ಉಪ್ಪಿನಂಗಡಿ: ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದಲ್ಲಿ ಸೆ.26ರಿಂದ ಅ. 6ರ ತನಕ ನವರಾತ್ರಿ ಪೂಜೆ ಹಾಗೂ ವಿಶೇಷವಾಗಿ ನವದುರ್ಗಾ ಕಲ್ಪೋಕ್ತವಿಧಿ ಪೂಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕರುಣಾಕರ ಸುವರ್ಣ ಮತ್ತು ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೆ. 26ರಿಂದ ಆರಂಭಗೊಂಡು 9 ದಿನಗಳಲ್ಲಿ ನವರಾತ್ರಿ ಪೂಜೆ ನಡೆಯಲಿದೆ. ಇದರ ಸಲುವಾಗಿ ಮಕ್ಕಳ ಧಾರ್ಮಿಕ ಶಿಕ್ಷಣ ಹಾಗೂ ವಿಶೇಷ ಧಾರ್ಮಿಕ ಪ್ರವಚನ ನಡೆಯಲಿದೆ. ಸೆ. 26ರಂದು ಶ್ರೀ ಶೈಲಪುತ್ರಿ, ೨೭-ಶ್ರೀ ಬ್ರಹ್ಮಚಾರಿಣಿ, ೨೮-ಶ್ರೀ ಚಂದ್ರಘಂಟಾ, ೨೯-ಶ್ರೀ ಕೂಷ್ಮಾಂಡಾ, ೩೦-ಶ್ರೀ ಸ್ಕಂದಮಾತಾ, ಅ. 1ರಂದು ಶ್ರೀ ಕಾತ್ಯಾಯಿನೀ, ೨-ಶ್ರೀ ಕಾಲರಾತ್ರೀ, ೩-ಶ್ರೀ ಮಹಾಗೌರೀ, ೪-ಶ್ರೀ ಸಿದ್ಧಿದಾತ್ರೀ, ೫-ಶ್ರೀ ಮಹಾಸರಸ್ವತೀ ನವರಾತ್ರಿ ಪ್ರವಚನಮಾಲಾ ನಡೆಯಲಿದೆ. ಹಾಗೂ ಸೆ. ೨೬ರಂದು ರಾತ್ರಿ ಮಂಗಳೂರುನ ಪ್ರಖ್ಯಾತ ಹುಲಿ ಕುಣಿತ ತಂಡದಿಂದ ಹುಲಿ ಕುಣಿತ ಕಾರ್ಯಕ್ರಮವೂ ಇರುವುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Home ಗ್ರಾಮವಾರು ಸುದ್ದಿ ಸೆ. 26ರಿಂದ ಅ. 6: ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದಲ್ಲಿ ನವರಾತ್ರಿ ಪೂಜೆ,...