ಜೋಸ್ ಆಲುಕ್ಕಾಸ್ ಜ್ಯುವೆಲ್ಲರಿಯ 58ನೇ ವಾರ್ಷಿಕೋತ್ಸವ

0

ರೂ. 5 ಕೋಟಿವರೆಗಿನ ಖಚಿತ ಉಡುಗೊರೆಗಳ ಮಹಾಪೂರ – ಗ್ರಾಹಕರಿಂದ ಉತ್ತಮ ಸ್ಪಂದನೆ

58 ರ ಸಂಭ್ರಮಕ್ಕೆ ವಿಶೇಷ ಆಫರ್

  •  ಚಿನ್ನಾಭರಣಗಳ ಮೇಕಿಂಗ್ ಚಾರ್ಜಸ್ ಶೇ. 4.99 ರಿಂದ ಆರಂಭ
  •  ವಜ್ರಾಭರಣ ಖರೀದಿಯಲ್ಲಿ ಶೇ. 20 ರಿಯಾಯಿತಿ
  •  ವಿಶೇಷ ವಜ್ರದ ನೆಕ್ಲೇಸ್ ಗಳು ರೂ. 1,49,000 ದಿಂದ ಆರಂಭ
  •  ಹಳೇ ಚಿನ್ನಾಭರಣಗಳೊಂದಿಗೆ ಎಕ್ಸ್ಚೇಂಜ್


ಪುತ್ತೂರು: ಅಂತರಾಷ್ಟ್ರೀಯ ಖ್ಯಾತಿಯ ಚಿನ್ನಾಭರಣ ಮಳಿಗೆ ಜೋಸ್ ಆಲುಕ್ಕಾಸ್ ಸಂಸ್ಥೆ ತನ್ನ 58ನೇ ವಾರ್ಷಿಕೋತ್ಸವ ಮತ್ತು ದೀಪಾವಳಿ ಹಬ್ಬವನ್ನು ಗ್ರಾಹಕರೊಂದಿಗೆ ಆಚರಿಸಲು ತೀರ್ಮಾನಿಸಿದೆ. ಈ ನಿಟ್ಟಿನಲ್ಲಿ ತನ್ನ ಶಾಖೆಗಳಲ್ಲಿ ಗ್ರಾಹಕರಿಗೆ 5ಕೋಟಿ ರೂಪಾಯಿಯ ಉಡುಗೊರೆಗಳ ಜೊತೆಗೆ ಪ್ರತೀ ಖರೀದಿಗೆ ವಿಶೇಷ ರಿಯಾಯಿತಿಯನ್ನು ಸಂಸ್ಥೆ ನೀಡಲಿದೆ. ಈಗಾಗಲೇ ಪುತ್ತೂರಿನ ಮುಖ್ಯರಸ್ತೆಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿಯ ಶಾಖೆಯಲ್ಲಿ ವಿಶೇಷ ಆಫರ್ ನಡೆಯುತ್ತಿದ್ದು, ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಜೋಸ್ ಆಲುಕ್ಕಾರವರು 1964ರಲ್ಲಿ ಜೋಸ್ ಆಲುಕ್ಕಾಸ್ ಸಂಸ್ಥೆಯನ್ನು ಹುಟ್ಟುಹಾಕಿದರು. ಆ ಬಳಿಕ ಅವರು ಚಿನ್ನದ ಉದ್ಯಮದಲ್ಲಿ ನಿಯಮಿತ ಮೈಲುಗಲ್ಲನ್ನು ಸ್ಥಾಪಿಸಿದರು. ಮಾತ್ರವಲ್ಲದೆ ಭಾರತದಲ್ಲಿ ಚಿನ್ನದ ಆಭರಣಗಳಿಗೆ 916 ಹಾಲ್ ಮಾರ್ಕ್ ಪ್ರಮಾಣೀಕರಣವನ್ನು ಪರಿಚಯಿಸಿದ ಮೊದಲ ವ್ಯಕ್ತಿ ಅವರಾಗಿದ್ದಾರೆ. ನಂತರ ಇದು ಉದ್ಯಮ ಮಾನದಂಡವಾಯಿತು. ಆ ಬಳಿಕ ಅವರ ನಾಯಕತ್ವದಲ್ಲಿ ಆಭರಣಗಳ ವ್ಯಾಪಕ ಸಂಗ್ರಹವನ್ನು ಪ್ರದರ್ಶಿಸುವ ಚಿನ್ನದ ಸೂಪರ್ ಮಾರ್ಕೆಟ್ ಎಂಬ ಪರಿಕಲ್ಪನೆಯನ್ನು ದೇಶಕ್ಕೆ ಪರಿಚಯಿಸಲಾಯಿತು. ಈ ಹೆಗ್ಗಳಿಕೆಯೊಂದಿಗೆ ಮತ್ತು ಗುಣಮಟ್ಟದ ಚಿನ್ನಾಭರಣಗಳಿಂದಾಗಿ ಜೋಸ್ ಆಲುಕ್ಕಾಸ್ ಗ್ರಾಹಕರ ಮನೆ-ಮನದಲ್ಲಿದೆ.

