ಕೋಡಿಂಬಾಡಿ ಶಾಲೆಯಲ್ಲಿ ನೂತನ ಕೊಠಡಿಗಳಿಗೆ ಶಂಕುಸ್ಥಾಪನೆ, ಅಭಿನಂದನಾ ಸಮಾರಂಭ

0

ಪುತ್ತೂರು;ಕೋಡಿಂಬಾಡಿ ಶಾಲೆಯಲ್ಲಿ ನೂತನ ಕೊಠಡಿಗಳಿಗೆ ಶಂಕುಸ್ಥಾಪನೆ ಹಾಗೂ ನಿವೃತ್ತ ಶಿಕ್ಷಕಿ ಲಕ್ಷ್ಮೀ ಆರ್ ರೈ, ನಿವೃತ್ತ ಯೋಧ ಪುಷ್ಪರಾಜ್ ಬಾರ್ತಿಕುಮೇರು ಹಾಗೂ ಕೃಷಿ ವಿಶ್ವವಿದ್ಯಾನಿಲಯದ ಎಂಎಸ್ಸಿಯಲ್ಲಿ ಚಿನ್ನದ ಪದಕ ವಿಜೇತೆ ವಂದನಾ ಸಾಮಂತ್‌ರವರಿಗೆ ಅಭಿನಂದನಾ ಸಮಾರಂಭವು ಸೆ.30ರಂದು ನಡೆಯಿತು.

ನೂತನ ಕೊಠಡಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ, ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಶಾಸಕ ಸಂಜೀವ ಮಠಂದೂರು ಮಾತನಾಡಿ, ಸರಕಾರಿ ಶಾಲೆಗಳ ಅಭಿವೃದ್ಧಿ ವಿಶೇಷ ಆಧ್ಯತೆ ನೀಡಲಾಗುತ್ತಿದ್ದು ಕೋಡಿಂಬಾಡಿ ಶಾಲಾ ಎರಡು ಕೊಠಡಿಗಳ ನಿರ್ಮಾಣಕ್ಕೆ ರೂ.27.80 ಲಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್‌ರವರ ನಿಧಿಯಿಂದ ರೂ.೫ ಲಕ್ಷ ಸೇರಿದಂತೆ ಒಟ್ಟು ರೂ.32ಲಕ್ಷ ಅನುದಾನ ಮಂಜೂರಾಗಿದ್ದು ಇತಿಹಾಸದಲ್ಲೇ ಪ್ರಥಮ ಬಾರಿಗೆ ಕೋಡಿಂಬಾಡಿ ಶಾಲೆ ದೊಡ್ಡ ಮೊತ್ತದ ಅನುದಾನ ಬಂದಿತ್ತದೆ ಎಂದರು. ತಾಲೂಕಿಗೆ ೩೦ ಕೊಠಡಿಗಳು ಮಂಜೂರಾಗಿದ್ದು ಈ ಪೈಕಿ 2 ಕೊಠಡಿ ಕೋಡಿಂಬಾಡಿ ಶಾಲೆಗೆ ನೀಡಲಾಗಿದೆ. ಕೋಡಿಂಬಾಡಿ ಶಾಲೆಯಲ್ಲಿ ಶಾಲೆಗಳಲ್ಲಿ ರ್‍ಯಾಂಕ್ ಪಡೆದವರು, ಸೇನೆಯಲ್ಲಿ ಸೇವೆ, ಉತ್ತಮ ಕೃಷಿಕರು ನಿರ್ಮಿಸುವ ಮೂಲಕ ಇತಿಹಾಸ ನಿರ್ಮಿಸಿರುವ ಶಾಲೆಗಳು ಮತ್ತೊಮ್ಮೆ ಇತಿಹಾಸ ನಿರ್ಮಿಸಲು ಅಲ್ಲಿಗೆ ಮೂಲಭೂತ ಸೌಲಭ್ಯಗಳು ಒದಗಿಸಲು ವಿಶೇಷ ಅನುದಾನ ನೀಡಲಾಗುತ್ತಿದೆ. ಶುದ್ದ ಕುಡಿಯುವ ನೀರಿನ ಘಟಕ, ಸ್ಮಾರ್ಟ್ ಕ್ಲಾಸ್, ಪೀಠೋಪಕರಣಗಳನ್ನು ನೀಡಲಾಗುತ್ತಿದೆ. ಸರಕಾರ ಈ ವರ್ಷ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ 30 ಕೊಠಡಿಗಳು ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ 8 ಕೊಡಿಗಳನ್ನು ನೀಡಿದ್ದಾರೆ. ಸಚಿವರಲ್ಲಿ ಒತ್ತಡ ಹಾಕಿ ೧೦ ಹೆಚ್ಚುವರಿ ಕೊಠಡಿಗಳನ್ನು ಪಡೆದುಕೊಳ್ಳಲಾಗಿದೆ ಎಂದು ಹೇಳಿದರು.

