ನಿಡ್ಪಳ್ಳಿ; ಪಶುಪಾಲನೆ ಮತ್ತು ಪಶುವೈದ್ಯಸೇವಾ ಇಲಾಖೆ ಪಾಣಾಜೆ, ಗ್ರಾಮ ಪಂಚಾಯತ್ ಬೆಟ್ಟಂಪಾಡಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಇರ್ದೆ ಬೆಟ್ಟಂಪಾಡಿ ಗ್ರಾಮದ ಸುಮಾರು 13 ಕೇಂದ್ರಗಳಲ್ಲಿ ಹುಚ್ಚುನಾಯಿ ರೋಗದ ವಿರುದ್ಧ ಲಸಿಕೆ ಯನ್ನು ಸೆ.26 ರಂದು ಉಚಿತವಾಗಿ ನೀಡಲಾಯಿತು. ಈ ಲಸಿಕಾ ಶಿಬಿರದಲ್ಲಿ ಡಾ. ಎಂಪಿ ಪ್ರಕಾಶ್ ಮುಖ್ಯಪಶುವೈದ್ಯಾದಿಕಾರಿಗಳು, ಜಾನುವಾರು ಅಧಿಕಾರಿ ಪುಷ್ಪರಾಜ ಶೆಟ್ಟಿ , ಕೌಡಿಚ್ಚಾರು ಪಶುವೈದ್ಯ ಚಿಕಿತ್ಸಾಲಯದ ಹಿರಿಯ ಪಶು ಪರೀಕ್ಷಕ ವೀರಪ್ಪ ಜಮೇದಾರ್ ಸುಮಾರು 230 ನಾಯಿಗಳಿಗೆ ಲಸಿಕೆ ಹಾಕಿದರು.