0 ಸೆ. 26ರಿಂದ ಅ. 6ರ ತನಕ 11 ದಿನಗಳಲ್ಲಿ 10 ಸಾವಿರಕ್ಕೂ ಮಿಕ್ಕಿ ಭಕ್ತಾದಿಗಳು ಭಾಗಿ
0 ಹೊಸ ಅಕ್ಕಿ ಊಟ ಅನ್ನಸಂತರ್ಪಣೆಯಲ್ಲಿ 2 ಸಾವಿರ ಮಂದಿ ಭಾಗಿ
0 ಶ್ರೀ ಮಹಾಕಾಳಿ ಅಮ್ಮನವರಿಗೆ ಭಕ್ತಾಧಿಗಳಿಂದ ದಿನಂಪ್ರತಿ ಆಕರ್ಷಕ ಹೂವಿನ ಅಲಂಕಾರ
ಉಪ್ಪಿನಂಗಡಿ: ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದಲ್ಲಿ ಸೆ. 26ರಿಂದ ಆರಂಭಗೊಂಡ ನವರಾತ್ರಿ ಪೂಜೆ ಹಾಗೂ ವಿಶೇಷವಾಗಿ ನವದುರ್ಗಾ ಕಲ್ಪೋಕ್ತವಿಧಿ ಪೂಜೆ ಕಾರ‍್ಯಕ್ರಮ ಅ. 6ರಂದು ಸಮಾಪನಗೊಂಡಿತು. 11 ದಿನಗಳ ಕಾಲ ನಡೆದ ಕಾರ‍್ಯಕ್ರಮದಲ್ಲಿ ಸುಮಾರು 10 ಸಾವಿರಕ್ಕೂ ಮಿಕ್ಕಿ ಭಕ್ತಾದಿಗಳು ಭಾಗವಹಿಸಿ ಪುನೀತರಾದರು.
ಸೆ. 26ರಿಂದ ಆರಂಭಗೊಂಡು 9 ದಿನಗಳಲ್ಲಿ ಕ್ರಮವಾಗಿ ದುರ್ಗಾಪೂಜೆ, ಆರ್ಯಾಪೂಜೆ, ಭಗವತೀ ಪೂಜೆ, ಕುಮಾರೀ ಪೂಜೆ, ಅಂಬಿಕಾ ಪೂಜೆ, ಮಹಿಷಮರ್ದಿನೀ ಪೂಜೆ, ಚಂಡಿಕಾ ಪೂಜೆ, ಸರಸ್ವತೀ ಪೂಜೆ, ವಾಗೀಶ್ವರೀ ಪೂಜೆ ನಡೆಯಿತು. ಸೆ. 26ರಿಂದ ಅ. 5ರ ತನಕ ಕ್ರಮವಾಗಿ ಶ್ರೀ ಶೈಲಪುತ್ರಿ, ಶ್ರೀ ಬ್ರಹ್ಮಚಾರಿಣಿ, ಶ್ರೀ ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತಾ, ಶ್ರೀ ಕಾತ್ಯಾಯಿನೀ, ಶ್ರೀ ಕಾಲರಾತ್ರೀ, ಶ್ರೀ ಮಹಾಗೌರೀ, ಶ್ರೀ ಸಿದ್ಧಿದಾತ್ರೀ, ಶ್ರೀ ಮಹಾಸರಸ್ವತೀ ಪ್ರವಚನಮಾಲಾ ಮತ್ತು ಮಕ್ಕಳ ಧಾರ್ಮಿಕ ಶಿಕ್ಷಣ ಕಾರ‍್ಯಕ್ರಮ ನಡೆಯಿತು.
