ಅ. 23: ಸಾಲ್ಮರ ದಾರುಲ್ ಹಸನಿಯಾದಲ್ಲಿ ಖ್ಯಾತ ವಾಗ್ಮಿ ಇ.ಪಿ.ಖಾಸಿಮಿಯವರಿಂದ ಮದ್ಹ್ ರಸೂಲ್ ಪ್ರಭಾಷಣ, ವಿದ್ಯಾರ್ಥಿಗಳ ಮೀಲಾದ್ ಕಲಾ ಪ್ರತಿಭಾ ಕಾರ್ಯಕ್ರಮ

0

ಪುತ್ತೂರು: ಪುತ್ತೂರಿನ ಸಾಲ್ಮರ ಸಾದಾತ್ ಮಹಲ್ ನಲ್ಲಿರುವ ದಾರುಲ್ ಹಸನಿಯಾ ವಿದ್ಯಾಸಂಸ್ಥೆಯ ಅಧೀನದ ಮರಿಯಂ ಹಿಫ್ಲುಲ್ ಖುರ್ ಆನ್ ಕಾಲೇಜ್ ವತಿಯಿಂದ ಈದ್ ಮೀಲಾದ್ ಪ್ರಯುಕ್ತ ಮದ್ಹ್ ರಸೂಲ್ ಪ್ರಭಾಷಣ, ವಿದ್ಯಾರ್ಥಿಗಳ ಕಲಾ ಪ್ರತಿಭಾ ಕಾರ್ಯಕ್ರಮ ಮತ್ತು ಮೌಲಿದ್ ಪಾರಾಯಣವು ಅ. 23 ರಂದು ಸಂಸ್ಥೆಯ ಸಭಾಂಗಣ ಸಾದಾತ್ ಮಹಲ್ ನಲ್ಲಿ ಜರಗಲಿದೆ ಎಂದು ದಾರುಲ್ ಹಸನಿಯಾ ವಿದ್ಯಾಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಸೈನಾರ್ ಹಾಜಿ ಸಿಟಿ ಬಝಾರ್ ರವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಅ.23 ರಂದು ಬೆಳಿಗ್ಗೆ ಗಂಟೆ 10 ಕ್ಕೆ ಮರ್ಹೂಂ ಸಯ್ಯಿದ್ ಹಸನ್ ಕೋಯ ತಂಙಳ್ ರವರ ದರ್ಗಾ ಝಿಯಾರತ್, ಬಳಿಕ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಸನ್ ಹಾಜಿ ಸಿಟಿ ಬಝಾರ್ ಅವರು ಧ್ವಜಾರೋಹಣ ನಡೆಸುವುದರೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದೆ.

