ಮಿತ್ತೂರು: ಬೈಕ್ – ಬಸ್ಸು ಮಧ್ಯೆ ಅಪಘಾತ -ಬೈಕ್ ಸವಾರನಿಗೆ ಗಾಯ

0

ವಿಟ್ಲ: ಬಸ್ಸು ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಕಬಕ-ಮಿತ್ತೂರು ನಡುವಿನ ಕೂವೆತ್ತಿಲ ತಿರುವಿನಲ್ಲಿ ನಡೆದಿದೆ.


ಬೈಕ್ ಸವಾರ ಕೂವೆತ್ತಿಲ ನಿವಾಸಿಯಾಗಿರುವ ಟ್ಯಾಂಕರ್ ಚಾಲಕ ಜಗ್ಗ ಯಾನೆ ಜಗದೀಶ್ ಗೌಡ(28 ವ.)ರವರು ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡವರು.

ಬಿ.ಸಿ.ರೋಡಿಂದ ಪುತ್ತೂರಿಗೆ ತೆರಳುತ್ತಿದ್ದ ಬಸ್ಸ್ ಹಾಗೂ ವಿರುದ್ಧ ದಿಕ್ಕಿನಿಂದ ಬಂದ ಬೈಕ್ ಮಧ್ಯೆ ಡಿಕ್ಕಿ ಸಂಭವಿಸಿದೆ. ಅಪಘಾತದ ತೀವ್ರತೆಗೆ ಬೈಕ್ ಬಸ್ಸಿನ ಮುಂಭಾಗದಲ್ಲಿ ಅಡಿಭಾಗಕ್ಕೆ ನುಸುಳಿ ಸಿಲುಕಿಕೊಂಡಿದೆ. ಕೂಡಲೇ ಸ್ಥಳೀಯರು ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪಘಾತದ ರಭಸಕ್ಕೆ ಬೈಕ್ ಜಖಂಗೊಂಡಿದೆ. ಸವಾರ ಜಗದೀಶ್‌ರವರು ಒಂದು ವಾರದ ಹಿಂದಷ್ಟೇ ತನ್ನ ಸ್ನೇಹಿತ ಖರೀದಿಸಿದ್ದ ಹೊಸ ಬೈಕಲ್ಲಿ ಕಬಕಕ್ಕೆ ಹೋಗಿ ಹಿಂತಿರುಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

LEAVE A REPLY

Please enter your comment!
Please enter your name here