ಕುಂಜೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಸಂಭ್ರಮ ಸಂಪನ್ನ

0

ಪುತ್ತೂರು:ಆರ್ಯಾಪು ಗ್ರಾಮದ ಕುಂಜೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ 9 ದಿನಗಳ ನಡೆದ ನವರಾತ್ರಿ ಉತ್ಸವವು ಅ.5ರ ವಿಜಯ ದಶಮಿಯಂದು ಮಕ್ಕಳಿಗೆ ಅಕ್ಷರಾಭ್ಯಾಸದೊಂದಿಗೆ ಸಂಪನ್ನಗೊಂಡಿತು. ನವರಾತ್ರಿ ಉತ್ಸವದಲ್ಲಿ ಪ್ರಥಮ ಬಾರಿಗೆ ಈ ವರ್ಷ ಆಯೋಜಿಸಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು ಮೆಲೈಸಿದೆ.


ಸೆ.26ರಂದು ಬೆಳಿಗ್ಗೆ ನಿತ್ಯಪೂಜೆಯ ಬಳಿಕ ದೀಪ ಪ್ರಜ್ವಲನೆ, ಗಣಪತಿ ಹವನದೊಂದಿಗೆ ನವರಾತ್ರಿ ಉತ್ಸವಗಳಿಗೆ ಚಾಲನೆ ನೀಡಲಾಗಿದ್ದು, ನವರಾತ್ರಿ ಉತ್ಸವದಲ್ಲಿ ಪ್ರತಿದಿನ ವಿವಿಧ ಭಜನಾ ಮಂಡಳಿಗಳಿಂದ ಭಜನೆ, ಮಧ್ಯಾಹ್ನ ಕುಂಕುಮಾರ್ಚನೆ, ನವರಾತ್ರಿ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ, ನಿತ್ಯಪೂಜೆ, ದುರ್ಗಾಪೂಜೆ, ರಂಗಪೂಜೆ, ಮಹಾಮಂಗಳಾರತಿ ದೈವಗಳಿಗೆ ತಂಬಿಲ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.
ಚಂಡಿಕಾಯಾಗ, ಆಯುಧ ಪೂಜೆ:
ನವರಾತ್ರಿ ಉತ್ಸವದ ಅಂಗವಾಗಿ ಕ್ಷೇತ್ರದಲ್ಲಿ ಅ.೪ರಂದು ಬೆಳಿಗ್ಗೆ ಗಣಪತಿ ಹವನ ನಡೆದ ಬಳಿಕ ಸಾಮೂಹಿಕ ಚಂಡಿಕಾಯಾಗ, ನಂತರ ವಿವಿಧ ಭಜನಾ ತಂಡಗಳಿಂದ ಭಜನೆ, ಮಧ್ಯಾಹ್ನ ಪೂರ್ಣಾಹುತಿ, ಸಂಜೆ ಆಯುಧ ಪೂಜೆಯು ನಡೆಯಿತು.
ಸಾಂಸ್ಕೃತಿಕ ತಂಡಗಳಿಂದ ಕಲಾ ಸೇವೆ:
ನವರಾತ್ರಿ ಉತ್ಸವದಲ್ಲಿ ಇದೇ ಮೊದಲ ಬಾರಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿಕೊಳ್ಳಲಾಗಿದ್ದು, ಪ್ರತಿದಿನ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಎಲ್ಲಾ ತಂಡಗಳು ದೇವಿಯ ಸೇವಾ ರೂಪದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೆರವೇರಿಸಿರುತ್ತಾರೆ.

ಸೆ.26ರಂದು ಬೊಳುವಾರು ಆಂಜನೇಯ ಯಕ್ಷಗಾನ ಕಲಾ ಸಂಘದವರಿಂದ `ಕದಂಬ ಕೌಶಿಕೆ’ ಎಂಬ ಯಕ್ಷಗಾನ ತಾಳಮದ್ದಳೆ, ಸೆ.27ರಂದು ಈಶ್ವರದಾಸ ಕೊಪ್ಪೇಸರ ಇವರಿಂದ `ಸೀತಾ ಕಲ್ಯಾಣ’ ಹರಿಕಥೆ, ಸೆ.28ರಂದು ಮಂಚಿ ಬೋಳಂತೂರು ವಸುಧಾರಾ ಸಾಂಸ್ಕೃತಿಕ ಕಲಾ ಸಂಘದವರಿಂದ `ನೃತ್ಯ ವೈಭವ’, ಸೆ.29ರಂದು ಧೀಶಕ್ತಿ ಬಾಲಿಕಾ ಕ್ಷ ಬಳಗದವರಿಂದ `ಶ್ರೀಕೃಷ್ಣ ಲೀಲೆ-ಕಂಸವಧೆ” ಹಾಗೂ ಧೀ ಶಕ್ತಿ ಮಹಿಳಾ ಯಕ್ಷ ಬಳಗದವರಿಂದ ` ಸುಧನ್ವಾರ್ಜುನ ಕಾಳಗ’ ಎಂಬ ತಾಳಮದ್ದಳೆ, ಸೆ.30ರಂದು ಪ್ರಾರ್ಥನಾ ಮತ್ತು ಆರಾಧನಾ ಸಹೋದರಿಯರು ಬಂಗಾರಡ್ಕ ಇವರಿಂದ `ಕರ್ನಾಟಕ ಶಾಸ್ತ್ರೀಯ ಸಂಗೀತ’, ಅ.1ರಂದು ಯಕ್ಷಶ್ರೀ ಹವ್ಯಾಸಿ ಬಳಗದವರಿಂದ `ಸತೀ ಸುಕನ್ಯಾ’ ಯಕ್ಷಗಾನ ತಾಳಮದ್ದಳೆ, ಅ.2ರಂದು ಮಧ್ವಾಧೀಶ ವಿಠಲದಾಸ ರಾಮಕೃಷ್ಣ ಕಾಟುಕುಕ್ಕೆ ಮತ್ತು ಬಳಗದವರಿಂದ `ದಾಸ ಭಕ್ತಿಮಂಜರಿ, ಅ.3ರಂದು ಮಚ್ಚಿಮಲೆ ಜಯಂತಿ ಹೆಬ್ಬಾರ್ ಬಳಗದವರಿಂದ `ಭಕ್ತಿ ಸಂಗೀತ, ವಿಟ್ಲ ಪೃಥ್ವೀ ಮತ್ತು ಬಳಗದರಿಂದ `ಭರತನಾಟ್ಯ ಹಾಗೂ ಯಕ್ಷಕೂಟ ಪುತ್ತೂರು ಇದರ ಸದಸ್ಯರುಗಳಿಂದ `ಭೃಗು ಶಾಪ’ ಎಂಬ ಯಕ್ಷಗಾನ ತಾಳಮದ್ದಳೆ ಜರುಗಿತು.
ಸ್ವಚ್ಚತೆಗೆ ಮೆಚ್ಚುಗೆ:
ನವರಾತ್ರಿ ಉತ್ಸವದಲ್ಲಿ ಪ್ರತಿದಿನ ಬೆಳಗ್ಗಿನಿಂದ ರಾತ್ರಿ ತನಕ ನಡೆದ ಕಾರ್ಯಕ್ರಮದಲ್ಲಿ ಸ್ವಚ್ಚತೆಗೆ ಆಧ್ಯತೆ ನೀಡಲಾಗಿತ್ತು. ಕುಂಜೂರು ವಿಶ್ವ ಯುವಕ ಮಂಡಲದ ಪದಾಧಿಕಾರಿಗಳು ಹಾಗೂ ಸದಸ್ಯರ ನೇತೃತ್ವದಲ್ಲಿ ಸಂಪೂರ್ಣ ಸ್ವಚ್ಚತಾ ಕಾರ್ಯಗಳು ನಡೆದಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.

LEAVE A REPLY

Please enter your comment!
Please enter your name here