ಕೆಜೆಹಳ್ಳಿಯಲ್ಲಿ ನಡೆದ ಪ್ರಕರಣ ಬೆಂಗಳೂರು ಪೊಲೀಸರಿಂದ ಮಿತ್ತೂರಿನ ಫ್ರೀಡಂ ಕಮ್ಯೂನಿಟಿ ಹಾಲ್‌ನಲ್ಲಿ ಆರೋಪಿಯ ಮಹಜರು

0

ವಿಟ್ಲ: ಬೆಂಗಳೂರಿನ ಕೆಜೆಹಳ್ಳಿಯಲ್ಲಿ ನಡೆದ ಪ್ರಕರಣವೊಂದಕ್ಕೆ ಸಂಬಂಧಿಸಿ ಬಂಧಿತ ಆರೋಪಿಯನ್ನು ಬೆಂಗಳೂರಿನ ಬೈಯಪ್ಪನಹಳ್ಳಿ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ರವರ ನೇತೃತ್ವದ ಪೊಲೀಸರ ತಂಡ ಇಡ್ಕಿದು ಗ್ರಾಮದ ಮಿತ್ತೂರಿನಲ್ಲಿರುವ ಫ್ರೀಡಂ ಕಮ್ಯೂನಿಟಿ ಹಾಲ್‌ಗೆ ಸೆ.೩೦ರಂದು ಕರೆತಂದು ಮಹಜರು ನಡೆಸಿದೆ.

ಬೆಂಗಳೂರಿನ ಕೆ.ಜೆ. ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ದ.ಕ. ಜಿಲ್ಲೆಯ ಕೆಲವರ ಸಹಿತ ರಾಜ್ಯದ ಹಲವರನ್ನು ಏಕ ಕಾಲದಲ್ಲಿ ದಾಳಿ ನಡೆಸಿದ ಪೊಲೀಸರ ತಂಡ ಬಂಧಿಸಿತ್ತು. ಬಂಽತರ ಪೈಕಿ ಉಪ್ಪಿನಂಗಡಿ ಸಮೀಪ ನಿವಾಸಿಯಾಗಿರುವ ಆಯ್ಯೂಬ್ ಅಗ್ನಾಡಿ ಎಂಬಾತನನ್ನು ತನಿಖಾಧಿಕಾರಿಗಳು ವಿಚಾರಣೆ ನಡೆಸಿದಾಗ ಇಡ್ಕಿದು ಗ್ರಾಮದ ಮಿತ್ತೂರಿನಲ್ಲಿರವ ಫ್ರೀಡಂ ಕಮ್ಯೂನಿಟಿ ಹಾಲ್‌ನ ಬಗ್ಗೆ ಹಾಗೂ ಅಲ್ಲಿ ನಡೆಯುತ್ತಿದ್ದ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದ್ದನೆನ್ನಲಾಗಿದೆ. ಈ ಕಮ್ಯುನಿಟಿ ಹಾಲ್‌ನಲ್ಲಿ ನಡೆಯುತ್ತಿರವ ಚಟುವಟಿಕೆಗಳಿಗೂ ಬಂಽತ ಆಯೂಬ್ ಅಗ್ನಾಡಿಯವರಿಗೂ ಸಂಬಂಧವಿರುವ ಹಿನ್ನೆಲೆಯಲ್ಲಿ ಆತನನ್ನು ಸ್ಥಳಕ್ಕೆ ಕರೆತಂದಿರುವ ಬೆಂಗಳೂರಿನ ಬೈಯಪ್ಪನಹಳ್ಳಿ ಪೊಲೀಸರ ತಂಡ ಮಿತ್ತೂರಿನ ಫ್ರೀಡಂ ಕಮ್ಯೂನಿಟಿ ಹಾಲ್ ನಲ್ಲಿ ಮಹಜರು ನಡೆಸಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಈ ವೇಳೆ ವಿಟ್ಲ ಠಾಣಾ ಇನ್ಸ್ ಪೆಕ್ಟರ್ ಹೆಚ್.ಈ. ನಾಗರಾಜ್ ರವರ ನೇತೃತ್ವದ ಪೊಲೀಸರ ತಂಡ ಬಂದೋಬಸ್ತ್ ಏರ್ಪಡಿಸಿತ್ತು.

