ಎಸ್ ಆರ್ ಬಿಲ್ಡರ್ಸ್ ಆಂಡ್ ಡೆವಲಪರ್ಸ್‌ನಿಂದ ಪುತ್ತೂರಿನಲ್ಲಿ 5ನೇ ಬಡಾವಣೆ : ಮುರ ಸಮೀಪ ಅದ್ವಿತ್ ಲೇಔಟ್ ಲೋಕಾರ್ಪಣೆ

0

ಸಾಧಕರಿಗೆ ಸನ್ಮಾನ | 80ಕ್ಕೂ ಅಧಿಕ ಮಂದಿಗೆ ಗೌರವಾರ್ಪಣೆ


ತಾನೂ ಬೆಳೆಯುವುದರೊಂದಿಗೆ ಎಲ್ಲರೂ ಬೆಳೆಯಬೇಕೆಂಬ ಸದಾಶಯ ಇರಬೇಕು; ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ


ಪುತ್ತೂರು: ಬೆದ್ರಾಳ-ಮುಕ್ವೆಯಲ್ಲಿ ಅನಘ ವಸತಿ ಸಮುಚ್ಚಯ ನಿರ್ಮಾಣದ ಮೂಲಕ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿರುವ ಎಸ್.ಆರ್.ಬಿಲ್ಡರ್ಸ್ ಆಂಡ್ ಡೆವಲಪರ್ಸ್ ಸಂಸ್ಥೆಯ 5ನೇ ಬಡಾವಣೆ ಮುರ ಸಮೀಪ ಏಳು ಎಕರೆ ವಿಸ್ತೀರ್ಣದಲ್ಲಿ ನಿರ್ಮಿಸಿರುವ ’ಅದ್ವಿತ್ ಲೇ ಔಟ್’ನ ಲೋಕಾರ್ಪಣೆಯು ಡಿ.14ರಂದು ನಡೆಯಿತು. ಕಾರ್ಯಕ್ರಮದಲ್ಲಿ ಇಬ್ಬರು ಸಾಧಕರ ಸಹಿತ 80ಕ್ಕೂ ಅಧಿಕ ಮಂದಿಗೆ ಗೌರವಾರ್ಪಣೆ ಕಾರ್ಯಕ್ರಮ ನಡೆಯಿತು.


ಎಲ್ಲರೂ ಬೆಳೆಯಬೇಕೆಂಬ ಸದಾಶಯ ಇರಬೇಕು;
ಕುಕ್ಕೆ ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ಲೇಔಟ್ ಉದ್ಘಾಟಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಸ್ವಾಮೀಜಿ, ಭೂಮಿ ಇಲ್ಲದೆ ನಮ್ಮ ಬದುಕೇ ಇಲ್ಲ. ಎಸ್ ಆರ್ ಬಿಲ್ಡರ್ಸ್ ಆಂಡ್ ಡೆವಲಪರ್ಸ್‌ನ ಶಿವಪ್ರಸಾದ್ ಇಜ್ಜಾವು ಅವರು ಪುತ್ತೂರಿನಲ್ಲಿ 5ನೇ ಬಡಾವಣೆ ನಿರ್ಮಾಣ ಮಾಡಿ ಕೀರ್ತಿ ಗಳಿಸಿದ್ದಾರೆ. ಒಂದು ಬಡಾವಣೆಯಲ್ಲೇ ಒಬ್ಬ ವ್ಯಕ್ತಿಯ ಜಾತಕವನ್ನು ಜಾಲಾಡಿ ಬಿಡುತ್ತಾರೆ. ಹಾಗಿದ್ದಾಗ 1 ರಿಂದ 2ಕ್ಕೆ ಹೋಗಿದ್ದಾರೆ ಎಂದರೆ ಜನರ ವಿಶ್ವಾಸಗಳಿಸಿದ್ದಾರೆ ಎಂದರ್ಥ. 5ನೇ ಬಡಾವಣೆ ಮಾಡಿದ್ದಾರೆ ಎಂದರೆ ಶಿವಪ್ರಸಾದ್ ಅವರು ಅತ್ಯಂತ ವಿಶ್ವಾಸಗಳಿಸಿದ್ದಾರೆ ಎಂದರ್ಥ. ಅವರು ವಿಶ್ವಾಸದ ಫಲವಾಗಿ ಬೆಳೆದಿದ್ದಾರೆ. ಇದೇ ವಿಶ್ವಾಸದಲ್ಲಿ ಇನ್ನಷ್ಟು ಬಡಾವಣೆ ಅವರು ಮಾಡಲಿದ್ದಾರೆ. ಜನರಿಗೆ ಅವರು ಪ್ರೀತಿ ಪಾತ್ರರಾಗಿದ್ದಾರೆ. ತಾನು ಗಳಿಸಿದ ಸಂಪತ್ತನ್ನು ಇನ್ನೊಂದಷ್ಟು ಮಂದಿಗೆ ಹಂಚಿ, ತಾನೂ ಬೆಳೆಯುವುದರೊಂದಿಗೆ ಎಲ್ಲರೂ ಬೆಳೆಯಬೇಕೆಂಬ ಸದಾಶಯ ಅವರಲ್ಲಿದೆ. ಅವರು ತನ್ನ ಜೊತೆ ಇರುವ ನೌಕರರ ಮತ್ತು ಆಪ್ತ ಮಿತ್ರರನ್ನು ಗೌರವಿಸಿದ್ದಾರೆ. ಇದು ಅವರ ದೊಡ್ಡ ಗುಣ ಎಂದರು.


