ಶ್ರೀನಿಧಿ ಸೇವಾ ಟ್ರಸ್ಟ್‌ನಿಂದ ಧನ ಸಹಾಯ, ಆಹಾರ ಸಾಮಾಗ್ರಿ ವಿತರಣೆ

0

ಪುತ್ತೂರು:ಜನರ ಸೇವೆಯೇ ಜನಾಧ೯ನ ಸೇವೆ ಎಂಬ ನಾಣ್ನುಡಿಯಂತೆ ಕಾರ್ಯನಿರ್ವಹಿಸುತ್ತಿರುವ ಶ್ರೀನಿಧಿ ಸೇವಾ ಟ್ರಸ್ಟ್ ಪುತ್ತೂರು ಇದರ ವತಿಯಿಂದ ಕಿಡ್ನಿವೈಫಲ್ಯ, ಹೃದಯ ರೋಗ, ಕ್ಯಾನ್ಸರ್, ಮೈಸ್ಟ್ರೇನಿಯಾ, ಎಚ್‌ಐವಿ/ಏಡ್ಸ್, ಅಂಧತ್ವ, ಬುದ್ಧಿಮಾಂದ್ಯ ಖಾಯಿಲೆಯಿಂದ ಬಳಲುತ್ತಿರುವ ಬಡ ಕುಟುಂಬಗಳಿಗೆ ಧನ ಸಹಾಯದ ಚೆಕ್ ಮತ್ತು ಆಹಾರ ಸಾಮಾಗ್ರಿ ವಿತರಣಾ ಕಾರ್ಯಕ್ರಮ ಅ.22ರಂದು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ನಿವೃತ್ತ ಉಪನ್ಯಾಸಕಸುಬ್ರಹ್ಮಣ್ಯ ಭಟ್ ಪಾಂಗ್ಲಾಯಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಅನಾರೋಗ್ಯ ಪೀಡಿತ ಜನರ ಸೇವೆ ಮಹತ್ವವಾದುದು ಎಂದು ಟ್ರಸ್ಟ್ ಸೇವಾ ಕಾರ್ಯವನ್ನು ಶ್ಲಾಘೀಸಿದರು.
ನ್ಯಾಯವಾದಿ ರಾಜೇಶ್ವರಿಯವರು ಮಾತನಾಡಿ, ತಮ್ಮ ಕೈಲಾದ ಸಹಾಯಹಸ್ತ ನೀಡುವ ಮನುಷ್ಯರಲ್ಲಿ ಸಾಥ೯ಕತೆ ಮೂಡಿಸಿದೆ ಎಂದರು. ನ್ಯಾಯವಾಡಿ ಉಷಾಲಕ್ಷ್ಮಿ ಕಾಯ೯ಕ್ರಮಕ್ಕೆ ಅಭಿನಂದನೆ ಸಲ್ಲಿಸಿದರು.
ಎಚ್‌ಐವಿ/ಏಡ್ಸ್ ತಡೆ ಮತ್ತು ನಿಯಂತ್ರಣದ ಜಿಲ್ಲಾಧ್ಯಕ್ಷರು ಸುರೇಶ್ ಮೆಲ್ಕಾರ್ ಹಾಗೂ ಕಾಮಿ೯ಕರ ಸಂಘಟಕರು ರಾಮಣ್ಣ ವಿಟ್ಲ ಉಪಸ್ಥಿತರಿದ್ದರು.
ಪ್ರವೀಣ್ ಕುಮಾರ್ ಪ್ರಾಥಿ೯ಸಿದರು. ಸುಳ್ಯ ಕೆವಿಜಿ ಕಾಲೇಜಿನ ಉಪನ್ಯಾಸಕಿ ಮಲ್ಲಿಕ ಉಪನ್ಯಾಸಕರು ಕಾಯ೯ಕ್ರಮ ನಿರೂಪಿಸಿದರು. ಸೌಮ್ಯ ಸ್ವಾಗತಿಸಿ, ವಂದಿಸಿದರು. ಶ್ರೀ ನಿಧಿ ಸೇವಾ ಟ್ರಸ್ಟ್ ನ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here