ಪುತ್ತೂರು:ಗ್ಯಾರೇಜ್ನಲ್ಲಿ ದುರಸ್ತಿಗೆಂದು ಇಟ್ಟಿದ್ದ ಲಾರಿಯೊಂದರ ಕೆಲವು ಸೊತ್ತುಗಳನ್ನು ಕಳವು ಮಾಡಿರುವ ಘಟನೆ ಮಂಜಲ್ಪಡ್ಪು ವಿನಾಯಕ ಮೋಟಾರ್ ವರ್ಕ್ಸ್ನಲ್ಲಿ ನಡೆದಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.
ಮಂಜಲ್ಪಡ್ಪು ವಿನಾಯಕ ಮೋಟಾರ್ ವರ್ಕ್ಸ್ನ ಮಾಲಕ ಕೆ.ವೆಂಕಟೇಶ್ ಅವರು, ಗ್ಯಾರೇಜಿಗೆ ರಿಪೇರಿಗೆ ಬಂದಿದ್ದ ಲಾರಿಯೊಂದರ ಬ್ರೇಕ್ ಡ್ರಮ್, ಸ್ಟ್ರಿಂಗ್ ಪ್ಲೇಟ್, ಕಬ್ಬಿಣದ ಚನಲ್, ಕಬ್ಬಿಣದ ರಾಡ್, ಕಬ್ಬಿಣದ ಪಟ್ಟಿ, ಕಬ್ಬಿಣದ ಪೈಪುಗಳನ್ನು ಕಳಚಿಟ್ಟಿದ್ದರು.ಮಾರನೆ ದಿನ ಬೆಳಿಗ್ಗೆ ಬಂದು ನೋಡಿದಾಗ ಸದ್ರಿ ಸೊತ್ತುಗಳು ಕಳವಾಗಿರುವುದು ಬೆಳಕಿಗೆ ಬಂದಿದೆ ಎಂದು ಅವರು ಪುತ್ತೂರು ನಗರ ಠಾಣಾ ಪೊಲೀಸರಿಗೆ ದೂರು ನೀಡಿದ್ದಾರೆ.