ಮಂಗಳೂರು: ಅಟಲ್ ಇನ್ಕ್ಯುಬೇಶನ್ ಸೆಂಟರ್, ನಿಟ್ಟೆ ಮತ್ತು ಕರ್ಣಾಟಕ ಬ್ಯಾಂಕ್ ವತಿಯಿಂದ ನಗರದಲ್ಲಿ ಇತ್ತೀಚೆಗೆ ನಡೆದ ಎಂಎಸ್ಎಂಇ ಕಾನ್ಕ್ಲೇವ್ನಲ್ಲಿ ನಗರದ ಎಂ.ಜಿ. ರಸ್ತೆಯ ಬಳ್ಳಾಲ್ಭಾಗ್ನಲ್ಲಿರುವ ಪ್ರತಿಷ್ಠಿತ “ವರ್ಟೆಕ್ಸ್ ವರ್ಕ್ಸ್ಪೇಸ್” ಸಂಸ್ಥೆಗೆ ಬೆಸ್ಟ್ ಇನ್ನೋವೇಟಿವ್ ಎಂಟರ್ಪ್ರೈಸ್ ಅವಾರ್ಡ್ 2022 ಪ್ರದಾನ ಮಾಡಲಾಯಿತು.
ಸಂಸ್ಥೆಯ ಪಾಲುದಾರರಾದ ಗುರುದತ್ತ ಶೆಣೈ, ಮಹೇಶ್ ಶೆಟ್ಟಿ ಹಾಗೂ ಮಂಗಳದೀಪ್ ಅವರು ಕರ್ಣಾಟಕ ಬ್ಯಾಂಕ್ ಎಂ.ಡಿ. ಹಾಗೂ ಸಿಇಒ ಮಹಾಬಲೇಶ್ವರ ಎಂ.ಎಸ್. ಮತ್ತು ನಿಟ್ಟೆ ಡೀಮ್ಡ್ ವಿವಿ ಕುಲಪತಿ ಡಾ. ಸತೀಶ್ ಕುಮಾರ್ ಭಂಡಾರಿ ಅವರಿಂದ ಪ್ರಶಸ್ತಿ ಸ್ವೀಕರಿಸಿದರು. ನಾವೀನ್ಯತೆ, ನಾಯಕತ್ವ, ಸಮರ್ಪಣೆ ಮತ್ತು ಬದ್ಧತೆಯನ್ನು ಗುರುತಿಸಿ ವರ್ಟೆಕ್ಸ್ ವರ್ಕ್ಸ್ಪೇಸ್ ಸಂಸ್ಥೆಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಇತ್ತೀಚಿಗೆ ರಾಜ್ಯ ಸರ್ಕಾರ “ಕರ್ನಾಟಕ ಡಿಜಿಟಲ್ ಇಕಾನಮಿ ಮಿಷನ್” ಕಾರ್ಯಕ್ರಮ ಯೋಜನೆಯನ್ನು ಸ್ಮಾರ್ಟ್ ಸಿಟಿ ಮಂಗಳೂರು ನಗರಕ್ಕೂ ವಿಸ್ತರಣೆ ಮಾಡುವಂತೆ ಘೋಷಿಸಿತ್ತು. ಕೊವಿಡ್ನಿಂದಾಗಿ ಹಲವಾರು ಕಾರ್ಪೋರೇಟ್ ಹಾಗೂ ಐಟಿ ಸಂಸ್ಥೆಗಳು ತಮ್ಮ ಕಾರ್ಯವ್ಯಾಪ್ತಿಯನ್ನು ವಿಸ್ತರಣೆ ಮಾಡುವ ಉದ್ದೇಶದಿಂದ ಮಂಗಳೂರಿಗೆ ಬರುವ ಯೋಜನೆಯನ್ನೂ ರೂಪಿಸಿತ್ತು. ಈ ಕಂಪನಿಗಳ ಬೇಡಿಕೆಯನ್ನು ಅಥೈಸಿಕೊಂಡ ಮುಕುಂದ್ ಎಂಜಿಎಂ ರಿಯಾಲ್ಟಿ ಸಂಸ್ಥೆ ಮಂಗಳೂರಿನಲ್ಲೇ ಪ್ರಪ್ರಥಮವಾಗಿ ವರ್ಟೆಕ್ಸ್ ವರ್ಕ್ಸ್ಪೇಸ್ ಎಂಬ ಹೊಸ ಪರಿಕಲ್ಪನೆಯನ್ನು