ಹಿರಿಯ ವಿದ್ಯಾರ್ಥಿ ಡಾ.ಶಿವಪ್ರಕಾಶ್ ಮಾತನಾಡಿ, ಕೋಡಿಂಬಾಡಿ ಶಾಲೆಗೆ ೬೮ ವರ್ಷಗಳ ಇತಿಹಾಸವಿದೆ. ಶಾಲೆಯ ಅಭಿವೃದ್ಧಿಗೆ ಹಿರಿಯ ವಿದ್ಯಾರ್ಥಿ ಸಂಘವನ್ನು ಸಕ್ರಿಯಗೊಳಿಸಿಕೊಂಡು ಮಾದರಿ ಶಾಲೆಯಾಗಿ ಬೆಳೆಯುವಲ್ಲಿ ಹಿರಿಯ ವಿದ್ಯಾರ್ಥಿಗಳು ಕೊಡುಗೆ ನೀಡಬೇಕು ಎಂದರು.

ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು ಮಾತನಾಡಿ, ಶಾಲೆಗೆ ಶಿಕ್ಷಕರ ಕೊರತೆ ನೀಘಿಸಲು ಉದ್ಯಮಿ ಅಶೋಕ್ ಕುಮಾರ್ ರೈಯವರಲ್ಲಿ ವಿನಂತಿಸಿದ್ದು ಟ್ರಸ್ಟ್ ನ ಮೂಲಕ ಒದಗಿಸುವ ಭರವಸೆ ನೀಡಿದ್ದಾರೆ. ಹಿರಿಯ ವಿದ್ಯಾರ್ಥಿ ಸಂಘದ ಮೂಲಕ ಶಾಲೆಗೆ ಆಟದ ಕುಟೀರ ನಿರ್ಮಿಸಿಕೊಡಲಾಗುವುದು ಎಂದು ತಿಳಿಸಿದರು.

ಸನ್ಮಾನ ಸ್ವೀಕರಿಸಿದ ಶಿಕ್ಷಕಿ ಲಕ್ಷ್ಮೀ ಆರ್.ರೈ ಮಾತನಾಡಿ, ಶಾಲೆಗಳಲ್ಲಿ ಶಿಕ್ಷಕರು ಮಕ್ಕಳಿಗೆ ಹೊಡೆಯುವುದಿಲ್ಲ. ತಪ್ಪು ಮಾಡಿದಾಗ ಮಕ್ಕಳನ್ನು ತಿದ್ದುವ ಪ್ರಯತ್ನ ಮಾಡಲಾಗುತ್ತಿದೆ. ಇದನ್ನು ಪೋಷಕರು ತಪ್ಪಾಗಿ ಅರ್ಥೈಸಿ ಕೊಳ್ಳಬಾರದು. ಇಂತಹ ಘಟನೆಗಳ ಸಂದರ್ಭದಲ್ಲಿ ಶಾಲೆಯಲ್ಲಿ ಅದ್ಯಾಪಕರೊಂದಿಗೆ ವಿಚಾರಿಸಬೇಕು ಎಂದ ಅವರು ಎಸ್.ಡಿ.ಎಂಸಿಯವರು ಹಿರಿಯ ವಿದ್ಯಾರ್ಥಿ ಸಂಘವನ್ನು ಬಲಪಡಿಸಬೇಕು ಎಂದರು.

