ಸವಣೂರು : ನನ್ನ ನಾಡು ನನ್ನ ಹಾಡು ಕೋಟಿ ಕಂಠ ಗಾಯನ

0

ಸವಣೂರು : ದಕ್ಷಿಣ ಕನ್ನಡ  ಜಿಲ್ಲಾ ಯುವ ಜನ ಒಕ್ಕೂಟ, , ಸವಣೂರು ಯುವಕ ಮಂಡಲ, ಸ್ವಾಮಿ ವಿವೇಕಾನಂದ ಸಂಘ ಸವಣೂರು, ವರ್ತಕರ ಸಂಘ ಸವಣೂರು ಕುಮಾರಧಾರ ಆಟೋ ರಿಕ್ಷಾ ಚಾಲಕ ಮಾಲಕರ ಸಂಘ, ಸವಣೂರು ಗ್ರಾಮ‌ ಪಂಚಾಯತ್ ನ ಜಂಟಿ ಆಶ್ರಯದಲ್ಲಿ  67ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿಕೋಟಿ ಕಂಠ ಗಾಯನ ಕಾರ್ಯಕ್ರಮ ಸವಣೂರು ಜಂಕ್ಷನ್ ನಲ್ಲಿ ನಡೆಯಿತು.
ಗಾಯಕರಾದ ಗುರುಪ್ರಿಯಾ ನಾಯಕ್ ,ಅಖಿಲಾ ನೆಕ್ರಾಜೆ, ದಿವ್ಯಾ ಅವರ ಸುಮಧುರ ಕಂಠದಿಂದ ಕನ್ನಡ ಗೀತ ಗಾಯನ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ಸವಣೂರು ಗ್ರಾ.ಪಂ.ಅಧ್ಯಕ್ಷೆ ರಾಜೀವಿ ಶೆಟ್ಟಿ, ಉಪಾಧ್ಯಕ್ಷ ಶೀನಪ್ಪ ಶೆಟ್ಟಿ ನೆಕ್ರಾಜೆ, ಪಿಡಿಓ ಎ.ಮನ್ಮಥ ,ಸದಸ್ಯರಾದ ಗಿರಿಶಂಕರ ಸುಲಾಯ, ಅಬ್ದುಲ್ ರಝಾಕ್,ಸುಂದರಿ ಬಿ.ಎಸ್.,ಸತೀಶ್ ಅಂಗಡಿಮೂಲೆ, ರಫೀಕ್ ಎಂ.ಎ.,ತೀರ್ಥರಾಮ ಕೆಡೆಂಜಿ, ಚೇತನಾ ಪಾಲ್ತಾಡಿ, ತಾರಾನಾಥ ಸುವರ್ಣ ಬೊಳಿಯಾಲ, ಇಂದಿರಾ ಬೇರಿಕೆ, ಚಂದ್ರಾವತಿ ಸುಣ್ಣಾಜೆ, ಬಾಬು ಎನ್., ಹರಿಕಲಾ ರೈ, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ತಾರಾನಾಥ ಕಾಯರ್ಗ,ಸವಣೂರು ಯುವಕ ಮಂಡಲದ ಕಾರ್ಯದರ್ಶಿ ಜಿತಾಕ್ಷ ಜಿ.,ಪುತ್ತೂರು ತಾಲೂಕು ಯುವಜನ ಒಕ್ಕೂಟದ ಗೌರವಾಧ್ಯಕ್ಷ ಸುಬ್ರಹ್ಮಣ್ಯ ಕರಂಬಾರು,ನಿರ್ದೇಶಕ ಮನೋಜ್ ಸುವರ್ಣ, ಅಂಗನವಾಡಿ ಕಾರ್ಯಕರ್ತೆಯರು,ವರ್ತಕ ಸಂಘದ ಸದಸ್ಯರು,ಗ್ರಾ.ಪಂ.ಸಿಬಂದಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಗಾಯಕರನ್ನು ಸವಣೂರು ಗ್ರಾ.ಪಂ.ವತಿಯಿಂದ ಸ್ಮರಣಿಕೆ ನೀಡಿ ಗ್ರಾ.ಪಂ.ಅಧ್ಯಕ್ಷೆ ರಾಜೀವಿ ಶೆಟ್ಟಿ ಅವರು ಗೌರವಿಸಿದರು.

LEAVE A REPLY

Please enter your comment!
Please enter your name here