ಉಪ್ಪಿನಂಗಡಿ: ಇಲ್ಲಿನ ರಾಮನಗರದ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಯ ವತಿಯಿಂದ 28ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವವು ಅ.2ರಿಂದ ಅ.5ರವರೆಗೆ ರಾಮನಗರದ ಶ್ರೀ ಶಾರದಾ ಕಲಾ ಮಂಟಪದಲ್ಲಿ ವಿಜೃಂಭಣೆಯಿಂದ ನಡೆಯಲಿದೆ.
ಅ.2ರಂದು ಬೆಳಗ್ಗೆ 7ಕ್ಕೆ ಗಣಹೋಮ ನಡೆದು, ಸಂಜೆ 6:30ಕ್ಕೆ ಶ್ರೀ ಶಾರದಾ ಮಾತೆಯ ಪ್ರತಿಷ್ಠೆ ನಡೆಯಲಿದೆ. 6:45ಕ್ಕೆ ರಾಮನಗರದ ಶ್ರೀ ಶಾರದಾ ವನಿತಾ ಭಜನಾ ಮಂಡಳಿಯ ಸದಸ್ಯರಿಂದ ಭಜನಾ ಕಾರ್ಯಕ್ರಮ, 8ಕ್ಕೆ ರಾತ್ರಿ ಪೂಜೆ ನಡೆದು ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 8:30ಕ್ಕೆ ಉಪ್ಪಿನಂಗಡಿಯ `ಗಯಾಪದ ಕಲಾವಿದೆರ್ ಉಬಾರ್’ ಇವರಿಂದ `ಏತ್ ಪಂಡಲಾ ಆತೆ…’ ನಾಟಕ ಪ್ರದರ್ಶನ ನಡೆಯಲಿದೆ. ಅ.3ರಂದು ಬೆಳಗ್ಗೆ 9ಕ್ಕೆ ರಾಮನಗರದ ಶ್ರೀ ಸತ್ಯಸಾರಮಣಿ ಸೇವಾ ಸಮಿತಿಯಿಂದ ಭಜನಾ ಕಾರ್ಯಕ್ರಮ, 10ಕ್ಕೆ ನಂದಿನಿನಗರದ ಶ್ರೀ ನಂದಿಕೇಶ್ವರ ಭಜನಾ ಮಂದಿರದ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆದು, 11ಕ್ಕೆ ಸರಸ್ವತಿ ಹವನ, 11:15ಕ್ಕೆ ಡಾ. ಕೃಷ್ಣಪ್ರಸಾದ್ ದೇವಾಡಿಗರಿಂದ `ಸ್ಯಾಕ್ಸೋಫೋನ್ ವಾದನ’ ನಡೆದು 12:30ಕ್ಕೆ ಪೂರ್ಣಾಹುತಿ, ಮಹಾಪೂಜೆ ನಡೆಯಲಿದೆ. ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 1:30ರಿಂದ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯೊಂದಿಗೆ ಡಿ.ಪಿ. ಮ್ಯೂಸಿಕಲ್ ಇವರಿಂದ ಸಂಗೀತ ರಸಮಂಜರಿ (ಕರೋಕೆ) ನಡೆಯಲಿದೆ. ಸಂಜೆ 4ಕ್ಕೆ ಭಕ್ತಿಗೀತೆ ಸ್ಪರ್ಧೆ, ಸಂಜೆ 6ಕ್ಕೆ ಶ್ರೀ ನಂದಿಕೇಶ್ವರ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ, 7ಕ್ಕೆ ಕಲ್ಲೇಗ ಶಿವನಗರದ ಶ್ರೀ ಶಿವಮಣಿ ಭಜನಾ ತಂಡದಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ರಾತ್ರಿ 8ಕ್ಕೆ ರಾತ್ರಿ ಪೂಜೆ ನಡೆಯಲಿದೆ. ರಾತ್ರಿ 8:15ರಿಂದ ರಾಮನಗರ ನಿವಾಸಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಅ.4ರಂದು ಸಂಜೆ 6ಕ್ಕೆ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಹಾಗೂ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ, ಗಾಣಿಗ ಸಮುದಾಯ ಭವನ ಶಾಖೆಯ ಯೋಗ ಬಂಧುಗಳಿಂದ ಶ್ರೀ ದುರ್ಗಾ ಯೋಗ ನಮಸ್ಕಾರ ನಡೆಯಲಿದೆ. ಬೆಳಗ್ಗೆ 9ಕ್ಕೆ ರಾಮಕುಂಜದ ಶ್ರೀ ಗುರು ಸಾರ್ವಭೌಮ ಮಹಿಳಾ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ, 9:30ಕ್ಕೆ ಶ್ರೀ ಶಾರದಾ ಮಾತೆಯ ಚಿತ್ರ ಬಿಡಿಸುವ ಸ್ಪರ್ಧೆ, ರಂಗೋಲಿ ಸ್ಪರ್ಧೆ, 10ಕ್ಕೆ ಕರಾಯ ಶ್ರೀ ಕೃಷ್ಣ ಭಜನಾ ಮಂಡಳಿಯವರಿಂದ ಭಜನಾ ಸೇವೆ, 11ಕ್ಕೆ ಪುತ್ತೂರಿನ ಶ್ರೀ ಲಕ್ಷೀವೆಂಕಟರಮಣ ಮಹಿಳಾ ಭಜನಾ ಮಂಡಳಿಯವರಿಂದ ಭಜನಾ ಸೇವೆ, 12ಕ್ಕೆ ವೇದಶಂಕರ ನಗರದ ಶ್ರೀ ರಾಮ ಶಾಲೆಯ ವಿದ್ಯಾರ್ಥಿಗಳಿಂದ ಭಜನಾ ಕಾರ್ಯಕ್ರಮ ನಡೆದು, 1 ಗಂಟೆಗೆ ಮಹಾಪೂಜೆಯಾಗಿ, ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 1:30ಕ್ಕೆ ಉಪ್ಪಿನಂಗಡಿಯ ಶ್ರೀ ಕಾಳಿಕಾಂಬಾ ಯಕ್ಷಗಾನ ಕಲಾ ಸಂಘ ಉಪ್ಪಿನಂಗಡಿ ಇವರಿಂದ `ತರಣಿ ಸೇನಾ ಕಾಳಗ’ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಸಂಜೆ 4ಕ್ಕೆ ಶ್ರೀ ದುರ್ಗಾಗಿರಿ ಭಜನಾ ಮಂಡಳಿಯ ವತಿಯಿಂದ ಭಜನಾ ಕಾರ್ಯಕ್ರಮ, 5ಕ್ಕೆ ಕೋಡಿಂಬಾಡಿ ಅಶ್ವತ್ಥಕಟ್ಟೆಯ ಧರ್ಮಶ್ರೀ ಭಜನಾ ಮಂದಿರ ವತಿಯಿಂದ ಭಜನಾ ಕಾರ್ಯಕ್ರಮ, 6ಕ್ಕೆ ಕೊಣಾಲು ತಿರ್ಲೆಯ ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿಯ ವತಿಯಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ರಾತ್ರಿ 7ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಯ ಅಧ್ಯಕ್ಷ ರಾಮಚಂದ್ರ ಮಣಿಯಾಣಿ ಅಧ್ಯಕ್ಷತೆ ವಹಿಸಲಿದ್ದಾರೆ. ಉಪನ್ಯಾಸಕ ಮಹಾವೀರ ಜೈನ್ ಇಚ್ಲಂಪಾಡಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಕೆ. ವೆಂಕಟ್ರಮಣ ಪ್ರಸಾದ್, ಬಿಎಸ್ಎಫ್ ನಿವೃತ್ತ ಕಮಾಂಡೆಂಟ್ ಡಿ. ಚಂದಪ್ಪ ಮೂಲ್ಯ ಭಾಗವಹಿಸಲಿದ್ದಾರೆ. ಗೌರವ ಉಪಸ್ಥಿತರಾಗಿ ಮಾರುತಿಪುರ ರೈತಬಂಧುವಿನ ಶಿವಶಂಕರ್ ನಾಯಕ್, ಶ್ರೀ ದುರ್ಗಾ ಟೆಕ್ಸ್ಟೈಲ್ಸ್ ಮತ್ತು ರೆಡಿವರ್ಸ್ ಸಮೂಹ ಸಂಸ್ಥೆಗಳ ನಿರ್ದೇಶಕ ಮೋಹನ್ ಚೌಧರಿ ಇರಲಿದ್ದಾರೆ. ರಾತ್ರಿ 8ಕ್ಕೆ ಪೂಜೆಯಾಗಿ 8:15ರಿಂದ ಪುಂಜಾಲಕಟ್ಟೆಯ ತಾಂಬೂಲ ಕಲಾವಿದರಿಂದ `ಇಂಚಲಾ ಉಂಡಾ…’ ತುಳು ನಾಟಕ ನಡೆಯಲಿದೆ.
