ಎಸ್‌ಕೆಎಸ್‌ಎಸ್‌ಎಫ್- ಜಿಲ್ಲಾ ಮದೀನಾ ಪ್ಯಾಶನ್

0

ಪ್ರವಾದಿ ಜನ್ಮದಿನದಲ್ಲಿ ಸಂತೋಷಪಡುವುದು ವಿಶ್ವಾಸದ ಭಾಗ – ಶೈಖುನಾ ತ್ವಾಖಾ ಉಸ್ತಾದ್

ಪುತ್ತೂರು: ಪ್ರವಾದಿ ಜನ್ಮದಿನದಲ್ಲಿ ಸಂತೋಷಪಡುವುದು ವಿಶ್ವಾಸದ ಭಾಗವಾಗಿದ್ದು, ಅದು ಹಲವಾರು ಪ್ರತಿಫಲ ಲಭಿಸಲು ಕಾರಣವಾಗಲಿದೆ ಎಂದು ದ.ಕ ಜಿಲ್ಲಾ ಖಾಝಿ, ಸಮಸ್ತ ಕೇಂದ್ರ ಮುಶಾವರ ಸದಸ್ಯ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಹೇಳಿದರು.

‘ನ್ಯಾಯ ವಂಚಿತ ಜಗತ್ತು ನ್ಯಾಯ ನಿರ್ಭರ ಪುಣ್ಯ ಪ್ರವಾದಿ ಸ.ಅ’ ಎಂಬ ಪ್ರಮೇಯದಲ್ಲಿ ಎಸ್‌ಕೆಎಸ್‌ಎಸ್‌ಎಫ್ ದ.ಕ ಈಸ್ಟ್ ಜಿಲ್ಲೆ ಸಮಿತಿಯ ನೇತೃತ್ವದಲ್ಲಿ ಒಂದು ತಿಂಗಳ ಕಾಲ ಶಾಖೆ, ಕ್ಲಸ್ಟರ್, ವಲಯಗಳಲ್ಲಿ, ನಡೆದ ರಬೀಹ್ ಕ್ಯಾಂಪೈನ್‌ನ ಸಮಾರೋಪದ ಭಾಗವಾಗಿ ಪರ್ಲಡ್ಕದಲ್ಲಿ ನಡೆದ ಮದೀನಾ ಪ್ಯಾಶನ್ ಹುಬ್ಬುರ್ರಸೂಲ್ ಕಾನರೆನ್ಸ್ ಉದ್ಘಾಟಿಸಿ ಅವರು ಮಾತನಾಡಿದರು..
ಸಂಜೆ ಪರ್ಲಡ್ಕ ಜಮಾಅತ್ ಅಧ್ಯಕ್ಷ ಹಾಜಿ ಅಬ್ದುಲ್ ರಝಾಕ್‌ರವರು ಧ್ವಜಾರೋಹಣ ನಡೆಸುವ ಮೂಲಕ ಚಾಲನೆ ನೀಡಿದರು. ಸಯ್ಯಿದ್ ಶರ-ದ್ದೀನ್ ತಂಳ್ ಸಾಲ್ಮರ ದುಆ ನೆರವೇರಿಸಿದರು. ದ.ಕ ಈಸ್ಟ್ ಜಿಲ್ಲಾ ಅಧ್ಯಕ್ಷ ತಾಜುದ್ದೀನ್ ರಹ್ಮಾನಿ ಅಧ್ಯಕ್ಷತೆ ವಹಿಸಿದ್ದರು.
ಸಮಸ್ತದ ಮುಶಾವರ ಸದಸ್ಯರಾದ ಶೈಖುನಾ ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ, ಶೈಖುನಾ ಉಸ್ಮಾನುಲ್ -ಝಿ ತೋಡಾರ್, ಮಲಪ್ಪುರಂ ಜಿಲ್ಲಾ ಮುಶಾವರ ಸದಸ್ಯ ಶೈಖುನಾ ಸುಲೈಮಾನ್ ಮುಸ್ಲಿಯಾರ್ ಚುಂಗತ್ತರ , ರಾಜ್ಯ ಎಸ್ ಕೆ ಎಸ್ ಎಸ್ ಎ- ಕಾರ್ಯದರ್ಶಿ ಅನೀಸ್ ಕೌಸರಿ , ಪರ್ಲಡ್ಕ ಖತೀಬ್ ಅಬ್ದುಲ್ ರಶೀದ್ ರಹ್ಮಾನಿ ಸಂದೇಶ ಭಾಷಣ ನಡೆಸಿದರು.‌