ಇತಿಮಿತಿಯಲ್ಲಿ ಬದುಕಲು ಬಡಾವಣೆ ಅವಕಾಶ ಮಾಡಿಕೊಡುತ್ತದೆ:
ಭೂಮಿಯ ವ್ಯವಹಾರದಲ್ಲಿ ತುಂಬಾ ಸಂಕಷ್ಟ, ಸವಾಲುಗಳನ್ನು ಎದುರಿಸುವ ಅನಿವಾರ್ಯತೆ ಬರುತ್ತದೆ. ಎಷ್ಟೋ ಸಂದರ್ಭ ಇದೆಲ್ಲ ಬೇಡ ಎಂದು ಹಿಂಜರಿಯುವವರು ಹಲವರಿದ್ದಾರೆ. ಆದರೆ ಎಷ್ಟೇ ವಿಘ್ನ ಬಂದರೂ ಅದನ್ನು ಎದುರಿಸಿ ನಿಲ್ಲುವ ಶಕ್ತಿ ಇದ್ದರೆ ಅದು ಸಾಧಕರಿಗೆ ಮಾತ್ರ. ಹಾಗಾಗಿ ಶಿವಪ್ರಸಾದ್ ಅವರು ಈ ಭೂಮಿಯ ಬೆಳವಣಿಗೆಯಲ್ಲಿ ಎಲ್ಲರಿಗೂ ಉಪಕಾರ ಮಾಡುವಲ್ಲಿ ಯಶಸ್ವಿಯಾಗಿದ್ಧಾರೆ. ಯುವಕರು ಉದ್ಯೋಗದ ಕಡೆ ಆಕರ್ಷಿತರಾಗಿರುವುದರಿಂದ ಕೃಷಿ ಭೂಮಿ ಪಾಳು ಬೀಳುವ ಪರಿಸ್ಥಿತಿ ಇದೆ. ಇವತ್ತು ಜನರಿಗೆ ಏನು ಬೇಕೋ ಅದನ್ನು ಕೊಡುವ ಅನಿವಾರ್ಯತೆ ಇದೆ. ಒಬ್ಬರಿಗೊಬ್ಬರು ಹೊಂದಾಣಿಕೆಯಿಂದ ಹಾಗೂ ಬೇಕಾದ ಮೂಲ ಸೌಕರ್ಯದೊಂದಿಗೆ ತಮ್ಮ ಇತಿಮಿತಿಯಲ್ಲಿ ಬದುಕಲು ಇಂತಹ ಬಡವಾಣೆ ಅವಕಾಶ ಮಾಡಿಕೊಡುತ್ತದೆ ಎಂದು ಶ್ರೀಗಳು ಹೇಳಿದರು.


