ನೆಲ್ಯಾಡಿ: ಕಡಬ ತಾಲೂಕಿನ ಗೋಳಿತ್ತೊಟ್ಟು ಗ್ರಾಮದ ಪೆರಣ ಭಂಡಾರ ಮನೆಯಲ್ಲಿ ನ.27ರಿಂದ ಡಿ.4ರ ತನಕ ಶ್ರೀ ಮದ್ಭಾಗವತ ಸಪ್ತಾಹ ಜ್ಞಾನ ಯಜ್ಞ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪೆರಣ ಭಂಡಾರ ಮನೆಯ ಮೊಕ್ತೇಸರರಾದ ವಿಶ್ವನಾಥ ಗೌಡ ಪೆರಣರವರ ಉಪಸ್ಥಿತಿಯಲ್ಲಿ ಶ್ರೀಮದ್ಭಾಗವತ ಸಪ್ತಾಹ ಯಜ್ಞ ಸಮಿತಿ ರಚಿಸಲಾಯಿತು.
ಅಧ್ಯಕ್ಷರಾಗಿ ಓಡ್ಯಪ್ಪ ಗೌಡ ಪೆರಣ, ಪ್ರಧಾನ ಕಾರ್ಯದರ್ಶಿಯಾಗಿ ಜನಾರ್ದನ ಗೌಡ ಬರಮೇಲು, ಕೋಶಾಧಿಕಾರಿಯಾಗಿ ಜನಾರ್ದನ ಗೌಡ ಪಟೇರಿ ಆಯ್ಕೆಗೊಂಡಿದ್ದಾರೆ.
ಗೌರವಾಧ್ಯಕ್ಷರಾಗಿ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿಯವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ತಿಮ್ಮಪ್ಪ ಗೌಡ ಕೋಡಿಯಡ್ಕ, ಕುಶಾಲಪ್ಪ ಗೌಡ ಅನಿಲ, ಕೊರಗಪ್ಪ ಗೌಡ ಕಲ್ಲಡ್ಕ, ನಾಗಪ್ಪ ಗೌಡ ಅಲಂಗೂರು, ಹೊನ್ನಪ್ಪ ಗೌಡ ಕುದ್ಕೋಳಿ, ಚೆನ್ನಪ್ಪ ಗೌಡ ಹೊಕ್ಕಿಲ, ಆನಂದ ಗೌಡ ಬರಮೇಲು, ಜತೆ ಕಾರ್ಯದರ್ಶಿಯಾಗಿ ಶೇಖರ ಗೌಡ ಬನತ್ತಕೋಡಿ, ಸದಸ್ಯರಾಗಿ ಕಮಲಾಕ್ಷ ಗೌಡ ಗೋಳಿತ್ತೊಟ್ಟು, ಮೋಹನ ಗೌಡ ಬೊಟ್ಟಿಮಜಲು ಪರಾರಿ, ಮಂಜಪ್ಪ ಗೌಡ ಪೆರ್ನೆ, ವೀರಪ್ಪ ಗೌಡ ಕಲ್ಲಡ್ಕ, ನೋಣಯ್ಯ ಗೌಡ ಅನಿಲ ಆಯ್ಕೆಯಾಗಿದ್ದಾರೆ.
ಗೌರವ ಸಲಹೆಗಾರರಾಗಿ ಅನಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದ ನಿತೇಶ್ ಬಳ್ಳಾಲ್, ಪಟ್ರಮೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಮೊಕ್ತೇಸರರಾದ ಶ್ರೀಧರ ಶಬರಾಯ, ರಾಮಕೃಷ್ಣ ಭಟ್ ಜ್ಯೋತಿರ್ವೈದ್ಯ ಆಂಜರ, ರಾಮಣ್ಣ ಗೌಡ ದೇವಸ್ಯಗುತ್ತು ಮುಗೇರಡ್ಕ, ಮನೋಹರ ಗೌಡ ಅಂತರ ಬಾರಿಕೆ ಮುಗೇರಡ್ಕ, ದಾಮೋದರ ಗೌಡ ಶೇಡಿಗುತ್ತು ವಳಾಲು, ಸತೀಶ್ ರೈ ಕೊಣಾಲುಗುತ್ತು, ಸಂಜೀವ ಗೌಡ ಮುರಿಯೇಲು ಆಯ್ಕೆಯಾಗಿದ್ದಾರೆ. ವಿವಿಧ ಸಮಿತಿ ಸಂಚಾಲಕರಾಗಿ ಆನಂದ ಗೌಡ ದೇವಸ್ಯಕೋಡಿ(ಆಹಾರ), ಶೇಖರ ಗೌಡ ಅನಿಲಬಾಗ್(ಆರ್ಥಿಕ), ಡೀಕಯ್ಯ ಗೌಡ ಕಲ್ಲಡ್ಕ(ನೀರಾವರಿ), ರಮೇಶ ಗೌಡ ಕಲ್ಲಡ್ಕ(ಚಪ್ಪರ, ಧ್ವನಿ ಮತ್ತು ಬೆಳಕು), ವೆಂಕಪ್ಪ ಗೌಡ ಡೆಬ್ಬೇಲಿ(ಕಾರ್ಯಾಲಯ), ನವೀನ ಗೌಡ ಕೋಡಿಯಡ್ಕ (ಅಲಂಕಾರ), ಬಾಲಕೃಷ್ಣ ಗೌಡ ಗೌಡತ್ತಿಗೆ(ಸ್ವಯಂ ಸೇವಕ), ಮಾಧವ ಗೌಡ ಪೆರಣ(ವೈದಿಕ), ಪುರುಷೋತ್ತಮ ಕುದ್ಕೋಳಿ(ಪ್ರಚಾರ), ಡೊಂಬಯ್ಯ ಗೌಡ ಗೌಡತ್ತಿಗೆ(ಹೊರೆಕಾಣಿಕೆ), ತಿರುಮಲ ಗೌಡತ್ತಿಗೆ(ಮಹಿಳಾ), ನಾರಾಯಣ ಗೌಡ ತೆಂಕುಬೈಲ್(ಸ್ವಾಗತ) ಆಯ್ಕೆಯಾಗಿದ್ದಾರೆ.