58 ನೇ ವಾರ್ಷಿಕೋತ್ಸವ – ಗ್ರಾಹಕರ ಸಂಭ್ರಮ:

ಇದೀಗ ಸಂಸ್ಥೆ ತನ್ನ 58ನೇ ವಾರ್ಷಿಕೋತ್ಸವದ ಪ್ರಯುಕ್ತ ತನ್ನ ಎಲ್ಲಾ ಶಾಖೆಗಳಲ್ಲಿಯೂ ಗ್ರಾಹಕರಿಗೆ 5 ಕೋಟಿ ರೂಪಾಯಿವರೆಗಿನ ಉಡುಗೊರೆಗಳನ್ನು ನೀಡಲು ತೀರ್ಮಾನಿಸಿದೆ. ಚಿನ್ನಾಭರಣಗಳ ಮೇಕಿಂಗ್ ಚಾರ್ಜಸ್ ಶೇ. 4.99 ರಿಂದ ಆರಂಭ, ವಜ್ರಾಭರಣ ಖರೀದಿಯಲ್ಲಿ 20% ರಿಯಾಯಿತಿ ದೊರೆಯಲಿದೆ. ವಿಶೇಷ ವಜ್ರದ ನೆಕ್ಲೇಸ್ ಗಳು ರೂ. 1,49,000 ದಿಂದ ಆರಂಭವಾಗಲಿದೆ. ಅಲ್ಲದೇ ಹಳೇ ಚಿನ್ನಾಭರಣಗಳನ್ನು ಹೊಸದಕ್ಕೆ ಎಕ್ಸ್ಚೇಂಜ್ ಮಾಡಲು ಅವಕಾಶವಿದ್ದು, ಹಬ್ಬಗಳ ಸಾಲನ್ನು ಹೊಸ ಚಿನ್ನಾಭರಣಗಳ ದಿರಿಸಿನೊಂದಿಗೆ ಆಚರಿಸಲು ಸುವರ್ಣಾವಕಾಶವಿದೆ. ಎಸ್‌ಬಿಐ ಕಾರ್ಡ್ ಪಾವತಿಗೆ ಶೇ. 5 ರಷ್ಟು ಕ್ಯಾಶ್‌ಬ್ಯಾಕ್ ಸೌಲಭ್ಯವನ್ನೂ ಸಂಸ್ಥೆ ಕಲ್ಪಿಸಿದೆ. ಒಟ್ಟಿನಲ್ಲಿ ಸಂಭ್ರಮದ ಹಬ್ಬವನ್ನು ಸ್ವಾಗತಿಸಲು ನಾಡಿನೆಲ್ಲೆಡೆ ಕಾತುರದಲ್ಲಿರುವ ಜನರು ಹೊಸತನದ ಚಿನ್ನಾಭರಣಗಳೊಂದಿಗೆ ವಿಶೇಷ ಹುಮ್ಮಸ್ಸು, ಹುರುಪಿನೊಂದಿಗೆ ಹಬ್ಬ ಆಚರಿಸಲು ಜೋಸ್ ಆಲುಕ್ಕಾಸ್ ಅವಕಾಶ ಕಲ್ಪಿಸುತ್ತಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here