




ವಿಟ್ಲ: ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳಾದ ದಕ್ಷಿಣ್ ಪಿ.ವಿ ಹಾಗೂ ಲಿಖೇಶ್ ಕೆ ರವರು ರಚಿಸಿದ ಬಹುದ್ದೇಶ ಕೃಷಿ ಸಲಕರಣೆ ಎಂಬ ವಿಜ್ಞಾನ ಮಾದರಿ ನ. 5 ರಂದು ನೆಹರೂನಗರ ವಿವೇಕಾನಂದ ಸಿ,ಬಿ.ಯಸ್.ಇ ಸ್ಕೂಲ್ ನಲ್ಲಿ ನಡೆಯಲಿರುವ INSEF ರೀಜನಲ್ ಸೈನ್ಸ್ ಫೇರ್ ಗೆ ಆಯ್ಕೆಯಾಗಿರುತ್ತದೆ.
ದಕ್ಷಿಣ್ ಪಿ.ವಿ ಯವರು ಬಂಟ್ವಾಳ ತಾಲೂಕು ಕೊಡಾಜೆ ಗ್ರಾಮದ ವಿಶ್ವನಾಥ ಕುಲಾಲ್ ಮತ್ತು ಪ್ರಮೀಳ ದಂಪತಿಗಳ ಪುತ್ರ ಹಾಗೂ ಲಿಖೇಶ್ ಕೆ ಯವರು ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಚಂದ್ರಶೇಖರ್ ಕೆ. ಮತ್ತು ಸವಿತ ದಂಪತಿಗಳ ಪುತ್ರರಾಗಿದ್ದಾರೆ.











