ಪುತ್ತೂರು : ಪ್ರತಿಷ್ಠಿತ ಚಿನ್ನಾಭರಗಳ ಮಳಿಗೆ, ಕೋರ್ಟ್ರಸ್ತೆ ಮುಳಿಯ ಜ್ಯುವೆಲ್ಸ್ನಲ್ಲಿ ವೆರೈಟಿ, ವಿನ್ಯಾಸದ ಚಿನ್ನಾಭರಣಗಳ ಸಂಗ್ರಹದೊಂದಿಗೆ ಒಂದು ತಿಂಗಳ ಕಾಲ ನಡೆಯಲಿರುವ ಚಿನ್ನಾಭರಣಗಳ ಹಬ್ಬ ‘ಮುಳಿಯ ಚಿನ್ನೋತ್ಸವ’ ಅ.21ರಂದು ಉದ್ಘಾಟನೆಗೊಂಡಿದ್ದು ಗ್ರಾಹಕರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿನ್ನೋತ್ಸವ ನ.20ರವರೆಗೆ ನಡೆಯಲಿದೆ.
ಉತ್ಸವದಲ್ಲಿ ವಿಶೇಷ ಕೊಡುಗೆಗಳನ್ನು ನೀಡಲಾಗುತ್ತಿದ್ದು ಪ್ರತಿದಿನ ಚಿನ್ನದ ನಾಣ್ಯ ಗೆಲ್ಲುವ ಮತ್ತು ಪ್ರತಿ ಗಂಟೆಗೊಮ್ಮೆ ಬೆಳ್ಳಿಯ ನಾಣ್ಯ ಗೆಲ್ಲುವ ಅವಕಾಶವಿದೆ. ವಜ್ರಗಳ ಮೇಲೆ ಶೇ.10ರ ವರೆಗೆ ಕಡಿತವಿದೆ. ವಿ.ಎ (ವ್ಯಾಲ್ಯೂ ಆಡಿಶನ್) ಶೇ.4.6ರಿಂದ ಆರಂಭವಾಗುತ್ತದೆ. ಗ್ರಾಹಕರ ಹಳೆಯ ಚಿನ್ನಕ್ಕೆ ಅತ್ಯುತ್ತಮ ಬೆಲೆ ನೀಡಲಾಗುತ್ತಿದ್ದು, ಹಳೆಯ ಚಿನ್ನವನ್ನು ಹೊಸ ಟ್ರೆಂಡಿ 916 ಆಭರಣಗಳೊಂದಿಗೆ ವಿನಿಮಯ ಮಾಡಿಕೊಳ್ಳಲು ಸುವರ್ಣಾವಕಾಶವಿದೆ. ಬೆಳ್ಳಿಯ ವಿಶೇಷ ಬ್ರಾಂಡ್ಗಳೂ ಲಭ್ಯವಿದೆ. ಕನ್ನಡ ರಾಜ್ಯೋತ್ಸವ, ಮಕ್ಕಳ ದಿನಾಚರಣೆಗೆ ವಿಶೇಷ ಬ್ರಾಂಡ್ಗಳನ್ನು ಪರಿಚಯಿಸಲಾಗುವುದು. ಚಿನ್ನೋತ್ಸವವು ಮುಳಿಯದ 5 ಶಾಖೆಗಳಲ್ಲಿಯೂ ಏಕ ಕಾಲದಲ್ಲಿ ನಡೆಯಲಿದೆ.
ವಿ.ಎ ಶೇ.4.6ನಿಂದ ಆರಂಭ: ಚಿನ್ನಾಭರಣಗಳ ಖರೀದಿಗೆ V.A (ವ್ಯಾಲ್ಯೂ ಆಡಿಶನ್) ಶೇ.4.6ರಿಂದ ಆರಂಭವಾಗುತ್ತದೆ. ಚಿನ್ನೋತ್ಸವದಲ್ಲಿ ವೆರೈಟಿ, ವಿನ್ಯಾಸದ ವಿಶೇಷ ಚಿನ್ನ, ವಜ್ರ ಮತ್ತು ಬೆಳ್ಳಿಯ ಆಭರಣಗಳ ವಿಶೇಷ ಸಂಗ್ರಹವಿದೆ. ಗ್ರಾಹಕರು ಇದರ ಪ್ರಯೋಜನ ಪಡೆಯಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.