ಕೆಯ್ಯೂರು ಶ್ರೀ ಕ್ಷೇತ್ರದಲ್ಲಿ ನವರಾತ್ರಿ ಮಹೋತ್ಸವದ ಸಮಾರೋಪ ಸಮಾರಂಭ

0

ಶಿಷ್ಠರ ರಕ್ಷಿಸಿ, ದುಷ್ಠರ ಶಿಕ್ಷಿಸಿ ಒಳ್ಳೆಯ ವ್ಯಕ್ತಿಯಾನ್ನಾಗಿ ಮಾಡುವುದೇ   ನವರಾತ್ರಿ  ವಿಶೇಷತೆ- ನವೀನ್ ನೆರಿಯಾ

ಕೆಯ್ಯೂರು : ಶ್ರೀ  ಮಹಿಷಮರ್ದಿನಿ ದುರ್ಗಾಪರಮೇಶ್ವರೀ ದೇವಸ್ಥಾನ ಕೆಯ್ಯೂರಿನಲ್ಲಿ ನವರಾತ್ರಿ ಮಹೋತ್ಸವದ ಸಮರೋಪ ಸಮಾರಂಭವು ಅ4 ರಂದು ದೇವಳದ ವಠಾರದಲ್ಲಿ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಕೃಷ್ಣಮೂರ್ತಿ ಭಟ್ ಪಲ್ಲತ್ತಡ್ಕ   ದೀಪ ಪ್ರಜ್ವಲಿಸುವ ಮೂಲಕ ಉಧ್ಘಾಟಿಸಿ ಕ್ಷೇತ್ರದ ಧಾರ್ಮಿಕ ಕಾರ್ಯಗಳಲ್ಲಿ  ಸೇವೆ ಸಲ್ಲಿಸಲು ನನಗೆ ಅವಕಾಶ ಸಿಕ್ಕಿರುವುದು ನನ್ನ ಭಾಗ್ಯ, ಎಲ್ಲರ ಸಹಕಾರದೊಂದಿಗೆ ಸೇವೆ ಮಾಡಲು ಸಾಧ್ಯವಾಗಿದೆ. ನವರಾತ್ರಿ ಸಮಸ್ತ ಜನತೆಗೆ  ಶುಭವನ್ನು ತರಲಿ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿ.ಹಿಂ.ಪ. ಭಜರಂಗದಳ ಜಿಲ್ಲಾ ಸಹಕಾರ್ಯದರ್ಶಿ ನವೀನ್ ನೆರಿಯಾ ಮಾತನಾಡಿ  ಶಿಷ್ಟರ ರಕ್ಷಣೆ ಮಾಡಿ, ದುಷ್ಟರನ್ನು ಶಿಕ್ಷಸಿಸುವ ಮೂಲಕ ಒಳ್ಳೆಯ ವ್ಯಕ್ತಿಯಾನ್ನಾಗಿ ರೂಪು ಗೊಳ್ಳುವುದೇ ನವರಾತ್ರಿಯ ವಿಶೇಷವಾಗಿದೆ. ಮನುಷ್ಯನಲ್ಲಿರುವ ಅಸೂಯೆ, ರಾಕ್ಷಸ ಪವೃತ್ತಿಯನ್ನು ದೂರ ಮಾಡಿ, ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಬದುಕಲು ಈ ಒಂಬತ್ತು ದಿನಗಳ ಹಬ್ಬ ನಮಗೆಲ್ಲರಿಗೂ ಸಹಕಾರಿಯಾಗಿದೆ ಎಂದು ಹೇಳಿ ಪುರಾಣದಲ್ಲಿಯೂ ದಸರಾ ಹಬ್ಬಕ್ಕೆ ತನ್ನದೇ ಆದ ವಿಶೇಷತೆ ಇದೆ.   ದುರ್ಗಾಮಾತೆಯನ್ನು ಭಕ್ತಿಯಿಂದ ಪೂಜಿಸುವ ಮೂಲಕ ನಾಡಿನೆಲ್ಲೆಡೆ ಸುಖ ಶಾಂತಿ ನೆಮ್ಮದಿ  ‌ನೆಲೆಗೊಳ್ಳುವಂತಾಗಲಿ  ಎಂದು ಹೇಳಿ ಶುಭ ಹಾರೈಸಿದರು.

ಕೆಯ್ಯೂರು ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಈಶ್ವರಿ ಜೆ.ರೈ ಸಂತೋಷ್ ನಗರ, ಮಮತಾ ಎಸ್ ರೈ ಕೆಯ್ಯೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ನವರಾತ್ರಿ ಉತ್ಸವ ಕಾರ್ಯಕ್ರಮದಲ್ಲಿ ಸಹಕರಿಸಿದ ಎಲ್ಲಾ ಸಂಘ ಸಂಸ್ಥೆಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಮತ್ತು  ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ತಂಡಗಳಿಗೆ ಪ್ರಸಾದ ವಿತರಣೆ ನೀಡಲಾಯಿತು. ಅನ್ವಿತಾ ರೈ ಪ್ರಾರ್ಥಿಸಿ, ನಾರಾಯಣಪಾಟಾಳಿ ಸ್ವಾಗತಿಸಿ, ಬಾಬುಪಾಟಾಳಿ ದೇರ್ಲ ವಂದಿಸಿ, ರವಿಕುಮಾರ್ ಕೈತ್ತಡ್ಕ ಕಾರ್ಯಕ್ರಮ ನಿರೂಪಿಸಿದರು. ರಾತ್ರಿ ಭಂಡಾರ ಲೆಕ್ಕದಲ್ಲಿ ರಂಗ ಪೂಜೆ,ಮತ್ತು ಹರಕೆ ಸೇವೆ, ಮಹಾಪೂಜೆ, ಪ್ರಸಾದ ವಿತರಣೆ ನಡೆದು ಸಾವಿರಾರು ಮಂದಿ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು

 ಸಾಂಸ್ಕೃತಿಕ ನೃತ್ಯ ವೈಭವ
ನವರಾತ್ರಿ ಉತ್ಸವದ ಅಂಗವಾಗಿ  ರಾತ್ರಿ ನೃತ್ಯ ಸಂಯೋಜಕಿ ವಿದುಷಿ ಸಂಧ್ಯಾ ಗಣೇಶ್ ಇವರಿಂದ ನೃತ್ಯಾಂಜಲಿ ಪುತ್ತೂರು ತಂಡದಿಂದ  ಸಾಂಸ್ಕೃತಿಕ ನೃತ್ಯ ವೈಭವ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here