ಬೆಳಿಗ್ಗೆ ಗಂಟೆ 10-30 ರಿಂದ ಸಂಜೆ ಗಂಟೆ 4-30 ರ ವರೆಗೆ ಸಂಸ್ಥೆಯಲ್ಲಿ ಕಲಿಯುವ ವಿದ್ಯಾರ್ಥಿಗಳ ವಿವಿಧ ಮೀಲಾದ್ ಕಲಾ ಪ್ರತಿಭಾ ಕಾರ್ಯಕ್ರಮ ಜರಗಲಿದೆ. ಸಂಜೆ ಗಂಟೆ 4-30 ಕ್ಕೆ ಮೌಲಿದ್ ಪಾರಾಯಣ ನಡೆಯಲಿದ್ದು, ಸಯ್ಯಿದ್ ಮುಝಮ್ಮಿಲ್ ತಂಙಳ್ ಕಾಸರಗೋಡು ಮತ್ತು ಸಯ್ಯಿದ್ ಯಹ್ಯಾ ತಂಙಳ್ ಸಾಲ್ಮರ ಅವರು ನೇತೃತ್ವ ನೀಡುವರು. ಸಂಜೆ ಗಂಟೆ 7-00 ರಿಂದ ಮದ್ಹ್ ರಸೂಲ್ ಪ್ರಭಾಷಣ ಮತ್ತು ಸಮಾರೋಪ ಸಮಾರಂಭ‌ ನಡೆಯಲಿದೆ. ಸಮಾರಂಭದಲ್ಲಿ ಕೇರಳದ ಖ್ಯಾತ ವಾಗ್ಮಿ, ವಿದ್ವಾಂಸ ಇ.ಪಿ.ಅಬೂಬಕ್ಕರ್ ಖಾಸಿಮಿ ಅವರಿಂದ ಮದ್ಹ್ ರಸೂಲ್ ಪ್ರಭಾಷಣ ನಡೆಯಲಿದೆ. ಸಂಸ್ಥೆಯ ಅಧ್ಯಕ್ಷ ಸಯ್ಯಿದ್ ಶರಫುದ್ದೀನ್ ತಂಙಳ್ ಸಮಾರಂಭದ ಅಧ್ಯಕ್ಷತೆ ವಹಿಸುವರು. ‘ಸಮಸ್ತ’ದ ಕೇಂದ್ರ ಮುಶಾವರ ಸದಸ್ಯ ಉಸ್ಮಾನುಲ್ ಫೈಝಿ ತೋಡಾರು ಕಾರ್ಯಕ್ರಮವನ್ನು ಉದ್ಗಾಟಿಸುವರು. ಎಸ್.ಎಂ.ತಂಙಳ್ ದುಃಆ ಆಶೀರ್ವಚನ ನೀಡುವರು. ಉಮರ್ ದಾರಿಮಿ ಸಾಲ್ಮರ ಅತಿಥಿ ಭಾಷಣ ಮಾಡಲಿದ್ದಾರೆ. 

ಇ.ಪಿ.ಖಾಸಿಮಿ

ಮೂರು ವರ್ಷಗಳು ಪೂರೈಸಿರುವ ಈ ವಿದ್ಯಾಸಂಸ್ಥೆ ಯಲ್ಲಿ ಪ್ರಸ್ತುತ ಒಟ್ಟು 40 ವಿದ್ಯಾರ್ಥಿಗಳು ಪವಿತ್ರ ಖುರ್ ಆನ್ ಕಂಠಪಾಠದ ಜೊತೆಗೆ ಧಾರ್ಮಿಕ ದಅವಾ ಕೋರ್ಸು ಮತ್ತು ಲೌಕಿಕ ಶಿಕ್ಷಣವನ್ನೂ ಪಡೆಯುತ್ತಿದ್ದಾರೆ.

ಸಮಾರಂಭದಲ್ಲಿ ಹಲವಾರು ಉಲಮಾ, ಉಮರಾ ನಾಯಕರು, ಸಾದಾತ್ ಗಳು, ಸಾಮಾಜಿಕ ಗಣ್ಯರು ಅತಿಥಿಗಳಾಗಿ ಭಾಗವಹಿಸುವರು.

ಅ. 23 ರಂದು ನಡೆಯುವ ಕಾರ್ಯಕ್ರಮದಲ್ಲಿ ತಾವೆಲ್ಲರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಹಸೈನರ್‌ ಹಾಜಿ ಮನವಿ ಮಾಡಿದರು. ಕೆ.ಎಂ.ಎ.ಕೊಡುಂಗಾಯಿ ಫಾಝಿಲ್ ಹನೀಫಿರವರು ಸ್ವಾಗತಿಸಿದರು. ಪತ್ರಿಕಾಗೋಷ್ಠಿಯಲ್ಲಿ  ದಾರುಲ್ ಹಸನಿಯಾ ಮರಿಯಂ ಹಿಫ್ಲುಲ್ ಖುರ್ ಆನ್ ಕಾಲೇಜಿನ ಅಧ್ಯಕ್ಷರು  ಸಯ್ಯಿದ್ ಸರಫುದ್ದೀನ್ ತಂಙಳ್ ಸಾಲ್ಮರ, ವ್ಯವಸ್ಥಾಪಕರಾದ ಅನ್ವರ್ ಮುಸ್ಲಿಯಾರ್ ಪುತ್ತೂರು , ಅಬ್ದುಲ್ ಕರೀಂ ದಾರಿಮಿ ಬೊಳ್ವಾರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here