ಪುತ್ತೂರು: ವಿದ್ಯಾಭಾರತಿ ವತಿಯಿಂದ ಹುಣಸೂರಿನಲ್ಲಿ ನಡೆದ ಪ್ರಾಂತೀಯ ಗಣಿತ ಮತ್ತು ವಿಜ್ಞಾನ ಮೇಳದಲ್ಲಿ ಉಪ್ಪಿನಂಗಡಿ ಇಂದ್ರಪ್ರಸ್ಥ ಪ. ಪೂ. ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ತರುಣವರ್ಗದ ರಸಪ್ರಶ್ನೆ ಸ್ಪರ್ಧೆಯಲ್ಲಿ ಆಶ್ರಯ ದತ್ತ ( ಕುಮಾರ ಸುಬ್ರಹ್ಮಣ್ಯ ಕೆ. ಜಿ. ಹಾಗೂ ದಿವ್ಯ ಜ್ಯೋತಿ ದಂಪತಿ ಪುತ್ರ), ವೈಭವಿ ಕೆ (ಕರುಣಾಕರ ಸುವರ್ಣ ಹಾಗೂ ಕುಸುಮ ಕೆ. ಸುವರ್ಣ ದಂಪತಿ ಪುತ್ರಿ) ಮತ್ತು ಆಶಿಕ ಎಂ ( ಮನೋಹರ್ ಹಾಗೂ ಸವಿತಾ ದಂಪತಿ ಪುತ್ರಿ)ರವರನ್ನೊಳಗೊಂಡ ತಂಡ ಹಾಗೂ ವಿಜ್ಞಾನ ಮಾದರಿ ಸ್ಪರ್ಧೆ ಯಲ್ಲಿ ಮಹತಿ ರಾಣಿ ಪಿ ಎಸ್(ಸುಧಾಕರ್ ನಾಯ್ಕ್ ಹಾಗೂ ನಿಶಿತ ಕೆ. ಕೆ. ದಂಪತಿ ಪುತ್ರಿ)ಪ್ರಥಮ ಸ್ಥಾನ ಪಡೆದು ಹೈದರಾಬಾದ್ ನಲ್ಲಿ ನಡೆಯಲಿರುವ ಕ್ಷೇತ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಪ್ರಯೋಗಾತ್ಮಕ ವಿಜ್ಞಾನ ಜೀವಶಾಸ್ತ್ರ ವಿಭಾಗದಲ್ಲಿ ಅದೇಶ್ ಬಿ ರೈ (ಗಣೇಶ್ ಪ್ರಸಾದ್ ರೈ ಹಾಗೂ ಅನುಪಮಾ ಜಿ ರೈ ದಂಪತಿ ಪುತ್ರ) ದ್ವಿತೀಯ, ತನ್ವಿತ್ ಮಂಜುನಾಥ್ ( ಮಂಜುನಾಥ್ ಕೆ ಹಾಗೂ ಪದ್ಮಾವತಿ ದಂಪತಿ ಪುತ್ರ ) ರಸಾಯನಶಾಸ್ತ್ರ ವಿಭಾಗದಲ್ಲಿ ದ್ವಿತೀಯ ಹಾಗೂ ಧನ್ ರಾಜ್ (ಪದ್ಮಯ್ಯ ಗೌಡ ಹಾಗೂ ಜಯಂತಿ ದಂಪತಿ ಪುತ್ರ) ಭೌತಶಾಸ್ತ್ರ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಸಂಸ್ಥೆಯ ಪ್ರಾಂಶುಪಾಲ ಎಚ್. ಕೆ. ಪ್ರಕಾಶ್ ತಿಳಿಸಿದ್ದಾರೆ.