





ಪುತ್ತೂರು : ಬೊಳುವಾರು ಓಂ ಶ್ರೀಶಕ್ತಿ ಆಂಜನೇಯ ಮಂತ್ರಾಲಯದಲ್ಲಿ ನವರಾತ್ರಿ ಉತ್ಸವ ಸೆ.26ರಿಂದ ಅ.4ರವರೆಗೆ ನಡೆಯಲಿದೆ. ಸೆ.26ರಂದು ಬೆಳಿಗ್ಗೆ ನವರಾತ್ರಿ ಕಲಶ ಪ್ರತಿಷ್ಠೆ ನಡೆದು ಪ್ರತಿದಿನ ಭಜನೆ ಹಾಗೂ ರಾತ್ರಿ 9.30ಕ್ಕೆ ಮಹಾಪೂಜೆ ನಡೆಯಲಿದೆ.








ಸೆ. 29ರಂದು ಬೊಳುವಾರು ಶ್ರೀಆಂಜನೇಯ ಮಹಿಳಾ ಯಕ್ಷಗಾನ ಸಂಘದ ವತಿಯಿಂದ ಪಂಚವಟಿ-ಖರಾಸುರ ವಧೆ ತಾಳಮದ್ದಳೆ, ಸೆ.30ರಂದು ರಾತ್ರಿ ಮೂಡಾಯೂರು ಶ್ರೀಚಂದ್ರಶೇಖರ ಬಳಗದವರಿಂದ ಸ್ಯಾಕ್ಸೋಫೋನು ವಾದನ, ಅ.1ರಂದು ಪುತ್ತೂರು ಮಹಿಳಾ ಮಂಡಳಿಯವರಿಂದ ಶ್ರೀಲಲಿತಾ ಸಹಸ್ರನಾಮ ಪಠಣ ಬಳಿಕ ಭಜನೆ, ಅ.2ರಂದು ಸಂಜೆ 4.30ರಿಂದ ಶ್ರೀಆಂಜನೇಯ ಯಕ್ಷಗಾನ ಕಲಾ ಸಂಘದ ವತಿಯಿಂದ ಯಕ್ಷಗಾನ ತಾಳಮದ್ದಳೆ “ನೀಲಧ್ವಜ-ಮಯೂರ ಧ್ವಜ, ಅ.4ರಂದು ಉರ್ಲಾಂಡಿ ಶ್ರೀಸತ್ಯನಾರಾಯಣ ಸೇವಾ ಸಮಿತಿ ಮತ್ತು ಶ್ರೀಸರಸ್ವತಿ ಭಜನಾ ಮಂಡಳಿ ನೆರವಿನೊಂದಿಗೆ ಮಂತ್ರಾಲಯಕ್ಕೆ ಉಲ್ಪೆ ತಂದು ರಾತ್ರಿ ಶ್ರೀದೇವಿಯ ಉತ್ಸವ, ಶ್ರೀಮಹಾಲಿಂಗೇಶ್ವರ ದೇವಸ್ಥಾನ, ಶ್ರೀವೆಂಕಟರಮಣ ದೇವಸ್ಥಾನ, ಮಾರ್ಕೆಟ್ ರಸ್ತೆಯಾಗಿ ಮಂತ್ರಾಲಯಕ್ಕೆ ಬಂದು ಶ್ರೀಮಹಾಶಕ್ತಿ ಪೂಜೆ ನಡೆದು ಬಳಿಕ ಪ್ರಸಾದ ವಿತರಣೆಯೊಂದಿಗೆ ನವರಾತ್ರಿ ಉತ್ಸವ ಸಂಪನ್ನಗೊಳ್ಳಲಿದೆ. ರಾತ್ರಿ ದಿ| ಗಂಗಣ್ಣ ಮತ್ತು ದಿ| ಚಂದ್ರಶೇಖರ ಸ್ಮರಣಾರ್ಥ ಬಾಲಕೃಷ್ಣ (ಬಾಲಣ್ಣ) ಮತ್ತು ಬಳಗದವರಿಗಂದ ತಾಲೀಮು ಮತ್ತು ಬೆಂಕಿಯಾಟ ಪ್ರದರ್ಶನ, ಹುಲಿಯಾಟ ಪ್ರದರ್ಶನ ಹಾಗೂ ರಾತ್ರಿ 9.30ಕ್ಕೆ ಬೊಳುವಾರು ಸಾಂಸ್ಕೃತಿಕ ಕಲಾ ಕೇಂದ್ರದ ವತಿಯಿಂದ ಬಾರಿಸು ಕನ್ನಡ ಡಿಂಡಿಮ ಕಾರ್ಯಕ್ರಮ ನಡೆಯಲಿದೆ. ಸೆ.5ರಂದು ಬೆಳಿಗ್ಗೆ 8.15ಕ್ಕೆ ಕಲಶ ವಿಸರ್ಜನೆ ನಡೆಯಲಿದೆ.







