ಅ. 2: ಬೆಟ್ಟಂಪಾಡಿ ದೇವಸ್ಥಾನದಲ್ಲಿ ‘ಧಾರ್ಮಿಕ ಶಿಕ್ಷಣ’‌ಕ್ಕೆ ಚಾಲನೆ

0

ಬೆಟ್ಟಂಪಾಡಿ: ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಪ್ರತೀ ಆದಿತ್ಯವಾರ ಬೆಳಿಗ್ಗೆ 8 ಗಂಟೆಯಿಂದ 9 ಗಂಟೆಯವರೆಗೆ ಹಿಂದು ಧಾರ್ಮಿಕ ಶಿಕ್ಷಣ ನೀಡುವ ಕಾರ್ಯಕ್ರಮಕ್ಕೆ ಅ. 2 ರಂದು ಚಾಲನೆ ದೊರೆಯಲಿದೆ. ನವೋದಯ ಪ್ರೌಢಶಾಲೆಯ ನಿವೃತ್ತ ಮುಖ್ಯಗುರು ವೆಂಕಟ್ರಮಣ ಭಟ್ ಮಂಜುಳಗಿರಿ ಉದ್ಘಾಟಿಸಲಿದ್ದಾರೆ. ಧಾರ್ಮಿಕ ಶಿಕ್ಷಣ ಕೊಡಿಸಲಿಚ್ಛಿಸುವ ಪೋಷಕರು ತಮ್ಮ ಮಕ್ಕಳನ್ನು ಅ. 2 ರಂದು ಬೆಳಿಗ್ಗೆ 8 ಗಂಟೆಗೆ ಕಳುಹಿಸಿಕೊಡುವಂತೆ ದೇವಳದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here