)ಯಾ ಹರೀಶ್ ಬಿಜತ್ರೆ(ಮೊ:9880310628)ರವರನ್ನು ಸಂಪರ್ಕಿಸಬಹುದಾಗಿದೆ.