ಕೊಟ್ಟ ಮಾತಿನಂತೆ ನಡೆಯುವ ಸ್ವಭಾವ ಶಿವಪ್ರಸಾದರದ್ದು:
ಮುಖ್ಯ ಅತಿಥಿಯಾಗಿದ್ದ ಜಿ.ಎಲ್ ಆಚಾರ್ಯ ಜುವೆಲ್ಲರ‍್ಸ್‌ನ ಮುಖ್ಯಸ್ಥ ಜಿ.ಎಲ್ ಬಲರಾಮ ಆಚಾರ್ಯ ಅವರು ಮಾತನಾಡಿ, ಇದೊಂದು ಪುತ್ತೂರಿನ ಬೆಳವಣಿಗೆಯ ಪ್ರಮುಖ ಹಂತದ ಕಾರ್ಯಕ್ರಮ. ಇದಕ್ಕೆ ನಾವೆಲ್ಲ ಸಾಕ್ಷಿಯಾಗಿದ್ದೇವೆ. ಕಳೆದ ಎಂಟು ಹತ್ತು ವರ್ಷಗಳಿಂದ ದೊಡ್ಡ ಜಾಗ ಖರೀದಿಸಿ ಅಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಿ ಅತ್ಯುತ್ತಮ ಲೇ ಔಟ್ ಮಾಡಿಕೊಡುವ ಉದ್ಯಮ ಬಹಳಷ್ಟು ಬೆಳೆಯುತ್ತಿದೆ. ಕೃಷಿ ಕುಟುಂಬದಿಂದ ಬಂದು ಇಂಜಿನಿಯರಿಂಗ್ ಮಾಡಿ ಸಾಫ್ಟ್‌ ವೇರ್ ಕಂಪನಿಯಲ್ಲಿ ಕೆಲಸ ಮಾಡುವ ಬದಲು ಊರಿನಲ್ಲೇ ಉದ್ಯಮ ಪ್ರಾರಂಭಿಸಿ ಅದರಲ್ಲಿ ಯಶಸ್ಸು ಕಂಡ ಶಿವಪ್ರಸಾದ್‌ರವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅವರ ಯಶಸ್ಸಿಗೆ ತಂದೆ ತಾಯಿಯ ಮಾರ್ಗದರ್ಶನ ಸಿಕ್ಕಿದೆ. ಶಿವಪ್ರಸಾದ್ ಅವರು ಮಾತು ಕೊಟ್ಟಂತೆ ನಡೆಯುತ್ತಾರೆ ಎಂದರು.


ದೇವತಾ ಕಾರ್ಯ ಮಾಡಿದಾಗ ದೇವರು ಕೈ ಬಿಡುವುದಿಲ್ಲ:
ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಅವರು ಮಾತನಾಡಿ, ತನ್ನ ಸಂಪಾದನೆಯ ಒಂದು ಪಾಲು ಸಮಾಜಕ್ಕೆ ಖರ್ಚು ಮಾಡಿ ದೇವತಾ ಕಾರ್ಯ ಮಾಡಿದರೆ ದೇವರು ಕೈ ಬಿಡುವುದಿಲ್ಲ ಎಂಬುದಕ್ಕೆ ಶಿವಪ್ರಸಾದ್ ಅವರು ಸಾಕ್ಷಿಯಾಗಿದ್ದಾರೆ. ಅವರು ಪಂಜಿಗುಡ್ಡೆ ಪರಿಸರಕ್ಕೆ ಕಾಲಿಟ್ಟ ಬಳಿಕ ಯಾವುದೇ ಸಮಸ್ಯೆ ಉದ್ಬವಿಸಿಲ್ಲ. ಅವರು ಮೊದಲು ಈ ಜಾಗದಲ್ಲಿ ನಾಗನ ಕಟ್ಟೆ ನಿರ್ಮಾಣ ಮಾಡಿ ನಾಗನ ಆರಾಧನೆ ಮಾಡಿದ ಬಳಿಕ ಯಾವುದೇ ಸಮಸ್ಯೆ ಎದುರಾಗಿಲ್ಲ. ಮದಗ ಜನಾರ್ದನ ದೇವಸ್ಥಾನ, ಪೋಳ್ಯ ದೇವಸ್ಥಾನ, ಕೊರಗಜ್ಜ ಸಾನಿಧ್ಯ, ಅಶ್ವತ್ಥ ಕಟ್ಟೆ ಈ ಪರಿಸರದಲ್ಲಿ ಇದೆ. ಇದೆಲ್ಲರ ಮಧ್ಯೆ ಅದ್ವಿತ್ ಲೇ ಔಟ್ ಇದೆ. ಸೌತಡ್ಕದಲ್ಲಿ ಅವರು ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ಮೂಡಪ್ಪ ಸೇವೆ ಮಾಡಲಿದ್ದಾರೆ. ಅದೇ ರೀತಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜ.6ರಂದು ನಡೆಯುವ ಮೂಡಪ್ಪ ಸೇವೆಗೂ ರೂ.50 ಸಾವಿರ ನೀಡಿದ್ದಾರೆ ಎಂದರು.‌


