ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು ಇದರ ಆಶ್ರಯದಲ್ಲಿ ದಸರಾ ನಾಡ ಹಬ್ಬ ಸಮಿತಿ, ರಸಿಕರತ್ನ ವಿಟ್ಲ ಜೋಷಿ ಪ್ರತಿಷ್ಠಾನ ಮತ್ತು ಹಾಸ್ಯ ರತ್ನ ನಯನ ಕುಮಾರ್ ಅಭಿಮಾನಿ ಬಳಗ ಇದರ ಸಹಯೋಗದಲ್ಲಿ ಅ. 2 ರಂದು ಪುತ್ತೂರು ನಟರಾಜ ವೇದಿಕೆಯಲ್ಲಿ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ಬೆಳಿಗ್ಗೆ. 9.30 ರಿಂದ ‘ಸತಿ ದಹನ’ ಹವ್ಯಕ ಯಕ್ಷಗಾನ ತಾಳಮದ್ದಳೆ, ಬಳಿಕ ರಸಿಕ ರತ್ನ ವಿಟ್ಲ ಜೋಷಿ ಮತ್ತು ಹಾಸ್ಯರತ್ನ ನಯನ್ ಕುಮಾರ್ ಗುರು ಶಿಷ್ಯ- ಸಂಸ್ಮರಣೆ ನಡೆಯಲಿದೆ. ಅಪರಾಹ್ನ . 2 ರಿಂದ ‘ಅಗ್ನಿ ಪರೀಕ್ಷೆ – ಅಯ್ಯೋಧ್ಯಾಗಮನ’ ಯಕ್ಷಗಾನ ತಾಳಮದ್ದಳೆ ನಡೆಯಲಿದ್ದು, ಸಂಜೆ ದಸರಾ ನಾಡಹಬ್ಬದ ಕಾರ್ಯಕ್ರಮದಲ್ಲಿ ಪುತ್ತೂರು ಸಿಟಿ ಆಸ್ಪತ್ರೆಯ ಡಾ. ಎ.ಪಿ. ಭಟ್ ರವರು ಉಪನ್ಯಾಸ ನೀಡಲಿದ್ದಾರೆ, ಬಳಿಕ ಯಕ್ಷಗಾನ ತಾಳಮದ್ದಳೆ ಮುಂದುವರಿಯಲಿದೆ ಎಂದು ಕಾರ್ಯಕ್ರಮ ದ ಸಂಘಟಕರು ತಿಳಿಸಿದ್ದಾರೆ.