




ಡಿ.24 – ಡಿ.26ವರ್ಷಾವಧಿ ಜಾತ್ರೋತ್ಸವ



ವಿಟ್ಲ: ಇಡ್ಕಿದು ಗ್ರಾಮದ ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಡಿ.24ರಿಂದ ಡಿ.26ರ ವರೆಗೆ ನಡೆಯಲಿರುವ ವರ್ಷಾವಧಿ ಜಾತ್ರೋತ್ಸವದ ಪ್ರಯುಕ್ತ ಡಿ.16ರಂದು ಗೊನೆಮುಹೂರ್ತ ನಡೆಯಿತು. ದೇವಾಲಯದ ಪ್ರಧಾನ ಅರ್ಚಕರಾದ ಗೋವಿಂದ ಜೋಯಿಸರವರು ವಿಧಿವಿಧಾನ ನೆರವೇರಿಸಿದರು. ಅರ್ಚಕರಾದ ಗೋಪಾಲಕೃಷ್ಣ ಭಟ್ ರವರು ಸಹಕರಿಸಿದರು.





ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಪ್ರಕಾಶ್ ಕೆ.ಎಸ್.ಉರಿಮಜಲು, ಮಾಜಿ ಅಧ್ಯಕ್ಷ ರಾದ ಸುರೇಶ ಕೆ.ಎಸ್. ಕೆ ಮುಕ್ಕುಡ, ಗುತ್ತುಮನೆತನದ ಪಿ. ರಾಜರಾಮ ಶೆಟ್ಟಿ ಕೋಲ್ಪೆ ಗುತ್ತು, ರಮೇಶ್ ಭಟ್ ಭಂಡಾರಮನೆ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸುರೇಶ್ ಪೂಜಾರಿ ಸೂರ್ಯ, ಶಶಿಧರ ಭಂಡಾರಿ, ರಮೇಶ್ ಪೂಜಾರಿ ಸೂರ್ಯ, ಹರೀಶ್ ದೇವಸ್ಯ, ಇಡ್ಕಿದು ಸೇವಾಸಹಕಾರಿ ಸಂಘದ ನಿರ್ದೇಶಕರಾದ ಲೋಹಿತಾಶ್ವ, ಗುರಿಕಾರರಾದ ವಿಜಯ ಕುಮಾರ್ ಸೂರ್ಯ, ಸುಂದರ ಗೌಡ ಕೊಪ್ಪಳ, ಜಗದೀಶ್ ದೇವಸ್ಯ, ಶಿವಪ್ರಸಾದ್ ಕೂವೆತ್ತಿಲ,
ಪ್ರಮುಖರಾದ ಪ್ರಪುಲ್ಲ ಚಂದ್ರ ಪಿ.ಜಿ., ಕೆ.ವೆಂಕಟರಮಣ ಭಟ್ ಸೂರ್ಯ, ಚಂದ್ರಶೇಖರ ಕಂಬಳಿ, ದೇಜಪ್ಪ ಕೋಲ್ಪೆ, ಜಯಂತ ಕೋಲ್ಪೆ, ಮಂಜುನಾಥ ದರ್ಭೆ, ಜಯಂತ ಕೋಲ್ಪೆ, ಈಶ್ವರ ಕೊಪ್ಪಳ, ಉಮೇಶ್ ಮಡಿವಾಳ, ಆನಂದ ದೇವಸ್ಯ, ರಾಮಣ್ಣ ಕೊಡಂಗೆ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.