ಕಠಿಣ ಪರಿಶ್ರಮಕ್ಕೆ ಭಗವಂತನ ಅನುಗ್ರಹ:
ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಅವರು ಮಾತನಾಡಿ, ಎಸ್.ಆರ್.ಬಿಲ್ಡರ‍್ಸ್‌ನ ಶಿವಪ್ರಸಾದ್ ಅವರು ಕಠಿಣ ಪರಿಶ್ರಮದ ಮೂಲಕ ಜೀವನ ರೂಪಿಸಿಕೊಂಡು ಸಾಮಾಜಿಕ ಬದ್ಧತೆಯ ಜೊತೆಗೆ ಸಮಾಜಕ್ಕೆ ಕೊಡುಗೆ ನೀಡುವ ನಿಟ್ಟಿನಲ್ಲಿ ಆರಂಭಿಸಿರುವ ಲೇ ಔಟ್ ನಿರ್ಮಾಣ ಕ್ಷೇತ್ರದಲ್ಲಿ ಅತ್ಯಂತ ಯಶಸ್ವಿಯಾಗಿದ್ದಾರೆ. ವಸತಿ ಬಡವಾಣೆ ಖರೀದಿ ಮಾಡುವವರನ್ನು ಗೌರವಿಸಲಾಗುತ್ತಿದೆ. ಆದರೆ ಶಿವಪ್ರಸಾದ್ ಅವರು ಬಡಾವಣೆಯನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಿದ ನೂರಾರು ಕೆಲಸಗಾರರನ್ನು ಗೌರವಿಸುವ ಕೆಲಸ ಮಾಡಿದ್ದಾರೆ. ಈ ಬಡಾವಣೆಯ ಕೆಲಸ ನಿಲ್ಲಿಸುವ ಕೆಲಸವೂ ಆಗಿತ್ತು. ಆದರೆ ಪ್ರಾಮಾಣಿಕ ವ್ಯವಸ್ಥೆಯಡಿ ಶಿವಪ್ರಸಾದ್‌ರವರು ಎಲ್ಲಾ ಕಡೆಯಲ್ಲೂ ಯಶಸ್ವಿಯಾಗಿದ್ದಾರೆ. ಪ್ರಾಮಾಣಿಕತೆ ಹಾಗೂ ಪರಿಶ್ರಮ ಇದ್ದಾಗ ಭಗವಂನತ ಅನುಗ್ರಹ ಸಿಗುತ್ತದೆ ಎಂಬುದಕ್ಕೆ ಶಿವಪ್ರಸಾದ್ ಅವರೇ ಸಾಕ್ಷಿಯಾಗಿದ್ದಾರೆ. ನಾವೆಲ್ಲ ಶಿವಪ್ರಸಾದ್ ಅವರ ಜೊತೆಯಲ್ಲಿ ಇದ್ದೇವೆ ಎಂದರು.


ಜನರಿಗೆ ಒಳ್ಳೆಯದನ್ನೇ ಕೊಡಬೇಕೆಂಬ ಮನೋಭಾವನೆ:
ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ಘಟಕದ ಅಧ್ಯಕ್ಷ ಪುತ್ತೂರು ಉಮೇಶ ನಾಯಕ್ ಅವರು ಮಾತನಾಡಿ, ನನ್ನ ಅನ್ನದಾತರಾಗಿರುವ ಶಿವಪ್ರಸಾದ್ ಅವರು ಪುತ್ತೂರಿನಲ್ಲಿ 5ನೇ ಬಡಾವಣೆ ಲೋಕಾರ್ಪಣೆ ಮಾಡಿದ್ದಾರೆ. ಐದಾರು ವರ್ಷಗಳ ಹಿಂದೆ ಶ್ರೀರಾಮ ಸೌಧದಲ್ಲಿ ಎಸ್.ಆರ್. ಬಿಲ್ಡರ‍್ಸ್ ಮತ್ತು ಡೆವೆಲಪರ‍್ಸ್ ಸಂಸ್ಥೆ ಪ್ರಾರಂಭಿಸಿ ಹಂತ ಹಂತವಾಗಿ ದೊಡ್ಡ ಮಟ್ಟಿಗೆ ಬೆಳೆದಿದ್ದಾರೆ. ಬಡಾವಣೆಯಲ್ಲಿ ಬರುವ ಅಡ್ಡಿ, ಆತಂಕಗಳನ್ನು ಎದುರಿಸಲು ನಾವು ಸಮಾಲೋಚನೆ ಮಾಡುತ್ತಿದ್ದೇವು. ಜನರಿಗೆ ಒಳ್ಳೆಯದನ್ನೇ ಕೊಡಬೇಕೆಂಬ ಮನೋಭಾವ ಅವರಲ್ಲಿ ಇದೆ. ಹಾಗಾಗಿ ಅವರು ಎಲ್ಲದರಲ್ಲೂ ಯಶಸ್ವಿಯಾಗಿದ್ದಾರೆ ಎಂದರು.


