




ಪುತ್ತೂರು: ಡಿ.13ರ ರಾತ್ರಿ ಸವಣೂರಿನಲ್ಲಿ ಸ್ಕೂಟರ್ ಅಪಘಾತಗೊಂಡು ಪುತ್ತೂರು ವಿಶ್ವಕರ್ಮ ಮಹಿಳಾ ಮಂಡಳಿ ಕಾರ್ಯದರ್ಶಿ ಭವ್ಯ ವಾದಿರಾಜ್ ಅವರು ತೀವ್ರ ಗಾಯಗೊಂಡ ಬಗ್ಗೆ ವರದಿಯಾಗಿದೆ.
ನರಿಮೊಗರು ಗ್ರದ ಪುತ್ತಿಲ ನಿವಾಸಿ ವಾದಿರಾಜ್ ಅವರ ಪತ್ನಿ ಪುತ್ತೂರು ವಿಶ್ವಕರ್ಮ ಮಹಿಳಾ ಮಂಡಳಿಯ ಕಾರ್ಯದರ್ಶಿ ಭವ್ಯ ವಾದಿರಾಜ್ ಅವರು ಗಾಯಗೊಂಡವರು. ಅವರು ಸವಣೂರಿನಲ್ಲಿ ಅನಾರೋಗ್ಯ ಪೀಡಿತ ಮಗುವೊಂದನ್ನು ನೋಡಲು ಅಕ್ಕನ ಮಗನೊಂದಿಗೆ ಸ್ಕೂಟರ್ ನಲ್ಲಿ ಹೋಗುತ್ತಿದ್ದ ವೇಳೆ ಅವರ ಸ್ಕೂಟರ್ ಸವಣೂರಿನಲ್ಲಿ ಅಪಘಾತಗೊಂಡಿದೆ. ತೀವ್ರ ಗಾಯಗೊಂಡ ಭವ್ಯ ಅವರನ್ನು ಮಂಗಳೂರು ಪಸ್ಟ್ ನ್ಯೂರೋ ಆಸ್ಪತ್ರೆಗೆ ದಾಖಲಿಸಲಾಗಿದೆ.