ಎನ್‌ಐಎ ದಾಳಿ-ವರದಿ: ಪುತ್ತೂರಿನ ಫ್ರೀಡಂ ಕಮ್ಯೂನಿಟಿ ಹಾಲ್‌ನಲ್ಲಿ ಪಿಎ-ಐ ಕಾರ್ಯಕರ್ತರಿಗೆ ತರಬೇತಿ ನೀಡಲಾಗುತ್ತಿತ್ತು ಮತ್ತು ಅಕ್ರಮ ಚಟುವಟಿಕೆಗಳ ಕುರಿತು ಇಲ್ಲಿ ಯೋಜನೆ ರೂಪಿಸಲಾಗುತ್ತಿದ್ದ ಹಿನ್ನಲೆಯಲ್ಲಿ ಎನ್‌ಐಎ ತಂಡ ಮಿತ್ತೂರಿನ ಪ್ರೀಡಂ ಕಮ್ಯೂನಿಟಿ ಹಾಲ್‌ಗೆ ದಾಳಿ ನಡೆಸಿ ಟ್ರಸ್ಟಿಯೊಬ್ಬನನ್ನು ಬಂಽಸಿದ್ದಾರೆ ಎಂದು ಆರಂಭದಲ್ಲಿ ಸುದ್ದಿಯಾಗಿತ್ತು.

ಜಿಲ್ಲಾಧಿಕಾರಿ ಆದೇಶದಂತೆ ಫ್ರೀಡಂ ಕಮ್ಯೂನಿಟಿ ಹಾಲ್‌ಗೆ ಬೀಗ

ದೇಶದಲ್ಲಿ ಪಿಎಫ್‌ ಐ, ಅದರ ಅಂಗ ಸಂಸ್ಥೆಗಳನ್ನು ಐದು ವರ್ಷದವರೆಗೆ ಬ್ಯಾನ್ ಮಾಡಿರುವ ಹಿನ್ನೆಲೆಯಲ್ಲಿ ಇಡ್ಕಿದು ಗ್ರಾಮದ ಮಿತ್ತೂರಿನಲ್ಲಿರುವ ಫ್ರೀಡಂ ಕಮ್ಯೂನಿಟಿ ಹಾಲ್ ಗೆ ಜಿಲ್ಲಾಧಿಕಾರಿಯವರ ಆದೇಶದಂತೆ ಬೀಗಜಡಿಯಲಾಗಿದೆ. ಅಕ್ರಮ ಚಟುವಟಿಕೆಗಳಿಗೆ ಪಿಎಫ್‌ ಐ ಸಂಘಟನೆಯ ಕಾರ್ಯಕರ್ತರಿಗೆ ಈ ಕಮ್ಯೂನಿಟಿ ಹಾಲ್ ನಲ್ಲಿ ತರಬೇತಿ ನೀಡಲಾಗಿತ್ತು ಎನ್ನುವ ಆರೋಪ ಕೇಳಿಬಂದಿರುವ ಹಾಗೂ ಕೆ.ಜೆ.ಹಳ್ಳಿ ಪೊಲೀಸರಿಂದ ಬಂಧಿಸಲ್ಪಟ್ಟ ಆರೋಪಿಗಳು ನೀಡಿದ ಮಾಹಿತಿಯಂತೆ ಈ ಹಾಲ್ ಗೆ ಬೀಗಜಡಿಯಲಾಗಿದೆ ಎಂದು ತಿಳಿದು ಬಂದಿದೆ. ವಿಟ್ಲ ನಾಡಕಚೇರಿಯಲ್ಲಿರುವ ಉಪತಹಶೀಲ್ದಾರ್ ವಿಜಯವಿಕ್ರಮ, ವಿಟ್ಲ ಠಾಣಾ ಇನ್ಸ್ ಪೆಕ್ಟರ್ ಹೆಚ್.ಈ. ನಾಗರಾಜ್ ಹಾಗೂ ಎಸ್.ಐ. ಸಂದೀಪ್, ಸಿಬ್ಬಂದಿಗಳು ಹಾಲ್‌ಗೆ ಬೀಗ ಮುದ್ರೆ ಹಾಕಿದ್ದಾರೆ.

LEAVE A REPLY

Please enter your comment!
Please enter your name here