ಗ್ರಾಮದ ಅಭಿವೃದ್ದಿಗೆ ಪೂರಕವಾಗಿದೆ:
ಬನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸ್ಮಿತಾ ಅವರು ಮಾತನಾಡಿ, ಲೇ ಔಟ್ ನಿರ್ಮಾಣ ಆಗಿರುವುದು ನಮಗೂ ಹೆಮ್ಮೆ. ಇದು ಗ್ರಾಮದ ಅಭಿವೃದ್ದಿಗೆ ಪೂರಕವಾಗಿದೆ. ಈ ಲೇ ಔಟ್‌ಗೆ ಅನೇಕ ಅಡೆ-ತಡೆಗಳು ಬಂದಾಗ ಅದನ್ನು ಅವರು ಸಮರ್ಪಕವಾಗಿ ಎದುರಿಸಿದ್ದಾರೆ ಎಂದರು.


ಲೇ ಔಟ್ ಗ್ರಾಮೀಣ ಪ್ರದೇಶಕ್ಕೆ ಮೆರುಗು:
ಬನ್ನೂರು ಗ್ರಾ.ಪಂ.ಪಿಡಿಒ ಮನ್ಮಥ ಅವರು ಮಾತನಾಡಿ, ಲೇ ಔಟ್ ಪಂಚಾಯತ್ ವ್ಯಾಪ್ತಿಗೆ ಮೆರುಗು ತಂದಿದೆ. ಗ್ರಾಮ ಪಂಚಾಯತ್ ಉತ್ಪನ್ನ ಕೂಡಾ ಜಾಸ್ತಿ ಆಗುತ್ತದೆ. ಶಿವಪ್ರಸಾದ್ ಅವರು ಉತ್ತಮ ಆಯ್ಕೆ ಮಾಡಿ ನಮ್ಮ ಪ್ರದೇಶದಲ್ಲಿ ವಸತಿ ಸಮುಚ್ಚಾಯ ನಿರ್ಮಾಣ ಮಾಡಿದ್ದಾರೆ. ಯಾವುದೇ ಅಭಿವೃದ್ಧಿ ಕೆಲಸ ಮಾಡುವಾಗ ಮಾತುಗಳು ಬರುವುದು ಸಹಜ. ಶಿವಪ್ರಸಾದ್ ಅವರು ಸಮಾಜಕ್ಕೆ ಉತ್ತಮ ಸೇವೆ ನೀಡುತ್ತಿದ್ದಾರೆ ಎಂದರು.


ನಮ್ಮಂತಹ ಹಿರಿಯರು ನಿಮ್ಮ ಜೊತೆ ಇದ್ದೇವೆ:
ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಶಾಲೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈ ಮಾತನಾಡಿ, ಇಜ್ಜಾವು ಮನೆತನ ನನಗೆ ತುಂಬಾ ಸಹಾಯ ನೀಡಿದೆ. ಇಜ್ಜಾವು ಸುಬ್ರಾಯ ಅವರ ಜೊತೆಯಲ್ಲಿ ಸೇವೆ ಮಾಡುವ ಭಾಗ್ಯ ನಮಗೆ ಸಿಕ್ಕಿದೆ. ಅಂತವರ ಪರಂಪರೆ ಶಿವಪ್ರಸಾದ್ ಅವರ ಮೂಲಕ ಬಂದಿದೆ. ಶಿವಪ್ರಸಾದ್ ಅವರು ನನ್ನ ಕೆಲವೊಂದು ಒತ್ತಡಗಳಿಗೆ ಪರಿಹಾರ ನೀಡುವವರಾಗಿದ್ದಾರೆ. ಹಿರಿಯರು ಮಾಡಿದ ಪುಣ್ಯದ ಫಲ ಶಿವಪ್ರಸಾದ್ ಅವರ ಜೊತೆ ಇದೆ. ನಮ್ಮಂತಹ ಹಿರಿಯರು ನಿಮ್ಮ ಜೊತೆ ಇದ್ದೇವೆ. ದೇವರು ನಿಮ್ಮ ಜೊತೆ ಇದ್ದಾರೆ. ಇಂತಹ ಹಲವು ಲೇ ಔಟ್ ಮಾಡಿ ಸಮಾಜಕ್ಕೆ ಉತ್ತಮ ಸೇವೆ ಕೊಡಿ ಎಂದರು.


