ನಿಡ್ಪಳ್ಳಿಯಲ್ಲಿ ಅಂಬೇಡ್ಕರ್ ಭವನಕ್ಕಾಗಿ ಅಸ್ತಿತ್ವಕ್ಕೆ ಬಂದ ಜೈ ಭೀಮ್ ಟ್ರಸ್ಟ್‌ನ ಅಧ್ಯಕ್ಷ ಮಹೇಶ್, ಕಾರ್ಯದರ್ಶಿ ಗುರುವ ಬಿ, ಉಪಾಧ್ಯಕ್ಷ ಶೇಖರ್ ಬಿ,

0

ಪುತ್ತೂರು: ನಿಡ್ಪಳ್ಳಿಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ಹೋರಾಟ ಮಾಡಿಕೊಂಡು ಬಂದ ಸಮಾನಮನಸ್ಕರಿಂದ ಅಸ್ತಿತ್ವಕ್ಕೆ ಬಂದಿರುವ ಜೈ ಭೀಮ್ ಟ್ರಸ್ಟ್‌ನ ಅಧ್ಯಕ್ಷರಾಗಿ ಮಹೇಶ್ ಕುಂಞಮೂಲೆ, ಕಾರ್ಯದರ್ಶಿಯಾಗಿ ಗುರುವ ಬಿ, ಉಪಾಧ್ಯಕ್ಷರಾಗಿ ಶೇಖರ್ ಬಿ  ಆಯ್ಕೆಗೊಂಡಿದ್ದಾರೆ.

ನಿಡ್ಪಳ್ಳಿಯಲ್ಲಿ ಅಂಬೇಡ್ಕರ್ ಭವನಕ್ಕೆ ಸರಕಾರದಿಂದ ನಿವೇಶನ ಮಂಜೂರುಗೊಂಡಿದ್ದು, ಮುಂದೆ ಎಲ್ಲಾ ರೀತಿಯ ವಿಚಾರಗಳಿಗೆ ಟ್ರಸ್ಟ್‌ನ ಅವಶ್ಯಕತೆ ಮನಗಂಡು ಜೈ ಭೀಮ್ ಟ್ರಸ್ಟ್ ರಚನೆಯಾಗಿದೆ. ಟ್ರಸ್ಟ್‌ನ ನಿರ್ದೇಶಕರಾಗಿ ಸುಂದರ ಡಿ ನಿಡ್ಪಳ್ಳಿ, ರವಿ ಕೆ ಕತ್ತಾಳೆಕಾನ, ಬಾಬು ಕೆ, ಅಣ್ಣು ಮುಗೇರ, ವಿಶ್ವನಾಥ ಬಿ, ಸುಂದರ ಎನ್, ಮೋನಪ್ಪ ಅವರು ಆಯ್ಕೆಗೊಂಡಿದ್ದಾರೆ. ಉಳಿದಂತೆ ಬಾಬು, ಅಣ್ಣುಮುಗೇರ, ವಿಶ್ವನಾಥ ಬಿ, ಸುಂದರ ಎನ್, ಮೋನಪ್ಪ, ಪೊಡಿಯ, ಬಾಬು ಜಿ, ರಮೇಶ್, ಅಶೋಕ, ವಸಂತ, ಜಯರಾಮ, ಜಗದೀಶ್ ಅವರು ಸದಸ್ಯರಾಗಿ ಆಯ್ಕೆಗೊಂಡಿದ್ದು, ಟ್ರಸ್ಟ್‌ನ ಸಭೆಯು ಈಗಾಗಲೇ ನಡೆದಿದೆ. ಸದಸ್ಯರಿಗೆ ಗುರುತಿನ ಚೀಟಿ ಮತ್ತು ವಿವಿಧ ಮಾಹಿತಿ ನೀಡುವ ಕುರಿತು ಸಭೆಯಲ್ಲಿ ನಿರ್ಣಯಿಸಲಾಗಿದೆ.

ಸಮಸ್ಯೆಗಳ ಪರಿಹಾರಕ್ಕಾಗಿ ಟ್ರಸ್ಟ್ ಅಸ್ತಿತ್ವಕ್ಕೆ:

ಬಡವರು, ಶೋಷಿತರು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ, ರಾಜಕೀಯವಾಗಿ , ಔದ್ಯೋಗಿಕವಾಗಿ ಮತ್ತು ಸಮಾಜದ ಎಲ್ಲಾ ಸ್ತರಗಳಲ್ಲೂ ತುಳಿತಕ್ಕೊಳಗಾಗಿರುವ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳುವ ನಿಟ್ಟಿನಲ್ಲಿ ಮತ್ತು ನಿಡ್ಪಳ್ಳಿಯಲ್ಲಿ ಅಂಬೇಡ್ಕರ್ ಭವನ ಬೇಕೆಂದು ಸಮಾನ ಮನಸ್ಕರ ಹೋರಾಟದ ಫಲವಾಗಿ ಇದೀಗ ಅಂಬೇಡ್ಕರ್ ಭವನಕ್ಕೆ ಸರಕಾರದಿಂದ ನಿವೇಶನ ಮಂಜೂರುಗೊಂಡಿದೆ. ಮುಂದೆ ಇಲ್ಲೊಂದು ಟ್ರಸ್ಟ್‌ನ ಅಗತ್ಯವಿದೆಯೆಂದು ನಿರ್ಣಯಿಸಿ ಸಮಾನಮನಸ್ಕರು ಸೇರಿ ಜೈ ಭೀಮ್ ಟ್ರಸ್ಟ್ ಅನ್ನು ಸ್ಥಾಪನೆ ಮಾಡಿದ್ದೇವೆ ಎಂದು ಟ್ರಸ್ಟ್‌ನ ಅಧ್ಯಕ್ಷ ಮಹೇಶ್ ಮತ್ತು ಕಾರ್ಯದರ್ಶಿ ಗುರುವ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here