ಅಕ್ಷಯ ಕಾಲೇಜಿನಲ್ಲಿ ಒಂದು ದಿನದ ಏವಿಯೇಷನ್‌ ಆಂಡ್‌ ಹಾಸ್ಪಿಟಲಿಟಿ ಮ್ಯಾನೇಜ್ಮೆಂಟ್  ಮಾಹಿತಿ ಕಾರ್ಯಗಾರ

0

ಪುತ್ತೂರು: ಅಕ್ಷಯ ಕಾಲೇಜಿನಲ್ಲಿ ಒಂದು ದಿನದ ಏವಿಯೇಷನ್‌ ಆಂಡ್‌ ಹಾಸ್ಪಟಲಿಟಿ ಮ್ಯಾನೇಜ್ಮೆಂಟ್ ನ ಮಾಹಿತಿ ಕಾರ್ಯಗಾರ ಅ.12 ರಂದು ಅಕ್ಷಯ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ಫಿಟ್‌ ನೆಸ್‌ ಆಂಡ್‌ ಫರ್ಪಾಂಮೆನ್ಸ್‌ ಇನ್‌ ಏವಿಯೇಷನ್  ಕುರಿತು ಮಾಹಿತಿ ಕಾರ್ಯಗಾರ ನಡೆಯಿತು.

ಕಾರ್ಯಕ್ರಮವನ್ನು ಕಾಲೇಜಿನ ಆಧ್ಯಕ್ಷ  ಜಯಂತ ನಡುಬೈಲು ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಕ್ಯಾರಿಯರ್‌ ಫೌಂಡೇಷನ್ ನ ತರಬೇತುದಾರರಾದ ಜಯಶ್ರೀ ಭಾಗವಹಿಸಿದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಡಾ|| ಅನು ಭಾಗ್ಯಂತ್ ಭಾಗವಹಿಸಿ ಏವಿಯೇಷನ್(Aviation) ಕೋರ್ಸ್ ಅಧ್ಯಯನ ಮಾಡುವುದರಿಂದ ವಿದ್ಯಾರ್ಥಿಗಳಿಗೆ ದೊರಕುವ ಪ್ರಯೋಜನಗಳು, ಉದ್ಯೋಗ ಅವಕಾಶಗಳ ಬಗ್ಗೆ ಮಾಹಿತಿ ನೀಡಿ, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸ ಕ್ಕೆ ಸಂಬಧ ಪಟ್ಟಂತೆ ಚಟುವಟಿಕೆಗಳನ್ನು ನಡೆಸಿದರು.

ಈ ಕಾರ್ಯಗಾರದಲ್ಲಿ ಕಾಲೇಜು ವಿದ್ಯಾರ್ಥಿಗಳೊಂದಿಗೆ ಇತರ ವಿದ್ಯಾರ್ಥಿಗಳು ಕೂಡ ಉಚಿತವಾಗಿ ಮಾಹಿತಿ ಕಾರ್ಯಗಾರದ ಸದುಪಯೋಗ ಪಡೆದುಕೊಂಡರು. ಕಾಲೇಜಿನ ಆಡಳಿತಾಧಿಕಾರಿ ಶ್ರೀ ಅರ್ಪಿತ್ ಟಿ. ಎ ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here