ಶಿವಪ್ರಸಾದ್ ಅವರ ಸೇವೆ ಅವರ ಏಳ್ಗೆ:
ಸನ್ಮಾನಿತರಾದ ರಾಜ್ಯಪ್ರಶಸ್ತಿ ಪುರಸ್ಕೃತ, ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯಶಿಕ್ಷಕ ಸತೀಶ್ ಭಟ್ ಅವರು ಮಾತನಾಡಿ, ಇಜ್ಜಾವು ಕುಟುಂಬ ನನಗೆ ಅತ್ಯಂತ ಹೆಚ್ಚು ನೈತಿಕ ಹಾಗೂ ಮಾನಸಿಕ ಬೆಂಬಲ ನೀಡಿದೆ. ನಾವು ಯಾವುದೇ ಕಾರ್ಯಕ್ರಮ ಮಾಡಿದರೂ ಮೊದಲು ಆಮಂತ್ರಣ ಕೊಡುವುದು ಇಜ್ಜಾವು ಕುಟುಂಬದ ಮಾಧವ ಆಚಾರ್ಯರಿಗೆ. ಅವರು ನಮಗೆ ಧೈರ್ಯ ಕೊಡುವವರು. ಶಿವಪ್ರಸಾದ್ ಅವರು ಕಟ್ಟಿಸಿದ ಎರಡು ಮೂರು ಲೇ ಔಟ್‌ಗೆ ಹೋಗಿದ್ದೇನೆ. ಹಲವರು ಲೇ ಔಟ್ ನಿರ್ಮಾಣ ಮಾಡಿದ ಬಳಿಕ ತಿರುಗಿ ನೋಡುತ್ತಿಲ್ಲ. ಆದರೆ ಶಿವಪ್ರಸಾದ್ ಅವರು ತನ್ನ ಲೇ ಔಟ್‌ಗಳಿಂದ ಯಾರು ಕರೆ ಮಾಡಿದರೂ ಸ್ಪಂದನೆ ನೀಡುತ್ತಾರೆ ಎಂಬುದನ್ನು ನನ್ನ ಸಂಬಂಽಕರಿಂದ ತಿಳಿದಿದ್ದೇನೆ. ಶಿವಪ್ರಸಾದ್ ಅವರು ಅವರ ಸೇವಾ ಮನೋಭಾವನೆಯಿಂದ ಮೇಲೆ ಬಂದಿದ್ದಾರೆ. ಅವರು ಇನ್ನೂ ಎತ್ತರಕ್ಕೆ ಏರಲಿ ಎಂದರು.


ಸಾಧಕರಿಗೆ ಸನ್ಮಾನ:
2025ನೇ ಸಾಲಿನ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ರಾಮಕುಂಜ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯಶಿಕ್ಷಕ ಸತೀಶ್ ಭಟ್, ಭಾರತೀಯ ವಾಯುಪಡೆಗೆ ತಾಂತ್ರಿಕ ಅಽಕಾರಿಯಾಗಿ ಆಯ್ಕೆಗೊಂಡ ಪುತ್ತೂರು ಕೆದಿಲ ವಳಕುಮೇರಿ ನಿವಾಸಿ ಆಶೀಶ್, ಗೈನಕಾಲೋಜಿಸ್ಟ್ ಪದವಿಗೆ ಸೇರಿರುವ ಡಾ.ಮೌಲಿಕಾ ಅವರನ್ನು ಶ್ರೀಗಳು ಸನ್ಮಾನಿಸಿದರು.


