ಸವಣೂರಿನವರು ಸಾಧನ ಶೀಲರು- ಶಿವರಾಮ ಏನೇಕಲ್
- ಪದಗ್ರಹಣ
- ಗಿರಿಶಂಕರ ಸುಲಾಯ
- ತಾರನಾಥ ಕಾಯರ್ಗ
ಸವಣೂರು : ರೋಟರಿ ಕ್ಲಬ್ ಪುತ್ತೂರು ಈಸ್ಟ್ ಪ್ರಾಯೋಜಿತ ಸವಣೂರು ರೋಟರಿ ಸಮುದಾಯ ದಳದ ಪದಗ್ರಹಣ ಸಮಾರಂಭ ಸವಣೂರು ಯುವಕ ಮಂಡಲದ ಯುವ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ರೋಟರಿ ವಲಯ 5ರ ಅಸಿಸ್ಟೆಂಟ್ ಗವರ್ನರ್ ಶಿವರಾಮ ಏನೇಕಲ್ ಅವರು ಉದ್ಘಾಟಿಸಿ ಮಾತನಾಡಿ, ಸವಣೂರಿನ ಯುವಕರು ಹಾಗೂ ಹಿರಿಯರು ಸಾಧನ ಶೀಲರು, ಎಲ್ಲಾ ಕ್ಷೇತ್ರದಲ್ಲೂ ಸವಣೂರಿನವರು ಸಕ್ರೀಯರಾಗಿದ್ದಾರೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಪುತ್ತೂರು ಈಸ್ಟ್ ಅಧ್ಯಕ್ಷ ರೋ.ಶರತ್ ಕುಮಾರ್ ರೈ ವಹಿಸಿದ್ದರು.
ವೇದಿಕೆಯಲ್ಲಿ RI DIST 3181 ಕನ್ವೀನರ್ ಅಬ್ಬಾಸ್ ಕೆ. ಮುರ, ಝೋನ್ 5ರ ವಲಯ ಸೇನಾನಿ ಪುರಂದರ ರೈ ಮಿತ್ರಂಪಾಡಿ, ಝೋನ್ 5 ಆರ್.ಸಿ.ಸಿ. ಝೋನಲ್ ಕೋಆರ್ಡಿನೇಟರ್ ವಿಜಯ ಕುಮಾರ್ ಅಮೈ, ಕ್ಲಬ್ ಚೇರ್ಮನ್ ಆರ್.ಸಿ.ಸಿ. ಜಯರಾಮ ರೈ ನುಳಿಯಾಲು, ರೋಟರಿ ಕ್ಲಬ್ ಪುತ್ತೂರು ಈಸ್ಟ್ ನ ಕಮ್ಯುನಿಟಿ ಸರ್ವೀಸ್ ನಿರ್ದೇಶಕ ಸೂರ್ಯನಾಥ ಆಳ್ವ, ರೋಟರಿ ಕ್ಲಬ್ ಪುತ್ತೂರು ಈಸ್ಟ್ ನ ಕಾರ್ಯದರ್ಶಿ ಶಶಿಕಿರಣ್ ರೈ, ಸವಣೂರು ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಪಿ.ಡಿ.ಗಂಗಾಧರ ರೈ ದೇವಸ್ಯ ಉಪಸ್ಥಿತರಿದ್ದರು.
ಚೇತನ್ ಕುಮಾರ್ ಕೋಡಿಬೈಲು ಉದ್ಘಾಟಕರ ಪರಿಚಯ ಮಾಡಿದರು.
ಅಧ್ಯಕ್ಷರಾಗಿ ಗಿರಿಶಂಕರ ಸುಲಾಯ, ಕಾರ್ಯದರ್ಶಿಯಾಗಿ ತಾರನಾಥ ಕಾಯರ್ಗ
ಸವಣೂರು ರೋಟರಿ ಸಮುದಾಯ ದಳದ ಅಧ್ಯಕ್ಷರಾಗಿ ಗಿರಿಶಂಕರ ಸುಲಾಯ, ಕಾರ್ಯದರ್ಶಿಯಾಗಿ ತಾರನಾಥ ಕಾಯರ್ಗ, ಕೋಶಾಧಿಕಾರಿಯಾಗಿ ಕುಲಪ್ರಕಾಶ್ ಮೆದು, ನಿಯೋಜಿತ ಅಧ್ಯಕ್ಷರಾಗಿ ಸುರೇಶ್ ರೈ ಸೂಡಿಮುಳ್ಳು, ನಿಯೋಜಿತ ಉಪಾಧ್ಯಕ್ಷರಾಗಿ ಮೋಹನ್ ರೈ ಕೆರೆಕ್ಕೋಡಿ, ಸಮುದಾಯ ಸೇವೆಗಾಗಿ ಪ್ರಕಾಶ್ ಮಾಲೆತ್ತಾರು, ವೃತ್ತಿ ಸೇವೆಗಾಗಿ ನಾಗರಾಜ ನಿಡ್ವಣ್ಣಾಯ, ಅಂತರಾಷ್ಟ್ರೀಯ ಸೇವೆಗಾಗಿ ತೀರ್ಥರಾಮ ಕೆಡೆಂಜಿ, ಸಾರ್ಜೆಂಟ್ ಆಗಿ ಲೋಕೇಶ್ ಕೆ., ಸದಸ್ಯರಾಗಿ ಬಾಬು ಡಿ.,ಪ್ರಕಾಶ್ ಕುದ್ಮನಮಜಲು, ಸುಪ್ರಿತ್ ರೈ ಖಂಡಿಗ, ವಿಜಯ ಕುಮಾರ್ ಕೆ., ಚೇತನ್ ಕೆ. ,ಶೀನಪ್ಪ ಶೆಟ್ಟಿ ನೆಕ್ರಾಜೆ, ಜಯಪ್ರಲಾಶ್ ಅಗರಿ, ಪುನೀತ್ ಮಾಚಿಲ ,ಜಿತಾಕ್ಷ ಜಿ., ಕೀರ್ತನ್ ಕೋಡಿಬೈಲು, ತೇಜಸ್ ಕೆ., ವಿನಯ್, ರಾಜೇಶ್ ರೈ ಮೊಗರು, ದಯಾನಂದ ಮೆದು ಪದಸ್ವೀಕಾರ ಮಾಡಿದರು.
ವಕೀಲರಾದ ಮಹೇಶ್ ಕೆ. ಸವಣೂರು ಅವರು ಕಾರ್ಯಕ್ರಮ ನಿರೂಪಿಸಿದರು.