ಪುತ್ತೂರು: ನವರಾತ್ರಿಯ ಸಂದರ್ಭದಲ್ಲಿ ದೈವದತ್ತ ಸಂಕೇತವಾದ ತುಳುನಾಡಿನ ಸಂಸ್ಕೃತಿ ಹಾಗೂ ಎಲ್ಲಾ ವರ್ಗದ ಜನರ ಅಚ್ಚು ಮೆಚ್ಚಿನ ಹುಲಿಕುಣಿತವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಎಲ್ಲರ ಸಹಕಾರದಿಂದ ಪುತ್ತೂರಿನ ಇತಿಹಾಸದಲ್ಲೇ ಮೊದಲ ಬಾರಿಗೆ ರೂ.10 ಲಕ್ಷಕ್ಕೂ ಮಿಕ್ಕಿ ವೆಚ್ಚದಲ್ಲಿ ಐತಿಹಾಸಿಕ `ಪುತ್ತೂರ್‍ದ ಪಿಲಿರಂಗ್ ಸೀಸನ್-1′ ಪಿಲಿನಲಿಕೆ ಸ್ಪರ್ಧೆ ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರ ನೇತೃತ್ವದಲ್ಲಿ ಝೂಮ್ ಇನ್ ಟಿವಿ ಸಹಯೋಗದೊಂದಿಗೆ ಅ.1ರಂದು ಮಧ್ಯಾಹ್ನ ಗಂಟೆ 12.13 ಕ್ಕೆ ಪುತ್ತೂರು ಕಿಲ್ಲೆ ಮೈದಾನದಲ್ಲಿ ಉದ್ಘಾಟನೆಗೊಂಡಿತ್ತು.
ಬೆಳಿಗ್ಗೆ ಗಣಪತಿ ಹೋಮದ ಬಳಿಕ ಮಧ್ಯಾಹ್ನ ವೇದಿಕೆಯ ಹೊರಗೆ ಸವಣೂರು ವಿದ್ಯಾರಶ್ಮಿ ಸಮೂಹ ಸಂಸ್ಥೆಗಳ ಸಂಚಾಲಕ ಕೆ ಸೀತಾರಾಮ ರೈ ಸವಣೂರು ತುಳು ನಾಡು ಧ್ವಜಾರೊಹಣ ಮಾಡಿದರು. ಬಳಿಕೆ ಹುಲಿ ಕುಣಿತ ವೇದಿಕೆಯಲ್ಲಿ ಸ್ವರ್ಣೋದ್ಯಮಿಗಳಾದ ಜಿ.ಎಲ್.ಆಚಾರ್ಯ ಜ್ಯುವೆಲ್ಸ್ ನ ಮಾಲಕ ಬಲರಾಮ ಆಚಾರ್ಯ, ಮುಳಿಯ ಜ್ಯುವೆಲ್ಸ್ ನ ಆಡಳಿತ ನಿರ್ದೇಶಕ ಕೃಷ್ಣ ನಾರಾಯಣ ಮುಳಿಯ ದೀಪಪ್ರಜ್ವಲನೆ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮುಳಿಯ ಸಂಸ್ಥೆಯ ಮುಳಿಯ ಶ್ಯಾಮ್ ಭಟ್ ಮತ್ತು ಸುಲೋಚನಾ ಭಟ್ ದಂಪತಿ, ನಗರಸಭಾ ಸದಸ್ಯ ಯೂಸೂಪ್ ಡ್ರೀಮ್, ಮಾಜಿ ಸದಸ್ಯ ಮುಕೇಶ್ ಕೆಮ್ಮಿಂಜೆ, ಚಂದ್ರಹಾಸ ರೈ, ಕೌಶಲ್ ಪ್ರಸಾದ್ ಶೆಟ್ಟಿ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜರಾಮ್ ಕೆ ವಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಮ್ ಬಿ ವಿಶ್ವನಾಥ ರೈ, ನಗರ ಕಾಂಗ್ರೆಸ್ ಅಧ್ಯಕ್ಷ ಹೆಚ್ ಮಹಮ್ಮದ್ ಆಲಿ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಮಾಜಿ ಅದ್ಯಕ್ಷ ಮುರಳಿಧರ ರೈ, ಮಹಿಳಾ ಕಾಂಗ್ರೆಸ್ ಆದ್ಯಕ್ಷೆ ಶಾರದಾ ಅರಸ್, ವಿಟ್ಲಪಟ್ಟಣ ಪಂಚಾಯತ್ ಸದಸ್ಯ ಅಶ್ರಫ್ , ವಿಟ್ಲ ಯೂತ್ ಕಾಂಗ್ರೆಸ್ ಅಧ್ಯಕ್ಷ ಪಾರೂಕ್, ಸಂತೋಷ್ ರೈ ಭಂಡಾರಿ ಚಿಲ್ಮೆತ್ತಾರು, ಕಂಬಳ ಸಮಿತಿ ಸದಸ್ಯ ಸುದೇಶ್ ಕುಮಾರ್, ಕೃಷ್ಣಪ್ರಸಾದ್ ಆಳ್ವ, ಉಮಾನಾಥ ಶೆಟ್ಟಿ ಪೆರ್ನೆ, ಪೆರ್ನೆ ಗ್ರಾ.ಪಂ ಅಧ್ಯಕ್ಷ ಅಬ್ದುಲ್ ನಜಿರ್, ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಾಬು ಶೆಟ್ಟಿ, ಎಪಿಎಂಸಿ ಮಾಜಿ ಸದಸ್ಯ ಶಕೂರ್ ಹಾಜಿ, ಕಬಡ್ಡಿ ಆಟಗಾರ ಪ್ರವೀಣ್ ಚಂದ್ರ ಆಳ್ವ, ರೋಶನ್ ರೈ, ಡಾ| ಹರ್ಷಕುಮಾರ್ ರೈ ಮಾಡಾವು, ಸುಬ್ರಹ್ಮಣ್ಯ ದೇವಸ್ಥಾಮದ ಮಾಜಿ ಆಡಳಿತ ಮೊಕ್ತೆಸರ ರವೀಂದ್ರನಾಥ ಶೆಟ್ಟಿ, ಶಿವರಾಮ್ ಏನೆಕಲ್, ನಿರಂಜನ ರೈ ಮಠಂತಬೆಟ್ಟು, ಸಮಾಜ ಕಲ್ಯಾಣ ಮಂಡಳಿ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಗೌಡ ಚಿಲ್ತಡ್ಕ, ಕಾಮಧೇನು ಟ್ರಸ್ಟ್ ನ ಮಾದವ ಗೌಡ, ರಾಧಾಕೃಷ್ಣ ನಾಯ್ಕ್, ಶಿವರಾಮ ಆಳ್ವ, ಶಿವರಾಮ ಮೇಗಿನಗುತ್ತು, ಜಯಪ್ರಕಾಶ್ ಕುರಿಯ, ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ಉದ್ಯಮಿ ಗಿರಿಧರ್ ಹೆಗ್ಡೆ ಕೊಂಬೆಟ್ಟು, ಶೇಟ್ ಇಲೆಕ್ಟ್ರಾನಿಕ್ಸ್ ನ ರೂಪೇಶ್ ಶೇಟ್, ನಿವೃತ ಉಪವಲಯ ಅರಣ್ಯಾಧಿಕಾರಿ ಕೃಷ್ಣಪ್ಪ ಕೆ, ದೇವದಾಸ್ ರೈ ಬೆಳಿಪ್ಪಾಡಿ, ಉದ್ಯಮಿ ಉಮೇಶ್ ನಾಡಾಜೆ, ಭರತ್ ಆರಿಗ ಪಟ್ಟೆಗುತ್ತು ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.