ಹಲವರಿಗೆ ಗೌರವ:
ಬಡಾವಣೆ ನಿರ್ಮಾಣದ ವೇಳೆ ಸಹಕರಿಸಿದ ಬನ್ನೂರು ಗ್ರಾ.ಪಂ.ಅಧ್ಯಕ್ಷೆ ಸ್ಮಿತಾ, ರಮನಿ ಡಿ.ಗಾಣಿಗ, ಗೀತಾ, ವಿಮಲ, ಗಿರಿಧರ್, ಗಣೇಶ್, ಪಿಡಿಒ ಮನ್ಮಥ, ಸಿಬ್ಬಂದಿಗಳು, ಸರ್ವೆ ವಿಭಾಗದ ಜನಾರ್ದನ, ಮಹೇಶ್ ಕುಮಾರ್, ಮಹೇಶ್‌ಪ್ರಸಾದ್ ಹೊಟೇಲ್‌ನ ಕೃಷ್ಣ, ನಾರಾಯಣ ಹೇರಳೆ, ಕೆ.ಟಿ.ಮೋಹನ್, ಗಣೇಶ್, ಕಾರ್ತಿಕ್ ರಾವ್, ಗಣೇಶ್ ಕಟ್ಟಪುಣಿ, ಸುಂದರ, ರಫೀಕ್, ರಿಜ್ವಾನ್, ಸುಧೀರ್, ಈಶ್ವರ, ಆದಿತ್ಯರಾವ್, ಶೀನ, ಸೌಜನ್ಯ, ಜಯಪ್ರದಾ, ಸತೀಶ್, ಲೋಕೇಶ, ಚಂದ್ರಶೇಖರ, ಕೊರಗಪ್ಪ, ಸುದ್ದಿ ಬಿಡುಗಡೆಯ ಶ್ರೀಧರ್ ರೈ, ಸುದ್ದಿ ಮೀಡಿಯಾದ ಉಮೇಶ್, ಜ್ಯೋತಿ ಇಲೆಕ್ಟ್ರಿಕಲ್ಸ್‌ನ ಸುಂದರ, ಝೂಮ್ ಟಿವಿಯ ಶ್ರೇಯಸ್, ನಿಖರ ನ್ಯೂಸ್‌ನ ಲತೇಶ್, ಲಕ್ಷ್ಮಿಪ್ರಸಾದ್ ಅರ್ಥ್‌ಮೂವರ‍್ಸ್, ಎಸ್‌ಆರ್ ಬಿಲ್ಡರ‍್ಸ್ ಆಂಡ್ ಡೆವೆಲಪ್ಪರ‍್ಸ್‌ನ ಸಿಬ್ಬಂದಿಗಳಾದ ರಮೇಶ್, ಮನೀಶ್, ಧನೀತ್, ಪ್ರತೀಕ್, ಗಣೇಶ್, ಅನುಶ್ರೀ, ದಿವ್ಯ, ಶಿವಕುಮಾರ್, ಬಾಲಕೃಷ್ಣ, ಆನಂದ, ಚಿದಾನಂದ, ಸುರೇಶ್, ಶಶಾಂಕ್ ಸಹಿತ ಹಲವು ಮಂದಿಯನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಉದ್ಯಮಿ ರಾಘವೇಂದ್ರ ಮಯ್ಯ, ನಗರಸಭೆ ನಿಕಟಪೂರ್ವ ಸದಸ್ಯ ಜೀವಂಧರ್ ಜೈನ್, ನ್ಯಾಯವಾದಿ ಬೆಟ್ಟ ಈಶ್ವರ ಭಟ್ ಅವರ ಕಚೇರಿಯ ಗಣೇಶ್, ಆಲ್ ಇಂಡಿಯಾ ಸಮೂಹ ಸಂಸ್ಥೆಯ ಕೃಷ್ಣಮೂರ್ತಿ, ಮದಗ ಜನಾರ್ದನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹಾರಕೆರೆ ವೆಂಕಟ್ರಮಣ ಭಟ್, ಹಿರಿಯ ವೈದ್ಯ ಡಾ. ಕೆ.ಜಿ ಭಟ್, ಡಾ.ಸುಪ್ರಿತ್ ಅವರನ್ನೂ ಗೌರವಿಸಲಾಯಿತು.


80 ಮಂದಿ ಕುಶಲಕರ್ಮಿಗಳಿಗೆ ಗೌರವ:
ಬಾಲಕೃಷ್ಣ ಮತ್ತು ತಂಡದವರಾದ ಸುರೇಶ್, ಶಿವ, ತಿಮ್ಮಪ್ಪ, ಪ್ರಸಾದ್, ಹರೀಶ್, ಶ್ರೀಧರ್, ನಾರಾಯಣ, ರವಿ, ಕೃಷ್ಣಪ್ಪ, ರಂಜಿತ್, ಉಮೇಶ್, ನಾರಾಯಣ, ಚಂದ್ರ, ಸೆಂಟ್ರಿಂಗ್ ಕೆಲಸಗಾರ ಆನಂದ ಮತ್ತು ಅವರ ತಂಡದವರಾದ ಮನೋಹರ, ಸುಜಿತ್, ಗಂಗಾಧರ್, ಲೋಕೇಶ್, ವಾಸು, ಪುನಿತ್, ಪ್ರಕಾಶ್, ಲಕ್ಷ್ಮಣ, ರಮೇಶ್, ಚಿದಾನಂದ, ದೇಜಪ್ಪ, ರಾಜ, ಉಮೇಶ್, ಆನಂದ, ಎಲೆಕ್ಟ್ರೀಶಿಯನ್ ಚಿದಾನಂದ ಮತ್ತು ತಂಡದ ಚೈತನ್ಯ, ಚೇತನ್, ಮಂಜುನಾಥ್, ಕಾರ್ಪೆಂಟರ್ ಕೇಶವ್, ವೆಲ್ಡಿಂಗ್ ವರ್ಕರ್ ಸುರೇಶ್, ಜಿತೇಶ್, ಕರುಣಾಕರ, ಪೈಂಟರ್ ಮಹೇಶ್, ಗುರುಪ್ರಸಾದ್, ಮೋಹನ್, ಅರವಿಂದ್, ದಿನೇಶ್, ಕಲ್ಲಿನ ಕೆಲಸದ ರವಿ, ಧನುಷ್, ಬಾಲ, ಸಚ್ಚಿದಾನಂದ ಸಹಿತ ಸುಮಾರು 80 ಮಂದಿಯನ್ನು ಶ್ರೀಗಳ ಮೂಲಕ ಫಲಮಂತ್ರಾಕ್ಷತೆ ನೀಡಿ ಗೌರವಿಸಲಾಯಿತು.


ವೇದಿಕೆಯಲ್ಲಿ ಶಿವಪ್ರಸಾದ್ ಇಜ್ಜಾವು ಅವರ ತಂದೆ ಮಾಧವ ಆಚಾರ್ಯ, ತಾಯಿ ಶಶಿಕಲಾ, ಪತ್ನಿ ಕವಿತಾ ಉಪಸ್ಥಿತರಿದ್ದರು. ಅದಿಥಿ ಡಿ.ಎಚ್.ಪ್ರಾರ್ಥಿಸಿದರು. ಎಸ್.ಆರ್.ಬಿಲ್ಡರ್ಸ್ ಆಂಡ್ ಡೆವಲಪರ್ಸ್‌ನ ಮಾಲಕ ಶಿವಪ್ರಸಾದ್ ಇಜ್ಜಾವು ಸ್ವಾಗತಿಸಿದರು. ನಿವೃತ್ತ ಮುಖ್ಯಶಿಕ್ಷಕ ನಾರಾಯಣ ಭಟ್ ಟಿ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಬೆಂಗಳೂರಿನ ವಿದುಷಿ ಮೇಧಾ ವಿದ್ಯಾಭೂಷಣ ಅವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು.

ಸೈಟ್ ಖರೀದಿಸುವವರ ಬದಲು ಸೈಟ್ ನಿರ್ಮಾಣದ ಶ್ರಮಿಕರನ್ನು ಗೌರವಿಸಿದ ಮಾದರಿ ಕಾರ್ಯಕ್ರಮ
ಬಹುತೇಕ ಕಡೆ ಬಡಾವಣೆಯ ಲೋಕಾರ್ಪಣೆ ಸಂದರ್ಭದಲ್ಲಿ ಪ್ರಥಮ ಖರೀದಿ ಸಹಿತ ಇತರ ಖರೀದಿದಾರರನ್ನು ಸನ್ಮಾನಿಸಿ ಗೌರವಿಸುತ್ತಾರೆ. ಆದರೆ ಅದ್ವಿತ್ ಲೇ ಔಟ್ ಲೋಕಾರ್ಪಣೆಯಲ್ಲಿ ಬಡಾವಣೆ ನಿರ್ಮಾಣಕ್ಕೆ ಶ್ರಮಿಸಿದ ಸುಮಾರು 80 ಮಂದಿ ಶ್ರಮಿಕರನ್ನು ಗೌರವಿಸುವ ವಿಶೇಷ ಕಾರ್ಯಕ್ರಮ ಮಾದರಿಯಾಗಿ ಮೂಡಿಬಂದಿದೆ. ಎಸ್.ಆರ್ ಬಿಲ್ಡರ್ಸ್ ಆಂಡ್ ಡೆವಲಪರ್ಸ್ ಮಾಲಕ ಶಿವಪ್ರಸಾದ್ ಇಜ್ಜಾವು ಅವರು ತನ್ನ ಸೈಟ್‌ನಲ್ಲಿ ಕೆಲಸ ಮಾಡಿದ ಕಲ್ಲು ಕಟ್ಟುವವರು, ಪೈಂಟರ‍್ಸ್, ಇಲೆಕ್ಟ್ರೀಷಿಯನ್ ಸಹಿತ ಇತರ ಸಿವಿಲ್ ವರ್ಕ್ ಮತ್ತು ಸಹಕರಿಸಿದವರನ್ನು ನೆನಪಿಸಿಕೊಂಡರು. ಅವರಿಗೆ ಸ್ವಾಮೀಜಿಯವರ ಮೂಲಕ ಫಲಮಂತ್ರಾಕ್ಷತೆ ಹಾಗೂ ಸ್ಮರಣಿಕೆ ನೀಡಿ ಗೌರವಿಸಿದ್ದು ವಿಶೇಷವಾಗಿತ್ತು.

LEAVE A REPLY

Please enter your comment!
Please enter your name here