ಸೆ. 26ರಿಂದ 11 ದಿನಗಳ ಕಾಲ ನಡೆದ ನವರಾತ್ರಿ ಪೂಜೆಯನ್ನು ಕ್ರಮವಾಗಿ ಕೆ. ಹರೀಶ್ ಉಪಾಧ್ಯಾಯ, ಅಲಿಮಾರ ಕುಟುಂಬಸ್ಥರು, ಡಾ. ನಿರಂಜನ ರೈ, ಈಶ್ವರ ಭಟ್ ಕಾಯರ್ಪಾಡಿ, ಕೋಡಿಯಡ್ಕ ಬಿ. ಗುರುಪ್ರಸಾದ ರೈ, ಯಂ. ರಾಧಾಕೃಷ್ಣ, ಕೆ. ರಾಜೇಶ್ ನಾಯಕ್, ಡಾ. ಯಂ.ಆರ್. ಶೆಣೈ, ನಟ್ಟಿಬೈಲ್ ಸುರೇಶ್ ಶೆಟ್ಟಿ, ಕಾಂಚನ ಕುಟುಂಬಸ್ಥರು, ಮುದಲೆಮನೆ ರಾಜ ಗೌಡ ಇವರುಗಳು ಬಾಬ್ತು ಸೇವಾ ರೂಪದಲ್ಲಿ ನಡೆಸಲಾಯಿತು.
ಹೊಸ ಅಕ್ಕಿ ಊಟ:
ಅ. 5ರಂದು ಮಧ್ಯಾಹ್ನ ಹೊಸ ಅಕ್ಕಿ ಊಟ ಅನ್ನ ಸಂತರ್ಪಣೆ ನಡೆಯಿತು. ಸುಮಾರು 2 ಸಾವಿರಕ್ಕೂ ಮಿಕ್ಕಿ ಭಕ್ತಾದಿಗಳು ಅನ್ನಪ್ರಸಾದ ಸ್ವೀಕರಿಸಿದರು. ಸೆ. 26ರಂದು ರಾತ್ರಿ ಮಂಗಳೂರುನ ಪ್ರಖ್ಯಾತ ಹುಲಿ ಕುಣಿತ ತಂಡದಿಂದ ಹುಲಿ ಕುಣಿತ ಕಾರ‍್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಮಹಾಕಾಳಿ ಅಮ್ಮನವರಿಗೆ ಆಕರ್ಷಕ ಆಲಂಕಾರ:
ನವರಾತ್ರಿ ಉತ್ಸವದ ಸಲುವಾಗಿ ಮಹಾಕಾಳಿ ಅಮ್ಮನವರನ್ನು ಪ್ರತೀ ದಿನವೂ ಭಕ್ತಾದಿಗಳು ತಮ್ಮ ಸೇವಾರ್ಥವಾಗಿ ವಿಶಿಷ್ಠ ರೀತಿಯಲ್ಲಿ ಹೂವಿನ ಆಲಂಕಾರ ಮಾಡಿದರು. ದೇವರ ಮೂರ್ತಿ ನೋಡುವ ಕಣ್ಣುಗಳಿಗೆ ಆಕರ್ಷನೀಯವಾಗಿತ್ತು.
11 ದಿನಗಳ ಕಾಲ ನಡೆದ ವಿಶೇಷ ಕಾರ‍್ಯಕ್ರಮದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕರುಣಾಕರ ಸುವರ್ಣ ನೇತೃತ್ವದಲ್ಲಿ ಸದಸ್ಯರುಗಳಾದ ಹರೀಶ್ ಉಪಾಧ್ಯಾಯ, ಜಯಂತ ಪೊರೋಳಿ, ಹರಿರಾಮಚಂದ್ರ, ಸುನಿಲ್ ಎ., ಮಹೇಶ್ ಜಿ., ರಾಮ ನಾಯ್ಕ, ಹರಿಣಿ ಕೆ., ಪ್ರೇಮಲತಾ, ಸಹಾಯಕ ಕಾರ‍್ಯನಿರ್ವಹಣಾಧಿಕಾರಿ ಪುಷ್ಪಲತಾ, ವ್ಯವಸ್ಥಾಪಕ ವೆಂಕಟೇಶ್, ಸಿಬ್ಬಂದಿಗಳಾದ ಪದ್ಮನಾಭ, ಕೃಷ್ಣಪ್ರಸಾದ್ ಬಡಿಲ, ದಿವಾಕರ ಮುಂಚೂಣಿಯಲ್ಲಿ ನಿಂತು ವಿವಿಧ ಕಾರ‍್ಯಕ್ರಮ ನಿರ್ವಹಿಸಿದರು.