ಪಡ್ಡಾಯೂರು ಅನ್ನಪೂರ್ಣೇಶ್ವರಿ ಭಜನಾ ಮಂದಿರದಲ್ಲಿ ನವರಾತ್ರಿ ಉತ್ಸವ, ಹೊರಾಂಗಣ ಛಾವಣಿ ಲೋಕಾರ್ಪಣೆ

0

ಪುತ್ತೂರು:ಪಡ್ಡಾಯೂರು ಶ್ರೀ ಅನ್ನಪೂರ್ಣೇಶ್ವರಿ ಭಜನಾ ಮಂದಿರದಲ್ಲಿ ನವರಾತ್ರಿ ಉತ್ಸವವು ಸೆ.26ರಿಂದ ಪ್ರಾರಂಭಗೊಂಡು ಅ.4ರ ತನಕ ವೇ.ಮೂ ಹರಿಪ್ರಸಾದ್ ಭಟ್ ಬನಾರಿಯವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿರುವ ನವರಾತ್ರಿ ಉತ್ಸವವು ಸೆ.26ರಂದು ಪ್ರಾರಂಭಗೊಂಡಿತು.

ಬೆಳಿಗ್ಗೆ ಮಹಾಗಣಪತಿ ಹವನದೊಂದಿಗೆ ನವರಾತ್ರಿ ಉತ್ಸವಗಳಿಗೆ ಚಾಲನೆ ದೊರೆಯಿತು. ಸಂಜೆ ಭಜನೆ, ರಾತ್ರಿ ಶ್ರೀದೇವಿಗೆ ಮಹಾಮಂಗಳಾರತಿ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.

ಛಾವಣಿ ಲೋಕಾರ್ಪಣೆ:

ಸಂಜೆ ನಡೆದ ಕಾರ್ಯಕ್ರಮದಲ್ಲಿ ಭಜನಾ ಮಂದಿರದ ಹೊರಾಂಗಣದಲ್ಲಿ ನೂತನವಾಗಿ ಅಳವಡಿಸಲಾದ ಛಾವಣಿಯ ಲೋಕಾರ್ಪಣೆ ನಡೆಯಿತು. ನಗರ ಸಭಾ ಅಧ್ಯಕ್ಷ ಜೀವಂಧರ್ ಜೈನ್ ರಿಬ್ಬನ್ ಕತ್ತರಿಸಿ ತೆಂಗಿನಕಾಯಿ ಒಡೆಯುವುದರ ಮೂಲಕ ಲೋಕಾರ್ಪಣೆಗೊಳಿಸಿದರು. ಬಳಿಕ ಮಾತನಾಡಿ ಅವರು, ಬಹಳಷ್ಟು ಉತ್ತಮ ರೀತಿಯಲ್ಲಿ ಛಾವಣಿಯನ್ನು ಅಳವಡಿಸಲಾಗಿದ್ದು ಮಂದಿರದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಿಗೂ ಅನುಕೂಲಕರವಾಗಲಿದೆ ಎಂದರು.

ಭಜನಾ ಮಂದಿರದ ಗೌರವಾಧ್ಯಕ್ಷ ಕುಶಲಪ್ಪ ಗೌಡ ಅಧ್ಯಕ್ಷ ಗಣೇಶ್ ಗೌಡ, ಮಾಜಿ ಅಧ್ಯಕ್ಷ ಮೋಹನ್ ನೆಲಪ್ಪಾಲು ಉಪಾಧ್ಯಕ್ಷ ಸಾರೀಶ್ ನಾಯ್ಕ್ ಕಾರ್ಯದರ್ಶಿ ಯತೀಶ್ ಅಮೀನ್ ಕೋಶಾಧಿಕಾರಿ ರವಿಚಂದ್ರ ಮದಗ ಜನಾರ್ದನ ದೇವಸ್ಥಾನ ವ್ಯವಸ್ಥಾಪನ ಸಮಿತಿ ಸದಸ್ಯ ಮಧುಸೂದನ, ಭಜನಾ ಮಂದಿರದ ಅರ್ಚಕರಾದ ಸಂತೋಷ ಶೆಣೈ ಸದಸ್ಯರಾದ ನವೀನ್ ನಾಯ್ಕ್, ಜಗನ್ನಾಥ್ ನಾಯ್ಕ್, ವಸಂತ ನೆಲಪಾಲ್, ಆಕಾಶ್, ಪ್ರದೀಪ್, ರಾಮಣ್ಣ ಗೌಡ , ಶ್ರೀಧರ ಯು.ಕೆ, ಸಂತೋಷ್ ಪರ್ಲಡ್ಕ , ಶ್ರೀಧರ ಪೂಜಾರಿ, ಹರೀಶ್ ಪೂಜಾರಿ, ಮನೋಜ್ ಶೆಟ್ಟಿ ಪಡ್ಡಾಯೂರು ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.‌

ನವರಾತ್ರಿ ಉತ್ಸವದಲ್ಲಿ….!
ನವರಾತ್ರಿ ಉತ್ಸವದಲ್ಲಿ ಪ್ರತಿದಿನ ಸಂಜೆ ೭ ಗಂಟೆಯಿಂದ ವಿವಿಧ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ, ರಾತ್ರಿ ೮.೪೫ಕ್ಕೆ ಶ್ರೀ ದೇವಿಗೆ ಮಹಾಮಂಗಳಾರತಿ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಅ.೩ರಂದು ಸಂಜೆ ೫ ಗಂಟೆಯಿಂದ ಆಯುಧ ಪೂಜೆ ನಡೆಯಲಿದೆ. ಅ.೪ರಂದು ಮಧ್ಯಾಹ್ನ ಸಭಾ ಕಾರ್ಯಕ್ರಮ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಭಜನಾ ಮಂದಿರದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here