ಕೋಡಿಂಬಾಡಿ ಗ್ರಾ.ಪಂ ಅಧ್ಯಕ್ಷ ರಾಮಚಂದ್ರ ಪೂಜಾರಿ ಶಾಂತಿನಗರ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್., ಜಿ.ಪಂ ಮಾಜಿ ಸದಸ್ಯೆ ಶಯನಾ ಜಯಾನಂದ, ತಾ.ಪಂ ಮಾಜಿ ಸದಸ್ಯ ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ಕೋಡಿಂಬಾಡಿ ಗ್ರಾ.ಪಂ ಉಪಾಧ್ಯಕ್ಷೆ ಉಷಾ ಲಕ್ಷ್ಮಣ, ಸದಸ್ಯರಾದ ಪೂರ್ಣಿಮಾ, ಮಲ್ಲಿಕಾ, ಜಯಪ್ರಕಾಶ್ ಬದಿನಾರು, ಜಗನ್ನಾಥ ಶೆಟ್ಟಿ ನಡುಮನೆ, ವಿಶ್ವನಾಥ ಕೃಷ್ಣಗಿರಿ, ನಿವೃತ್ತ ಯೋಧ ಪುಷ್ಪರಾಜ್ ಬಾರ್ತಿಕುಮೇರು, ಕೃಷಿ ವಿಶ್ವವಿದ್ಯಾನಿಲಯದ ಎಂಎಸ್ಸಿಯಲ್ಲಿ ಚಿನ್ನದ ಪದಕ ವಿಜೇತೆ ವಂದನಾ ಸಾಮಂತ್, ದಾನಿ ಹುಸೈನ್ ಕೆಬಿಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸನ್ಮಾನ;
ನಿವೃತ್ತ ಶಿಕ್ಷಕಿ ಲಕ್ಷ್ಮೀ ಆರ್.ರೈ, ನಿವೃತ್ತ ಯೋಧ ಪುಷ್ಪರಾಜ್ ಬಾರ್ತಿಕುಮೇರ್ ಹಾಗೂ ಕೃಷಿ ವಿಶ್ವವಿದ್ಯಾನಿಲಯದ ಎಂಎಸ್ಸಿಯಲ್ಲಿ ಚಿನ್ನದ ಪದಕ ವಿಜೇತೆ ವಂದನಾ ಸಾಮಂತ್ ರವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ನಿವೃತ್ತ ಶಿಕ್ಷಕಿ ಲಕ್ಷ್ಮೀ ಆರ್ ರೈಯವರನ್ನು ಅಧ್ಯಕ್ಷ ನವೀನ್ ಕುಮಾರ್ ರೈ, ಕಾರ್ಯದರ್ಶಿ ನಾಗೇಶ್ ಪಾಟಾಳಿ, ಸುಧಾಕರ ರೈ ಮೊದಲಾದವರು ಸನ್ಮಾನಿಸದರು.

ಮುಖ್ಯ ಶಿಕ್ಷಕಿ ಸುಲೋಚನ ಸ್ವಾಗತಿಸಿದರು. ಎಸ್.ಡಿ.ಎಂ.ಸಿ ಅಧ್ಯಕ್ಷ ಶೇಖರ್ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕರಾದ ಪುಷ್ಪಾವತಿ ಹಾಗೂ ನಿರ್ಮಲ ಕಾರ್ಯಕ್ರಮ ನಿರೂಪಿಸಿ, ಪದ್ಮಾವತಿ ವಂದಿಸಿದರು. ಶಿಕ್ಷಕರು ಹಾಗೂ ಎಸ್‌ಡಿಎಂಸಿ ಸದಸ್ಯರು ಸಹಕರಿಸಿದರು.

LEAVE A REPLY

Please enter your comment!
Please enter your name here