ಅ.5ರಂದು ಬೆಳಗ್ಗೆ 9ಕ್ಕೆ 34 ನೆಕ್ಕಿಲಾಡಿಯ ಜನನಿ ರಾಷ್ಟç ಸೇವಿಕ ಸಮಿತಿಯ ವತಿಯಿಂದ ಭಜನಾ ಕಾರ್ಯಕ್ರಮ, 10ರಿಂದ ಮೂರು ವರ್ಷ ಮೇಲ್ಪಟ್ಟ ಮಕ್ಕಳಿಗೆ ಶ್ರೀ ದೇವಿಯ ಮುಂದೆ ಪ್ರಥಮ ಅಕ್ಷರ ಅಭ್ಯಾಸ ಕಲಿಕೆ ನಡೆಯಲಿದೆ. ಮಧ್ಯಾಹ್ನ 11:30ರಿಂದ ಅಲಗುರಿಮಜಲಿನ ಶ್ರೀ ಸರಸ್ವತಿ ಮಹಿಳಾ ಭಜನಾ ಮಂಡಳಿ ಇವರಿಂದ ಭಜನಾ ಕಾರ್ಯಕ್ರಮ, 12:30ಕ್ಕೆ ಮಹಾಪೂಜೆ, 1ರಿಂದ ಉದಯಗಿರಿಯ ಶ್ರೀ ಉಮಾಮಹೇಶ್ವರ ಭಜನಾ ಮಂಡಳಿಯಿAದ ಭಜನಾ ಕಾರ್ಯಕ್ರಮ, 1:15ರಿಂದ ಅನ್ನಸಂತರ್ಪಣೆ (ಹೊಸ ಅಕ್ಕಿ ಊಟ) ಮಧ್ಯಾಹ್ನ 3ರಿಂದ ಉಪ್ಪಿನಂಗಡಿ ಶ್ರೀ ಕಾಳಿಕಾಂಬಾ ಭಜನಾ ಮಂಡಳಿಯ ವತಿಯಿಂದ ಭಜನಾ ಕಾರ್ಯಕ್ರಮ, 4ರಿಂದ ಉಪ್ಪಿನಂಗಡಿಯ ಶ್ರೀ ಲಕ್ಷ್ಮೀ ವೆಂಕಟರಮಣ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಸಂಜೆ 5ಕ್ಕೆ ಶ್ರೀ ಶಾರದಾ ದೇವಿಯ ಭವ್ಯ ಶೋಭಾಯಾತ್ರೆ ನಡೆದು, ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ಸನ್ನಿಧಿಯ ಸಂಗಮ ಕ್ಷೇತ್ರದಲ್ಲಿ ಶ್ರೀ ದೇವಿಯ ವಿಗ್ರಹದ ಜಲಸ್ತಂಭನ ನಡೆಯಲಿದೆ. ಬಳಿಕ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ವಠಾರದಲ್ಲಿ ಅನ್ನಸಂತರ್ಪಣೆ ನಡೆಯಲಿದೆ.