ರಾಮಕುಂಜ: ಕಡಬ ತಾಲೂಕು ವಾಲಿಬಾಲ್ ಅಸೋಸಿಯೇಶನ್ನವರು ಕಡಬ ಸೈಂಟ್ ಆನ್ಸ್ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ವಾಲಿಬಾಲ್ ಆಟಗಾರರ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ರಾಮಕುಂಜ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿನಿಯರಾದ ಅನ್ವಿತಾ ಎಮ್.ಹೆಚ್(ಅರಂತಬೈಲು ಹೊನ್ನಪ್ಪ ಗೌಡ ಹಾಗೂ ಚಂದ್ರಾವತಿ ದಂಪತಿಯ ಪುತ್ರಿ), ವಂದಿತಾ(ಕಲ್ಕಾಡಿ ಬಾಲಣ್ಣ ಹಾಗೂ ಸುಂದರಿ ದಂಪತಿಯ ಪುತ್ರಿ), ಪೃಥ್ವಿ ಪಿ.ಎಸ್.( ಕೊಯಿಲ ಕೆ.ಸಿ. ಫಾರ್ಮ್ ಸೀತಾರಾಮ ಗೌಡ ಹಾಗೂ ಲಲಿತ ದಂಪತಿಯ ಪುತ್ರಿ), ಎಸ್.ಎಲ್. ಪ್ರದಾ(ಕಾಯರಟ್ಟ ಲಿಂಗಪ್ಪ ಗೌಡ ಹಾಗೂ ಲೀಲಾವತಿ ದಂಪತಿಯ ಪುತ್ರಿ), ಪ್ರೀತಂ(ಬುಡೇರಿಯ ಕುಂಞ ಹಾಗೂ ಗೀತಾ ದಂಪತಿಯ ಪುತ್ರ), ಅಝೀಂ(ಆತೂರು ಬೈಲು ಅಶ್ರಫ್ ಹಾಗೂ ನೇಬಿಸ ದಂಪತಿಯ ಪುತ್ರ), ಅಬೂಬಕ್ಕರ್ ಸಿದ್ದಿಕ್(ಕುಂಡಾಜೆ ಅಬ್ದುಲ್ ರಝಾಕ್ ಹಾಗೂ ಸಫಿಯಾ ದಂಪತಿಯ ಪುತ್ರ)ರವರು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಇವರು ಶಾಲೆಯ ಮುಖ್ಯಗುರು ಸತೀಶ್ ಭಟ್ರವರ ಸಹಕಾರದಿಂದ ಮತ್ತು ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿಯಾದ ಪ್ರಫುಲ್ಲಾ ರೈ, ಶಾಲೆಯ ಹಿರಿಯ ವಿದ್ಯಾರ್ಥಿಗಳಾದ ಶಬೀರ್ ಬಿ.ಕೆ. ಹಾಗೂ ಅಬ್ದುಲ್ ಅಝೀಝ್ರವರಿಂದ ಮಾರ್ಗದರ್ಶನ ಪಡೆದುಕೊಂಡಿದ್ದರು. ಅ.29ರಂದು ಜಿಲ್ಲಾಮಟ್ಟದ ವಾಲಿಬಾಲ್ ಪಂದ್ಯಾಟವು ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆಯಲಿದೆ.