ಅಗ್ರಜಾಸ್ ಲಾ ಛೇಂಬರ್ಸ್ ಉದ್ಘಾಟಿಸಿ ಶಾಸಕ ಸಂಜೀವ ಮಠಂದೂರು ಅಭಿಪ್ರಾಯ
ಪುತ್ತೂರು: ಪ್ರಜಾಪ್ರಭುತ್ವ ಗಟ್ಟಿಯಾಗುತ್ತಿದೆ.ರಾಷ್ಟ್ರವೂ ಬಲಿಷ್ಠವಾಗುತ್ತಿದೆ. ದೇಶದ ಪ್ರಮುಖ ಮೂರು ಅಂಗಗಳ ಕಾರ್ಯವೈಖರಿಯೂ ಅತ್ಯುತ್ತಮ ರೀತಿಯಲ್ಲಿ ಸಾಗುತ್ತಿದೆ. ವೃತ್ತಿ ಧರ್ಮದ ಪಾಲನೆಯಿಂದ ಯಶಸ್ಸು ಪಡೆಯಲು ಸಾಧ್ಯ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಅ.24ರಂದು ಪುತ್ತೂರು ಪೋಲಿಸ್ ವಸತಿ ಗೃಹ ಬಳಿಯ ಗಜಾನನ ಟವರ್ಸ್ ನ ನೆಲ ಮಹಡಿಯಲ್ಲಿ ಶುಭಾರಂಭ ಗೊಂಡ ನ್ಯಾಯವಾದಿಗಳಾದ ಉದಯಚಂದ್ರ ಕರಂಬಾರು ಮತ್ತು ಅಕ್ಷಿತ್ ಎಂ. ಮುರ ಅವರ ಅಗ್ರಜಾಸ್ ಲಾ ಛೇಂಬರ್ಸ್ ಉದ್ಘಾಟಿಸಿ ಅವರು ಶುಭ ಹಾರೈಸಿದರು.
ಕಕ್ಷಿದಾರರ ಮೊಗದಲ್ಲಿ ನಗು ಮೂಡಿಸುವ ಕಾಯಕವಾಗಲಿ:
ವಕೀಲರ ಸಂಘದ ಅಧ್ಯಕ್ಷ ಮನೋಹರ ಕೆ.ವಿ. ಮಾತನಾಡಿ , ಯುವ ನ್ಯಾಯವಾದಿಗಳು ಸೇರಿ ಕಚೇರಿ ಆರಂಭಿಸಿದ್ದಾರೆಂದರೆ, ಪ್ರಬುದ್ಧರಾಗಿದ್ದಾರೆ. ಕಾಲ ಮೇಲೆ ನಿಲ್ಲಲು ಶಕ್ತರಾಗಿದ್ದಾರೆ ಎಂದರು.
ನಂಬಿಕೊಂಡು ಬರುವ ಕಕ್ಷಿದಾರರ ನೋವನ್ನು ಅರಿತು ಅವರ ಮುಖದಲ್ಲಿ ನಗು ತರಿಸುವಂತಹ ಕೆಲಸ ಮಾಡಬೇಕು ಎಂದು ಹೇಳಿ ಶುಭ ಹಾರೈಸಿದರು.
ವೇಗವಾಗಿ ಮುಂದೆ ಸಾಗಿ : ವೃತ್ತಿ ಬದುಕನ್ನು ಕಟ್ಟಿಕೊಟ್ಟ ಗುರು ,ಹಿರಿಯ ನ್ಯಾಯವಾದಿ ಎಸ್. ಪ್ರವೀಣ್ ಕುಮಾರ್ ಮಾತನಾಡಿ ,
ಬಹಳ ಉತ್ಸಾಹ ,ಹುಮ್ಮಸ್ಸಿನಿಂದ ಶಿಷ್ಯರಿಬ್ಬರೂ ಸೇರಿ ಕಛೇರಿ ಆರಂಭಿಸಿದ್ದೀರಿ.ನಿಮ್ಮಿ ವೃತ್ತಿ ಜೀವನ ಪಯಣವು ವೇಗವಾಗಿ ಸಾಗೋ ಮೂಲಕ ಜಯ ಕಾಣಲಿಯೆಂದು ಆಶೀರ್ವಾದ ವಿತ್ತರು.
ಹೆಸರು ,ಕೀರ್ತಿ ತರುವಂತಾಗಲಿ :
ಕಬಕ ಗ್ರಾ.ಪಂ. ಅಧ್ಯಕ್ಷ ವಿನಯಕುಮಾರ್ ಕಲ್ಲೇಗ ಮಾತನಾಡಿ, ಯುವ ನ್ಯಾಯವಾದಿಗಳು ಕನಸು ಇಂದು ಕೈಗೂಡಿದೆ .ಇದು ಊರಿನ ಜನರಿಗೂ ಹೆಮ್ಮೆಯ ವಿಚಾರ. ಕಷ್ಟಪಟ್ಟು ಮೇಲೆ ಬಂದಿದ್ದೀರಿ ,ದೇವರ ಅನುಗ್ರಹದಿಂದ ಇಡೀ ತಾಲೂಕಿನಲ್ಲಿ ಹೆಸರು ಬರುವಂತಾಗಲಿ ಎಂದು ಹೇಳಿ ಹಾರೈಸಿದರು.
ನ್ಯಾಯ ಬೇಕೆಂದು ಬರೋ ಜನತೆಯಿಂದ ಕಚೇರಿ ತುಂಬಲಿ :
ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುರೇಶ್ ಕುಮಾರ್ ಸೊರಕೆ ಮಾತನಾಡಿ , ವಿದ್ಯಾರ್ಜನೆ ದೊಡ್ಡ ಸವಾಲು, ಯುವಕರು ಸಮಾಜಕ್ಕೆ ಏನಾದರೂ ಕೊಡುಗೆ ಕೊಡುವ ಬಗ್ಗೆ ಯೋಚನೆ ಮಾಡಬೇಕು. ಸಂತ್ರಸ್ತರಿಗೆ ನ್ಯಾಯ ಒದಗಿಸೋ ಮೂಲಕ ಕಣ್ಣೀರೋರೆಸಿ , ನ್ಯಾಯ ಬೇಡುವ ಜನತೆಯಿಂದ ಕಚೇರಿ ತುಂಬಿ ತುಳುಕಲಿ ಎಂದು ಹಾರೈಸಿದರು.
ಒಂದು ನಾಣ್ಯಕ್ಕೆ 2 ಮುಖವಿದ್ದಂತೆ :
ಸರ್ವೆ ಎಸ್ ಡಿ ಎಂ ಶಾಲಾ ನಿವೃತ್ತ ಮುಖ್ಯ ಶಿಕ್ಷಕ ಹೆಚ್ ಬಿ ಶ್ರೀನಿವಾಸ್ ಮಾತನಾಡಿ , ಶಿಷ್ಯರ ಬೆಳವಣಿಗೆ ನೋಡಿ ಆನಂದವಾಗಿದೆ. ಮಕ್ಕಳು ಮುಂದೆ ಬಂದಾಗ ಸಂಭ್ರಮಿಸೋ ಗುರುಗಳ ಸಾಲಿನಲ್ಲಿ ನಾನೂ ಒಬ್ಬ.ಇಬ್ಬರು ಒಂದು ನಾಣ್ಯದಂತೆ .ಒಂದೇ ಮುಖವಿದ್ದಲ್ಲಿ ಆ ನಾಣ್ಯಕ್ಕೆ ಬೆಲೆಯೆಲ್ಲಿ? ಎಂದು ಹೇಳಿ ಆಶೀರ್ವಾದಿಸಿದರು.
ಆ ಬಳಿಕ ವೃತ್ತಿ ಜೀವನ ಕಲಿಸಿದ ಗುರು ಎಸ್. ಪ್ರವೀಣ್ ಕುಮಾರ್ ಇವರಿಗೆ ಗುರುವಂದನೆ ಕಾರ್ಯಕ್ರಮ ನಡೆಯಿತು. ಉದಯ್ ಚಂದ್ರ ಹಾಗೂ ಅಕ್ಷಿತ್ ಎಂ ಹೆತ್ತವರು ಶೀನಪ್ಪ ಪೂಜಾರಿ ,ಸುಂದರಿ ಶೀನಪ್ಪ ಭಕ್ತ ಕೋಡಿ ಮತ್ತು ಜಯರಾಮ್ ಸುವರ್ಣ, ಲತಾ ಜಯರಾಮ್ ಮುರ ಮತ್ತು ಅತಿಥಿಗಳು, ಶಿಷ್ಯರೊಡಗೂಡಿ , ಶಾಲು ,ಹಾರ ಸ್ಮರಣಿಕೆ ನೀಡಿ ಗೌರವಿಸಿದರು.
ಮುಂಡೂರು ಗ್ರಾ. ಪಂ ಅಧ್ಯಕ್ಷೆ ಪುಷ್ಪವತಿ ಸದಸ್ಯ ಕಮಲೇಶ್, ಖ್ಯಾತ ವಕೀಲ ಮಹೇಶ್ ಕಜೆ ,ಸಾಮಾಜಿಕ ,ಧಾರ್ಮಿಕ ಮುಖಂಡ ಶಿವನಾಥ ರೈ ಮೇಗಿನಗುತ್ತು ,ರಸಿಕ ರೈ ಮೇಗಿನಗುತ್ತು ,ಕಮಲೇಶ್ ಸರ್ವೇದೊಳಗುತ್ತು ,ಜಿನ್ನಪ್ಪ ಪೂಜಾರಿ ಮುರ ಬ್ಯಾಂಕ್ ಆಫ್ ಬರೋಡ ಉದ್ಯೋಗಿ ರಾಮಣ್ಣ ಪೂಜಾರಿ, ವಸಂತ ಪೂಜಾರಿ ದಲಾರಿ, ಸಹಾಯಕ ಅಭಿಯೋಜಕರಾದ ದಿವ್ಯರಾಜ್ ಹೆಗ್ಡೆ ಹಾಗೂ ಆರೋನ್ ಡಿ’ಸೋಜಾ , ಹೆಚ್ಚುವರಿ ಅಭಿಯೋಜಕರಾದ ಅರುಣ್ ಬಿ.ಕೆ, ವಕೀಲರ ಸಂಘದ ಖಜಾಂಜಿ ಶ್ಯಾಮ್ ಪ್ರಸಾದ್ ಕೈಲಾರ್, ಆನಂದ ಪೂಜಾರಿ ಸರ್ವೆ ದೋಳ ಗುತ್ತು , ಈಶ್ವರಮಂಗಲ ಜೆ.ಇ ರಮೇಶ್ ಕರಂಬಾರು, ಗೌತಮ್ ರೈ ಸರ್ವೆ,ಮಾಲತಿ ಜಯರಾಮ ಪೂಜಾರಿ ದಂಪತಿ , ಮಕ್ಕಳಾದ ಯುಕ್ತಿ ,ಶ್ರೀ ಕಂಠ ,ಗೀತಾ ಸುರೇಶ್ ದಂಪತಿ ಭಕ್ತ ಕೋಡಿ ,ಮಕ್ಕಳಾದ ಸುಜಯ್ ,ಸುಶಾಂತ್ , ಸಹಿತ ಹಲವು ಅತಿಥಿಗಳು ಹಾಜರಿದ್ದರು.
ಯುವ ನ್ಯಾಯವಾದಿಗಳು ಎಲ್ಲಾ ಅತಿಥಿಗಳಿಗೆ ‘ ಕಪ್ಪು ಕೋಟು ಬಿಳಿ ಮನಸು’ ಹೊತ್ತಗೆಯನ್ನು ಈ ಸಂದರ್ಭದಲ್ಲಿ ನೀಡಿದರು.
ನ್ಯಾಯವಾದಿ ರಾಕೇಶ್ ಜೆ ಮಸ್ಕರೇನಸ್ ಕಾರ್ಯಕ್ರಮ ನಿರೂಪಿಸಿ ,ಅಕ್ಷಿತ್ ಧನ್ಯವಾದವಿತ್ತರು.