ಪರಿಚಯಿಸಿದರು. ಕಾರ್ಪೋರೇಟ್ ಹಾಗೂ ಐಟಿ ಸಂಸ್ಥೆಗಳು ಅಗತ್ಯ ಸೌಲಭ್ಯಗಳನ್ನು ಹೊಂದಿರುವಂತಹ ಸ್ಥಳ ಹುಡುಕಾಟ ಮಾಡುವಂತ ಸಾಧ್ಯತೆ ಹೆಚ್ಚುತ್ತಿರುವುದರಿಂದ ಇಂತಹ ಕಾರ್ಯಕ್ಷೇತ್ರಕ್ಕೆ ಬೇಕಾದ ಎಲ್ಲ ಸೌಲಭ್ಯಗಳನ್ನು ನಿರಂತರವಾಗಿ ಒದಗಿಸಿಕೊಡುವ ಕೆಲಸ `ವರ್ಟೆಕ್ಸ್ ವರ್ಕ್ಸ್ಪೇಸ್’ ಪೂರೈಸಲಿದೆ. ಇಲ್ಲಿ ಕಾರ್ಯಾಚರಣೆಗೆ ಬೇಕಾದಂತಹ ಕಾಮನ್ ರಿಸೆಪ್ಷನ್ ಡೆಸ್ಕ್, ಕಾನ್ಫರೆನ್ಸ್ ರೂಮ್ಸ್, ಮೀಟಿಂಗ್ ರೂಮ್ಸ್, Wi-Fi, ಇಂಟರ್ನೆಟ್, ವಿಶಾಲವಾದ ಕಾರ್ ಪಾರ್ಕಿಂಗ್, ಪಾಂಟ್ರಿ, ಕೆಫೆ ಮುಂತಾದ ಸೌಲಭ್ಯಗಳು ಲಭ್ಯವಿವೆ. ಮಂಗಳೂರು ನಗರದಲ್ಲಿ ಇಂತಹ ಯೋಜನೆಗಳಿಗೆ ಬಹಳಷ್ಟು ಇಟಿ ಕಂಪೆನಿಗಳಿಂದ ಬೇಡಿಕೆ ಹೆಚ್ಚುತ್ತಿದ್ದು, ನಗರದ ವಿವಿಧ ಪ್ರದೇಶದಲ್ಲಿ ಇಂತಹ ಸಾಕಷ್ಟು ವಿಷಿಷ್ಟವಾದ ಸೌಲಭ್ಯಗಳನ್ನೊಳಗೊಂಡಿರುವ ಮತ್ತಷ್ಟು ಯೋಜನೆಗಳನ್ನು ಸಂಸ್ಥೆಯು ಶೀಘ್ರದಲ್ಲೇ ಪರಿಚಯಿಸಲಿದೆ ಎಂದು ಗುರುದತ್ತ ಶೆಣೈರವರು ಈ ಸಂಧರ್ಭದಲ್ಲಿ ವರದಿಗಾರರಿಗೆ ತಿಳಿಸಿದರು.
ವರ್ಟೆಕ್ಸ್ ವರ್ಕ್ ಸ್ಪೇಸ್ ಸಂಸ್ಥೆ ನಾವಿನ್ಯತೆಯೊಂದಿಗೆ ಬದ್ಧತೆಯಿಂದ ಕೆಲಸ ನಿರ್ವಹಿಸಿ ಕ್ಲಪ್ತ ಸಮಯಕ್ಕೆ ಒದಗಿಸಿಕೊಡುವ ಮೂಲಕ ಹಲವಾರು ಕಂಪೆನಿಗಳ ವಿಶ್ವಾಸಾರ್ಹತೆಯನ್ನು ಗಳಿಸಿದೆ. ಕಚೇರಿ ಹಾಗೂ ವ್ಯವಹಾರ ಸ್ಥಳಗಳನ್ನು ದೊಡ್ಡ ಕಾರ್ಪೋರೇಟ್ ಸ್ಪೇಸ್ ಆಗಿ ಸುಂದರವಾಗಿ ನಿರ್ಮಾಣ ಮಾಡುತ್ತಿದೆ. ವರ್ಟೆಕ್ಸ್ ಸಂಸ್ಥೆ ಸ್ಥಳೀಯ ಸ್ಟಾರ್ಟ್ಅಪ್ ಮತ್ತು ಕಾರ್ಪೋರೇಟ್ ಸಮುದಾಯದ ಉತ್ಪಾದಕತೆಯನ್ನು ಹೆಚ್ಚಿಸುವ ಮೂಲಕ ಸಮಗ್ರ ಅಭಿವೃದ್ಧಿಗೆ ಬದ್ಧವಾಗಿದೆ.