ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಷ್ಟಮಂಗಲ ಪರಿಹಾರ ಅಂಗವಾಗಿ ಸರ್ಪಸಂಸ್ಕಾರ ವಿಧಿ ವಿಧಾನಗಳು ಅ.27 ರಿಂದ ಆರಂಭಗೊಂಡಿದ್ದು, ಅ.30ಕ್ಕೆ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರ ಮಾರ್ಗದರ್ಶನದಲ್ಲಿ ಸರ್ಪಸಂಸ್ಕಾರ / ಆಶ್ಲೇಷ ಬಲಿ ಕಾರ್ಯಕ್ರಮ ನಡೆಯಲಿದೆ.
ಇದರ ಜೊತೆಗೆ ನ.19 ಕ್ಕೆ ಸುಕೃತ ಹವನ, ಗೋಮೂಲ್ಯ ದಾನ, ಲಕ್ಷ್ಮೀನಾರಾಯಣ ಹೃದಯ ಪಾರಾಯಣ, ಪವಮಾನ ಹವನ, ಚಕ್ರಾಜ್ಞ ಪೂಜೆ, ದಶಾಂಶ ಹವನ, ದ್ವಾದಶ ಮೂರ್ತಿ ಆರಾಧನೆ. ನ.30ಕ್ಕೆ ಸಂಜೆ ಮಹಾಸುದರ್ಶನ ಹವನ ಪ್ರಾರಂಭ, ಡಿ.1 ಕ್ಕೆ ಮಹಾಸುದರ್ಶನ ಹವನದ ಪೂರ್ಣಾಹುತಿ, ಡಿ.2ಕ್ಕೆ ಗಣಪತಿ ಹವನ, ತಿಲ ಹವನ, ಪವಮಾನ ಹವನ, ಮೋಕ್ಷ ನಾರಾಯಣ ಬಲಿ, ದ್ವಾದಶಮೂರ್ತಿ ಆರಾಧನೆ, ಡಿ.3ಕ್ಕೆ ಭಾಗವತ ಸಪ್ತಾಹ, ಶಿವಪುರಾಣ ಪರಾಯಣ ಕಾರ್ಯಕ್ರಮ ನಡೆಯಲಿದೆ. ಒಟ್ಟು ಕಾರ್ಯಕ್ರಮದ ಸೇವೆ ಮಾಡಿಸುವ ಭಕ್ತರು ದೇವಳದ ಕೌಂಟರ್‌ನಲ್ಲಿ ವಿಚಾರಿಸಿ ರಶೀದಿ ಪಡೆಯುವಂತೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಮತ್ತು ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಹೆಚ್ ಅವರು ತಿಳಿಸಿದ್ದಾರೆ.