ಗ್ರಾಂಡ್ ಮೌಲೀದ್ ಮಜ್ಲಿಸ್ :
ಸಯ್ಯಿದ್ ಅಕ್ರಮಲಿ ತಂಳ್ ಕರಾವಳಿ, ಸಯ್ಯಿದ್ ಅನಸ್ ತಂಳ್ ಕರುವೇಲು, ಸಯ್ಯಿದ್ ಇಸ್ಮಾಯಿಲ್ ತಂಳ್ ಉಪ್ಪಿನಂಗಡಿ, ಸಯ್ಯಿದ್ ಅ-ಂ ತಂಳ್ , ಉಮರ್ ದಾರಿಮಿ ಸಾಲ್ಮರ , ಅಬ್ಬಾಸ್ ಮದನಿ ಪಣೆಮಜಲ್ , ಸಿರಾಜುದ್ದೀನ್ -ಝಿ ಮಾಡನ್ನೂರ್, ಶಂಸುದ್ದೀನ್ ದಾರಿಮಿ ಪಮ್ಮಲೆ, ಯಾಕುಬ್ ದಾರಿಮಿ ಸವಣೂರು ನೇತೃತ್ವದಲ್ಲಿ ಮೌಲೀದ್ ಮಜ್ಲಿಸ್ ನಡೆಯಿತು

ಗೌರವ ಸಮರ್ಪಣೆ:
ದ.ಕ ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಉಸ್ತಾದ್ ಮತ್ತು ಸಮಸ್ತ ಕೇಂದ್ರ ಸಮಿತಿ ನೂತನ ಸದಸ್ಯರಾಗಿ ಆಯ್ಕೆಯಾದ ಶೈಖುನಾ ಉಸ್ಮಾನುಲ್ -ಝಿ ತೋಡಾರ್ ರವರನ್ನು ಜಿಲ್ಲಾ ಸಮಿತಿ ವತಿಯಿಂದ ಸನ್ಮಾನಿಸಲಾಯಿತು…

ವಿವಿಧ ಕಾರ್ಯಕ್ರಮಗಳು:
ವೇದಿಕೆಯಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಿತು..

ಜಿಲ್ಲಾ ಕಾರ್ಯಕಾರಿ ಸಮಿತಿ ನೇತೃತ್ವದಲ್ಲಿ ಅಶ್ರಕ ಬೈತ್ ಅಲಾಪಣೆ, ಕೆಐಸಿ ವಿಧ್ಯಾರ್ಥಿಗಳ ಬುರ್ದಾ ಮಜ್ಲಿಸ್, ಕರಾಯ ದರ್ಸ್ ವಿಧ್ಯಾರ್ಥಿಗಳ ಸಲಾಂ ಬೈತ್ ಅಲಾಪಣೆ , ಅಬ್ದುಲ್ ಜಬ್ಬಾರ್ ಅಸ್ಲಮಿ ಕರಾಯರವರ ನೇತೃತ್ವದಲ್ಲಿ ತಿಲಾವ: , ಮಾಡನ್ನೂರ್ ನೂರುಲ್ ಹುದಾ ವಿಧ್ಯಾರ್ಥಿಗಳ ಮೆಹಿಲೆ ಇಶ್ಕ್, ಚಾಪಲ್ಲ ದರ್ಸ್ ವಿಧ್ಯಾರ್ಥಿಗಳ ಕವ್ವಾಲಿ, ಜಿಲ್ಲಾ ಕ್ಯಾಂಪಸ್ ವಿಂಗ್ ಸದಸ್ಯರು, ಕಲ್ಲೇಗ ದರ್ಸ್ ವಿದ್ಯಾರ್ಥಿಗಳ, ಕೂರ್ನಡ್ಕ ದರ್ಸ್ ವಿದ್ಯಾರ್ಥಿಗಳ, ಕಲ್ಲಡ್ಕ ದರ್ಸ್ ವಿದ್ಯಾರ್ಥಿಗಳ, ಕೋಲ್ಪೆ ದರ್ಸ್ ವಿದ್ಯಾರ್ಥಿಗಳ ಹಾಗು ಪರ್ಲಡ್ಕ ಎಸ್‌ಕೆಎಸ್‌ಬಿವಿ ವಿದ್ಯಾರ್ಥಿಗಳ ನೆಬಿ ಮದ್ಹ್ ಹಾಡುಗಳು ವೇದಿಕೆಯ ಆಕರ್ಷಣೆಯಾಗಿತ್ತು.
ಕಾರ್ಯಕ್ರಮಕ್ಕೆ ವಿಶೇಷ ಹೊರಾಂಗಣ ನಿರ್ಮಿಸಿ ಆಗಮಿಸುವ ಸರ್ವರಿಗೂ ಸುಗಂಧದ್ರವ್ಯ ನೀಡಿ ಸ್ವಾಗತಿಸಲಾಯಿತು.

ಮದ್ಹುರ್ರಸೂಲ್ ಪ್ರಭಾಷಣ:
ಕೇರಳದ ಪ್ರಮುಖ ಮದ್ಹುರ್ರಸೂಲ್ ಪ್ರಭಾಷಣಗಾರ ಉಸ್ತಾದ್ ಬಶೀರ್ -ಝಿ ದೇಶಮಂಗಲಂ ಮಾತನಾಡಿ ಇಂತಹ ಇಶ್ಕ್ ಮಜ್ಲಿಸಿನಿಂದ ಮಾತ್ರ ಯುವ ಸಮೂಹವನ್ನು ಸನ್ಮಾರ್ಗದತ್ತ ಕೊಂಡೊಯ್ಯಲು ಸಾಧ್ಯ. ಪುಣ್ಯ ಪ್ರವಾದಿಯವರನ್ನು ನೆನೆಸದ ಒಂದು ದಿವಸವೂ ವಿಶ್ವಾಸಿಗೆ ಇರಬಾರದೆಂದು ಹೇಳಿದರು.

ಟ್ರೆಂಡ್ ರಾಜ್ಯ ಚಯರ್ಮಾನ್ ಇಕ್ಬಾಲ್ ಬಾಳಿಲ ಪ್ರಾಸ್ತಾವಿಕವಾಗಿ ಮಾತನಾಡಿದರು.. ಮಾಡನ್ನೂರು ನೂರುಲ್ ಹುದಾ ಪ್ರಾಂಶುಪಾಲ ಹನೀ- ಹುದವಿ ದೇಲಂಪಾಡಿ ಶುಭಹಾರೈಸಿದರು.

