ಬಡಗನ್ನೂರು: ಪಡುಮಲೆ ಪೂಮಾಣಿ-ಕಿನ್ನಿಮಾಣಿ ಹಾಗೂ ವ್ಯಾಘ್ರಚಾಮುಂಡಿ (ರಾಜನ್ ದೈವ) ದೈವಸ್ಥಾನದಲ್ಲಿ ತುಲಾ ಸಂಕ್ರಮಣದ ಶುಭ ದಿನದಂದು ಶ್ರೀ ವ್ಯಾಘ್ರ ಚಾಮುಂಡಿ ದೈವಕ್ಕೆ ನವಾನ್ನ (ಪುದ್ವಾರ್ ಮೆಚ್ಚಿ) ನೇಮ ನಡೆಯಿತು .
ಬೆಳಗ್ಗೆ 6 ತೆಂಗಿನಕಾಯಿ ಗಣಪತಿ ಹೋಮ, ಬಳಿಕ ಉಳ್ಳಾಕುಲು ಮತ್ತು ರಾಜನ್ ದೈವಕ್ಕೆ ತಂಬಿಲ ಸೇವೆ ನಡೆದು. 11 ರಿಂದ ಪುದ್ವಾರ್ ಮೆಚ್ಚಿ ನೇಮ ಪ್ರಸಾದ ವಿತರಣೆ ಬಳಿಕ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.
ವೇದಮೂರ್ತಿ ಗಣೇಶ ಭಟ್ ನೇತೃತ್ವದಲ್ಲಿ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಪ್ರಧಾನ ಅರ್ಚಕ ಮಹಾಲಿಂಗ ಛಟ್ ಉಪಸ್ಥಿತಿಯಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆಯಿತು.
ಈಸಂದರ್ಭದಲ್ಲಿ ಸಮಿತಿ ಸದಸ್ಯರಾದ ರವಿರಾಜ ರೈ ಸಜಂಕಾಡಿ, ದಯಾ ವಿ ರೈ ಬೆಳ್ಳಿಪ್ಪಾಡಿ, ಶಶಿಧರ್ ರೈ ಕುತ್ಯಾಳ, ಚಿದಾನಂದ ಗೌಡ ಸಾರಕೂಟೇಲು , ಶ್ರೀಧರ ನಾಯ್ಕ ನೆರ್ಲಪ್ಪಾಡಿ, ವಿಶ್ವನಾಥ ಪೂಜಾರಿ ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಭಟ್ ಸಿ.ಯಚ್, ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಸಂಜೀವ ರೈ ಕೆ.ಪಿ, ಉತ್ಸವ ಸಮಿತಿ ಅಧ್ಯಕ್ಷ ರಾಮಣ್ಣ ಗೌಡ ಬಸವ ಹಿತ್ತಿಲು ಮತ್ತು ಸಮಿತಿ ಸದಸ್ಯರುಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದರು.