ಪುತ್ತೂರು ಬ್ಲಾಕ್ ಕಾಂಗ್ರೆಸ್ ನಿಂದ ಪತ್ರಿಕಾಗೋಷ್ಠಿ :ಜಿಲ್ಲೆಯಲ್ಲಿ ಬಿಜೆಪಿಯ ಬಂಡವಾಳ ಬಯಲಾಗಿದೆ:ಅಮಳ ರಾಮಚಂದ್ರ

0

ಪುತ್ತೂರು:ಬಿಜೆಪಿ ತನ್ನ ಅತಿರೇಖದ ಕೆಲಸಗಳಿಂದ ಪದೇ-ಪದೇ ಜನರಿಂದ ಛೀಮಾರಿ ಹಾಕಿಸಿಕೊಳ್ಳುತ್ತಲೇ ಇದೆ.ಅದರಲ್ಲೂ ಇತ್ತೀಚೆಗೆ ನಡೆದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮೇಲೆ ದಾಳಿ ನಡೆಸಲಾಗಿದೆ ಎನ್ನಲಾದ ಪ್ರಹಸನ ಹಾಗೂ ಸುರತ್ಕಲ್ ಟೋಲ್‌ಗೇಟ್ ವಿರುದ್ದ ಪ್ರತಿಭಟನೆಗೆ ಉದ್ದೇಶಿಸಿದ್ದ ಪ್ರತಿಭಟನಾಕಾರರಿಗೆ ಪೊಲೀಸರಿಗೆ ಬಿಜೆಪಿಯ ನಾಯಕರ ಕುಮ್ಮಕ್ಕಿನ ಮೂಲಕ ನೋಟಿಸ್ ನೀಡಿ ಹೇಡಿತನ ತೋರಿಸಿದ ಪ್ರಕರಣಗಳನ್ನು ಕಾಂಗ್ರೆಸ್ ಕಠಿಣವಾಗಿ ಖಂಡಿಸುತ್ತದೆ ಹಾಗೂ ಅ.18ರಂದು ಸುರತ್ಕಲ್ ಟೋಲ್ ಗೇಟ್ ಬಳಿ ನಡೆಯಲಿರುವ ಪ್ರತಿಭಟನೆಗೆ ಸಂಪೂರ್ಣ ಬೆಂಬಲ ನೀಡಲಿದ್ದೇವೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಕೆಪಿಸಿಸಿ ರಾಜ್ಯ ವಕ್ತಾರ ಅಮಳ ರಾಮಚಂದ್ರ ಹೇಳಿದರು.


ಅವರು ಅ.17 ರಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿರು.
“ಹರೀಶ್ ಪೂಂಜಾ ಓರ್ವ ಸ್ಪುರದ್ರೂಪಿ ಶಾಸಕ ಅವರಿಗೆ ಸಿನೆಮಾಕ್ಕೆ ಸೇರಿದ್ದರೆ ಒಳ್ಳೆಯ ನಟನಾ ಸಾಮರ್ಥ್ಯವಿರುತ್ತಿತ್ತು.ಇತ್ತೀಚೆಗೆ ತನ್ನ ಮೇಲೆ ದಾಳಿ ಮಾಡಲಾಗಿದೆ ಎಂದು ನಿರ್ದೇಶನ,ನಟನೆ ,ಚಿತ್ರಕಥೆ,ಸಂಭಾಷಣೆಗಳೆಲ್ಲವನ್ನು ತಾವೇ ಬರೆದುಕೊಂಡು ಬಳಿಕ ನಗೆಪಾಟಲಿಗೀಡಾಗಿದ್ದಾರೆ.ಮಾಧ್ಯಮದೊಂದಿಗೆ ಮಾತನಾಡುವಾಗ ಪರಾಕಾಯ ಪ್ರವೇಶ ಮಾಡಿ ಘಟನೆಯನ್ನು ತನ್ನ ಅಸ್ಪಷ್ಟ ಮಾತುಗಳಿಂದ ಹೇಳುವಾಗಲೇ ಅದು ಒಂದು ನಾಟಕವೆಂಬುದು ತಿಳಿದುಬರುತ್ತಿತ್ತು.ಊಹಾಪೋಹದ ಮಾತುಗಳ ಮೂಲಕ ಹಾಲಿವುಡ್ ಸಿನೆಮಾಗಳನ್ನು ಸ್ಮರಿಸಿಕೊಂಡು ಕಥೆಕಟ್ಟಿ ಬಳಿಕ ಎಲ್ಲರೂ ನಗಾಡುವಂತೆ ಮಾಡಿದ್ದಾರೆ.

ಇದು ಓರ್ವ ಜನಪ್ರತಿನಿಧಿಗೆ ಶೋಭೆ ತರುವಂತದ್ದಲ್ಲ.ಮಾಧ್ಯಮದೊಂದಿಗೆ ಮಾತನಾಡುವಾಗ ರಿಯಾಜ್ ನನ್ನು ಜಿಹಾದಿ ಎಂದು ಕರೆದಿದ್ದು ತನ್ನನ್ನು ಹಿಂದುತ್ವದ ಶಾಸಕನೆಂದು ಬಿಂಬಿಸಿದ್ದಾರೆ.ಈ ರೀತಿ ಪ್ರಹಸನ ಮಾಡುವ ಬದಲು ಅವರು ಕುತ್ತಿಗೆಗೆ ಒಂದು ‘ತಾನೊಬ್ಬ ಹಿಂದೂ ಶಾಸಕ ಆ ಕಕಾರಣಕ್ಕಾಗಿ ಜಿಹಾದಿಗಳು ತನ್ನನ್ನು ಹತ್ಯೆ ಮಾಡಲು ಸಂಚು ರೂಪಿಸುತ್ತಿದ್ದಾರೆಂದು’ ಬರೆದ ಬೋರ್ಡ್ ಹಾಕಿಕೊಂಡು ತಿರುಗಾಡಲಿ ಮತ್ತು ಪ್ರಹಸನ ಮಾಡುವಾಗ ಬಿಜೆಪಿಯ ಇನ್ನೋರ್ವ ಪ್ರಮುಖ ನಟ ನಳಿನ್ ಕುಮಾರ್ ಕಟೀಲ್ ರವರೊಂದಿಗೆ ತರಬೇತಿ ಪಡೆದುಕೊಳ್ಳಲಿ ಎಂದು ವ್ಯಂಗ್ಯವಾಡಿದ ಅಮಳರು ಕಳೆದ 6-7 ವರ್ಷಗಳಿಂದ ತೆರವಾಗದೇ ಇರುವ ಟೋಲ್ ಗೇಟ್ ತೆರವಾಗಿಸುವ ಕುರಿತು ಪ್ರತಿಭಟನೆಗೆ ಯೋಜಿಸಿದ್ದ ಪ್ರತಿಭಟನೆಕಾರರ ಮನೆಗೆ ಮಧ್ಯರಾತ್ರಿ ಮನೆಗೆ ಹೋಗಿ ಅವರಿಗೆ ನೋಟಿಸ್ ನೀಡಿದ ಕಾರ್ಯ ಮಂಗಳೂರಿನಲ್ಲಾಗಿದೆ.ಆ ಮೂಲಕ ಪ್ರತಿಭಟನಾ ಕಾರರ ಮನೆಯಲ್ಲಿ ಭಯದ ವಾತಾವರಣ ಮೂಡಿಸುವ ಕೆಲಸ ನಡೆದಿದೆ ಇದು ಬಿಜೆಪಿಯ ಸಂಸದ ಹಾಗೂ ಶಾಸಕರ ಕುಮ್ಮಕ್ಕಿನಿಂದ ನಡೆದಿದ್ದು ಬಿಜೆಪಿ ನಾಯಕರಿಗೆ ಟೋಲ್ಗೇಟ್ ತೆರವು ಮಾಡಲು ಮನಸ್ಸಿಲ್ಲ ಯಾಕೆಂದರೆ ಚುನಾವಣೆಯ ಸಂದರ್ಭದಲ್ಲಿ ಇದೇ ಮಲ್ಟಿನ್ಯಾಷನಲ್ ಕಂಪನಿಗಳಿಂದ ಫಂಡಿಂಗ್ ನೀಡಲಾಗುತ್ತದೆ ಆದ್ದರಿಂದ ಪ್ರತಿಭಟನಾಕಾರರನ್ನು ಹತ್ತಿಕ್ಕುವ ಪ್ರಯತ್ನವನ್ನು ಮಾಡಿದೆ.ಈ ಎಲ್ಲಾ ಕೆಲಸದಿಂದ ಬಿಜೆಪಿಯ ಬಂಡವಾಳ ಬಯಲಾಗಿದೆ.ಈ ಬೆಳವಣಿಗೆಗಳನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ ಎಂದರು

LEAVE A REPLY

Please enter your comment!
Please enter your name here