ಪುತ್ತೂರು: ನಿಟ್ಟೆ ಗುಲಾಬಿ ಶೆಟ್ಟಿ ಮೆಮೋರಿಯಲ್ ಇನ್ಸ್ಸ್ಟಿಟ್ಯೂಟ್ ಆಫ್ ಫಾರ್ಮಸ್ಯುಟಿಕಲ್ ಸಯನ್ಸ್ ಇದರ ವತಿಯಿಂದ ಕಾಲೇಜಿನ ಆವರಣದಲ್ಲಿ ಸೆ.ರಂದು ನಡೆದ `ಜಿಲ್ಲಾ ಮಟ್ಟದ ವಿಶ್ವ ಔಷಧಿ ವಿತರಕರ ದಿನ’ ಕಾರ್ಯಕ್ರಮದಲ್ಲಿ ಶ್ರೇಷ್ಠ ಔಷಧಿ ವಿತರಕ ಕಲ್ಲಾರೆ ಪದ್ಮಶ್ರೀ ಮೆಡಿಕಲ್ ಮ್ಹಾಲಕ ತಾರಾನಾಥ ರೈಯವರಿಗೆ ಗೌರವ ಸನ್ಮಾನ ನಡೆದಿದೆ.
ಪ್ರತಿ ವರ್ಷ ಜಿಲ್ಲೆಯ ಇಬ್ಬರು ಶ್ರೇಷ್ಠ ಔಷಧಿ ವಿತರಕರನ್ನು ಗುರುತಿಸಿ ಗೌರವಿಸಲಾಗುತ್ತಿದ್ದು ಪುತ್ತೂರಿನ ಔಷಧಿ ವಿತರಕರಿಗೆ ಈ ವರ್ಷ ಪ್ರಥಮ ಬಾರಿಗೆ ಗೌರವ ಸನ್ಮಾನ ನಡೆದಿದೆ. ಜೊತೆಗೆ ಕೊಡಿಕ್ಕಲ್ ವಿಜಯಲಕ್ಷ್ಮೀ ಮೆಡಿಕಲ್ನ ಆರ್.ಎಸ್ ನಳಿನಿಯವರಿಗೆ ಗೌರವ ಸನ್ಮಾನ ನಡೆಯಿತು. ನಿಟ್ಟೆ ಕೆ.ಎಸ್ ಹೆಗ್ಡೆ ಮೆಡಿಕಲ್ ಅಕಾಡೆಮಿಯ ವಾಸ್ ಡೀನ್ ಪ್ರೋ. ಜಯಪ್ರಕಾಶ್ ಶೆಟ್ಟಿ ಕೆ., ಹಾಗೂ ಸಂಸ್ಥೆ ಪ್ರಾಂಶುಪಾಲ ಪ್ರೋ.ಸಿ.ಎಸ್ ಶಾಸ್ತ್ರೀಯವರು ತಾರಾನಾಥ ರೈಯವರನ್ನು ಸನ್ಮಾನಿಸಿ ಗೌರವಿಸಿದರು.
ಪುತ್ತೂರು ನಗರದಲ್ಲಿ 33 ಮೆಡಿಕಲ್ಗಳು ಕಾರ್ಯನಿರ್ವಹಿಸುತ್ತಿದೆ. ಈ ಪೈಕಿ ತಾರಾನಾಥ ರೈಯವರನ್ನು ಗುರುತಿಸಿ ಗೌರವ ಸನ್ಮಾನಿಸಲಾಗಿದೆ. ಕಳೆದ 22ವರ್ಷಗಳಿಂದ ಕಲ್ಲಾರೆಯಲ್ಲಿ ಪದ್ಮಶ್ರೀ ಮೆಡಿಕಲ್ನ್ನು ಮುನ್ನಡೆಸಿಕೊಂಡು ಬರುತ್ತಿರುವ ಇವರು ಇರ್ದೆ ಬಾಲ್ಯೊಟ್ಟುಗುತ್ತು ನಿವಾಸಿ ಶೀನಪ್ಪ ರೈ ಹಾಗೂ ಪದ್ಮಾವತಿ ರೈ ದಂಪತಿ ಪುತ್ರ. ನಿಟ್ಟೆ ಗುಲಾಬಿ ಶೆಟ್ಟಿ ಮೆಮೋರಿಯಲ್ ಇನ್ಸ್ಸ್ಟಿಟ್ಯೂಟ್ ಆಫ್ ಫಾರ್ಮಸ್ಯುಟಿಕಲ್ ಸಯನ್ಸ್ ಫಾರ್ಮಸಿಸ್ಟ್ ಪದವಿಯನ್ನು ಪಡೆದಿರುತ್ತಾರೆ. ಪತ್ನಿ ಕೊಂಬೆಟ್ಟು ಸರಕಾರಿ ಪ್ರೌಢಶಾಲಾ ಶಿಕ್ಷಕಿ ಮಮತಾ, ಪುತ್ರಿಯರಾದ ಬಿಎಎಂಎಸ್ ವಿದ್ಯಾರ್ಥಿನಿ ನೈಮಿಷ ಹಾಗೂ ಹತ್ತನೇ ತರಗತಿಯ ವಿದ್ಯಾರ್ಥಿನಿ ಅವನಿಯವರೊಂದಿಗೆ ಪ್ರಸ್ತುತ ಇವರು ಪಾಂಗಳಾಯಿಯಲ್ಲಿ ವಾಸ್ತವ್ಯವಿದ್ದಾರೆ. ಇವರು ಪಾಂಗಳಾಯ ಶ್ರೀ ಅರಸು ಮುಂಡ್ಯತ್ತಾಯ ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.