ಪುತ್ತೂರು: ಡ್ರೀಮ್ ಕ್ಯಾಚರ್ಸ್ ಫಿಲಂ ಆಕ್ಟಿಂಗ್ ಕ್ಲಾಸ್ ಪುತ್ತೂರು ಇದರ 3ನೇ ಬ್ಯಾಚ್ ಅಕ್ಷಯ ಕಾಲೇಜಿನಲ್ಲಿ ಉದ್ಘಾಟನೆಗೊಂಡಿತು.
ಅತಿಥಿಗಳಾಗಿ ಭಾಗವಹಿಸಿದ್ದ ನಟ ಹಾಗೂ ಕಿರುತೆರೆ ಧಾರವಾಹಿಯ ಸಹ ನಿರ್ದೇಶಕ ಶರತ್ ಗಿರಿವನ ಹಾಗೂ ಬರಹಗಾರ, ಚಲನಚಿತ್ರ ನಿರ್ದೇಶಕ ರಜಾಕ್ ಪುತ್ತೂರು ಅವರು ಎರಡನೇ ಬ್ಯಾಚ್ ಪೂರ್ತಿಗೊಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು. ಅಶ್ವಥ್ ನಾಯ್ಕ್ ಇವರ ಕಲಾ ಕ್ಷೇತ್ರದ ಸಾಧನೆಯನ್ನು ಗುರುತಿಸಿ ಗೌರವಿಸಲಾಯಿತು.
ರಜಾಕ್ ಪುತ್ತೂರು ಮಾತನಾಡಿ ಕಲಿಕೆಯೊಂದಿಗೆ ಅವಕಾಶ ಕೊಡಿಸುತ್ತಾ ತಾನು ಬೆಳೆಯುವುದು ಹಾಗೂ ಇತರರನ್ನು ಬೆಳೆಸಬೇಕೆನ್ನುವ ಆರ್ಯನ್ ಅವರ ಈ ಗುಣವೇ ಅವರನ್ನು ಎತ್ತರಕ್ಕೆ ಬೆಳೆಸಲಿದೆ ಎಂದು ಹೇಳಿದರು.
ಶರತ್ ಗಿರಿವನ ಮಾತನಾಡಿ ದುಡ್ಡು ಮಾಡುವ ಉದ್ದೇಶ ಇದ್ದಿದ್ದರೆ ಆರ್ಯನ್ ಬೆಂಗಳೂರಿನಂತ ದೊಡ್ಡ ಪಟ್ಟಣದಲ್ಲಿ ಅಭಿನಯದ ಕ್ಲಾಸ್ ಪ್ರಾರಂಭಿಸುತಿದ್ದರು. ನಮ್ಮ ಊರಿನ ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ, ಅವಕಾಶ ಕೊಡಿಸಿ ಬೆಳೆಸಬೇಕೆಂಬ ಸದುದ್ದೇಶ ಆರ್ಯನ್ ಅವರದ್ದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸ್ವಾಗತಿಸಿದ ಡ್ರೀಮ್ ಕ್ಯಾಚರ್ಸ್ ಫಿಲಂ ಆಕ್ಟಿಂಗ್ ಕ್ಲಾಸ್ ಪುತ್ತೂರು ಇದರ ಸಂಸ್ಥಾಪಕ ಆರ್ಯನ್ ಮಾತನಾಡಿ ಮುಂದಕ್ಕೆ ಪುತ್ತೂರು ವಿಕ್ಟರ್ಸ್ ಪ್ರೌಢಶಾಲೆಯಲ್ಲಿ ಅಭಿನಯದ 3ನೇ ಬ್ಯಾಚ್ ಪ್ರಾರಂಭಗೊಳ್ಳಲಿದ್ದು ಆಸಕ್ತರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ಹೇಳಿ ತರಬೇತಿ ಪಡೆದ ಹಾಗೂ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ವಿಂದ್ಯಾಶ್ರೀ ರೈ ಪ್ರಾರ್ಥಿಸಿದರು, ದ್ಯಾಶ್ರೀ ವಂದಿಸಿದರು, ಭಾಗ್ಯಶ್ರೀ ರೈ ಕಾರ್ಯಕ್ರಮ ನಿರೂಪಿಸಿದರು. ಅಶ್ವಥ್ ನಾಯ್ಕ್ ವೇದಿಕೆ ಸಂಯೋಜನೆ ಮಾಡಿದ್ದರು.