ಎಸ್‌ಕೆಎಸ್‌ಎಸ್‌ಎ- ದ.ಕ ವೆಸ್ಟ್ ಜಿಲ್ಲಾಧ್ಯಕ್ಷ ಸಯ್ಯಿದ್ ಅಮೀರ್ ತಂಳ್ ಕಿನ್ಯ, ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಅಬ್ದುಲ್ ಖಾದರ್ ಬಂಟ್ವಾಳ, ಎಸ್‌ಕೆಎಸ್‌ಎಸ್‌ಎ- ಕೇಂದ್ರ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ, ಅಶ್ರ- ಬಾಖವಿ ಚಾಪಲ್ಲ, ಅಬೂಬಕರ್ ಸಿದ್ದೀಕ್ ಜಲಾಲಿ ಕಲ್ಲೇಗ, ಸಮಸ್ತ ವಿದ್ಯಾಭ್ಯಾಸ ಮಂಡಳಿ ಸದಸ್ಯ ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ, ಪುತ್ತೂರು ಕೇಂದ್ರ ಮಸೀದಿ ಅಧ್ಯಕ್ಷ ಎಲ್ ಪಿ ರಝಾಕ್ ಹಾಜಿ, ಎಸ್ ವೈ ಎಸ್ ಪುತ್ತೂರು ವಲಯ ಅಧ್ಯಕ್ಷ ಅಬೂಬಕರ್ ಮುಲಾರ್, ಕುಂಬ್ರ ಮದ್ರಸ ಮ್ಯಾನೇಜ್ಮೆಂಟ್ ಅಧ್ಯಕ್ಷ ಹಿರಾ ಖಾದರ್ ಹಾಜಿ, ಅಬೂಬಕರ್ ಮಂಗಳ ಬೆಳ್ಳಾರೆ, ಅಬ್ದುಲ್ ಖಾದರ್ ಹಾಜಿ ಬಾಯಂಬಾಡಿ, ಅಬ್ದುಲ್ ಹಮೀದ್ ಹಾಜಿ ಸುಳ್ಯ, ಕೆ ಕೆ ಅಬೂಬಕ್ಕರ್ ಕೋಲ್ಪೆ, ಪುತ್ತೂರು ವಲಯ ಅಧ್ಯಕ್ಷ ಹಾಜಿ ಬಾತಿಷ ಪಾಟ್ರಕೋಡಿ, ಪರ್ಲಡ್ಕ ಜಮಾಅತ್ ಸಮಿತಿ ಕಾರ್ಯದರ್ಶಿ -ರೂಕ್ ನಿಶ್ಮ, ಕೋಶಾಽಕಾರಿ ಹಸ್ಸನ್ ಅಕ್ಕರೆ, ಸದಸ್ಯರಾದ ಬಶೀರ್ ಅಕ್ಕರೆ, ಅಶ್ರ- ಪರ್ಲಡ್ಕ, ಇಬ್ರಾಹಿಂ ಪರ್ಲಡ್ಕ, ಇಕ್ಬಾಲ್ ಅಕ್ಕರೆ ಉಪಸ್ಥಿತರಿದ್ದರು.. ಪರ್ಲಡ್ಕ ಎಸ್‌ಕೆಎಸ್‌ಎಸ್‌ಎ- ಅಧ್ಯಕ್ಷ ಹಾಫಿಳ್, ಉಖಖಖ ಅಧ್ಯಕ್ಷ ಮುಹಮ್ಮದ್ ತ್ವಾಹ ಸದಸ್ಯರಾದ ಸುಹೈಲ್ ,ಖಮರಲಿ, ಅರ್ಝನ್, ಅಬೂಬಕ್ಕರ್, ಝಾಹಿದ್, ಹಮೀದ್ ,. ಲತೀ- ಪಿ ಬಿ, ಹಮೀದ್ ಪಿ ಯಸ್ , ಇಸ್ಮಾಯಿಲ್ ಪಿ ಯಸ್ , ಮುಸ್ತ-, ಸಿನಾನ್, ನೌ-ಲ್, ಇಶಾನ್, ತು-ಲ್ ,ನಾಸಿರ್, ಮುಹಮ್ಮದ್ ಅಲಿ ಸಹಿತ ಎರಡು ಸಮಿತಿಗಳ ಸರ್ವ ಸದಸ್ಯರು ಸಹಕರಿಸಿದರು.. ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಹಾರಿಸ್ ಕೌಸರಿ ಕೋಲ್ಪೆ ಸ್ವಾಗತಿಸಿ, ಸಂಘಟನಾ ಕಾರ್ಯದರ್ಶಿ ಜಾಬಿರ್ -ಝಿ ಧನ್ಯವಾದಗೈದರು ಮುಸ್ತ- -ಝಿ ಪರ್ಲಡ್ಕ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here