





ಪುತ್ತೂರು: ಬಪ್ಪಳಿಗೆಯ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಯ ಶ್ರೀ ಶಂಕರ ಸಭಾಭವನದ ಲಲಿತಾಂಬಿಕಾ ವೇದಿಕೆಯಲ್ಲಿ ನಡೆದ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿ, ಕವಯತ್ರಿ, ಲೇಖಕಿ ಶಾಂತಾ ಕುಂಟಿನಿಯವರ ‘ಸ ರಸದ ಮುತ್ತಿನ ನುಡಿಗಳು’ ಕೃತಿ ಬಿಡುಗಡೆ ನಡೆಯಿತು.


ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಎಂ.ಪಿ.ಶ್ರೀನಾಥ್, ತಾಲೂಕು ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ಸಮ್ಮೇಳನಾಧ್ಯಕ್ಷ ಡಾ. ಹೆಚ್.ಜಿ. ಶ್ರೀಧರ್, ಕಾಸರಗೋಡಿನ ವಿಶ್ರಾಂತ ಪ್ರಾಧ್ಯಾಪಕ ಡಾ. ಕೆ. ಕಮಲಾಕ್ಷ, ರಾಧೇಶ್ ತೋಳ್ಪಾಡಿ, ಡಾ. ಪೀಟರ್ ವಿಲ್ಸನ್ ಪ್ರಭಾಕರ್, ರಮೇಶ್ ಉಳಯ, ಅಬೂಬಕರ್ ಆರ್ಲಪದವು ಮುಂತಾದವರು ಉಪಸ್ಥಿತರಿದ್ದರು.













