ಪುತ್ತೂರು: 55 ವರ್ಷಗಳ ಇತಿಹಾಸವಿರುವ, ಮಲ್ಟಿ ಬ್ರಾಂಡೆಡ್ ಶೋರೂಂ ಮಂಗಳೂರಿನ ಕಾಮತ್ ಅಪ್ಟಿಕಲ್ಸ್‌ರವರ ಪುತ್ತೂರಿನ ಶಾಖೆ ಅ.30 ರಂದು ಮುಖ್ಯರಸ್ತೆಯ ಶಿವ ಆರ್ಕೆಡ್‌ನಲ್ಲಿ ಶುಭಾರಂಭಗೊಂಡಿತು.
ಶಾಸಕ ಸಂಜೀವ ಮಠಂದೂರು ನೂತನ ಮಳಿಗೆಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ವ್ಯಕ್ತಿಗೆ ದೃಷ್ಠಿ ನೀಡುವ ಜೊತೆಗೆ ಸಮಾಜಕ್ಕೂ ದೃಷ್ಠಿ ನೀಡುವ ಮೂಲಕ ಕಾಮತ್ ಅಪ್ಟಿಕಲ್ಸ್‌ನವರು ಹೊಸ ಚೈತನ್ಯ ನೀಡುತ್ತಿದ್ದಾರೆ. ವ್ಯವಹಾರದ ಜೊತೆ ಸೇವೆಯನ್ನು ಅಳವಡಿಸಿಕೊಂಡು ಮೊಬೈಲ್ ಸೇವೆಯ ಮೂಲಕ ಹಿರಿಯರಿಗೂ ಮನೆ ಮನೆಗೆ ತೆರಳಿ ಸೇವೆ ನೀಡುತ್ತಿರುವುದು ಅಭಿನಂದನೀಯವಾಗಿದೆ. ಗ್ರಾಮಾಂತರ ಜಿಲ್ಲೆಯಾಗಲಿರುವ ಪುತ್ತೂರು ನಗರದ ಅಭಿವೃದ್ಧಿಗೆ ಕಾಮತ್ ಅಪ್ಟಿಕಲ್ಸ್‌ನವರು ಕೊಡುಗೆ ನೀಡಿದ್ದಾರೆ. ಕೊಡುಗೆಯಾಗಿದೆ. ಅಪ್ಟಿಕಲ್ ಜನರ ಆರೋಗ್ಯ ಹಾಗೂ ಸೌಂಧರ್ಯ ವೃದ್ಧಿಗೆ ಸಹಕಾರಿಯಾಗಲಿದೆ ಎಂದರು.
ಮುಖ್ಯ ಅತಿಥಿ ಡಾ.ಎಂ.ಕೆ ಪ್ರಸಾದ್ ಮಾತನಾಡಿ, ಕಣ್ಣನ ಚಿಕಿತ್ಸೆಯು ಬಹಳಷ್ಟು ಸೂಕ್ಷ್ಮವಾದ ಕೆಲಸ. ಕಣ್ಣಿನ ಕನ್ನಡಕ ಹಾಕಿ ಪರೀಕ್ಷಿಸಿದರೆ ಸಾಲದು. ಡಯಾಬಿಟೀಸ್ ಇದ್ದರವರು ರೆಟಿನಾಲ್ ಪರೀಕ್ಷಿಸಬೇಕು. ಅನುಭವೀ ವೈದ್ಯರಿಂದ ಪರೀಕ್ಷಿಸಬೇಕು. ಶಾಖೆಗಳನ್ನು ತೆರಯುವುದಲ್ಲದೆ ಸಂಸ್ಥೆಯ ಮೂಲಕ ಜನರಿಗೆ ಉತ್ತಮ ಚಿಕಿತ್ಸೆ ಹಾಗೂ ಸೇವೆ ದೊರೆಯಬೇಕು ಎಂದರು.
ಜಿ.ಎಲ್ ಆಚಾರ್ಯ ಜ್ಯುವೆಲ್ಲರ್‍ಸ್ ಮ್ಹಾಲಕ ಬಲರಾಮ ಆಚಾರ್ಯ ಮಾತನಾಡಿ, ಕಾಮತ್ ಅಪ್ಟಿಕಲ್ಸ್ 55 ವರ್ಷದಲ್ಲಿ ಐದು ಶಾಖೆಗಳನ್ನು ಹೊಂದಿದೆ. ಮುಂದಿನ 5 ವರ್ಷಗಳಲ್ಲಿ 15 ಶಾಖೆಗಳು ಪ್ರಾರಂಭವಾಗಲಿ. ಅಪ್ಟಿಕಲ್‌ನಲ್ಲಿ ಹೊಸ ಹೊಸ ತಂತ್ರಜ್ಞಾನವನ್ನು ಬಳಿಸಿಕೊಂಡಂತೆ ವ್ಯವಹಾರದಲ್ಲಿಯೂ ಬಳಸಿಕೊಳ್ಳಬೇಕು. ತಂತ್ರಜ್ಞಾನಗಳ ಮೂಲಕ ವ್ಯವಹಾರಗಳ ವೃದ್ಧಿಯಾಗಲಿದೆ. ಹೊಸ ತಂತ್ರಜ್ಞಾನಗಳನ್ನು ಪುತ್ತೂರಿಗೆ ಪರಿಚಯಿಸಿ, ಜನರಿಗೆ ಉತ್ತಮ ಸೇವೆಗೆ ದೊರೆಯುವಂತಾಗಲಿ ಎಂದು ಹಾರೈಸಿದರು.
55 ವರ್ಷಗಳ ಇತಿಹಾಸವಿರುವ ಸಂಸ್ಥೆ:
ಮಂಗಳೂರಿನಲ್ಲಿ 1967ರಲ್ಲಿ ಪ್ರಾರಂಭಗೊಂಡಿರುವ ಮಳಿಗೆಯು 1998ರಲ್ಲಿ ಕಣ್ಣಿನ ವೈದ್ಯರಿಂದ ಚಿಕಿತ್ಸೆಯನ್ನು ಪ್ರಾರಂಭಿಸಲಾಗಿದೆ. 2008ರಲ್ಲಿ ಬಂಟ್ಸ್ ಹಾಸ್ಟೆಲ್‌ನಲ್ಲಿ ಬ್ರಾಂಡೆಡ್ ಸನ್ ಗ್ಲಾಸ್ ಮಳಿಗೆ ಪ್ರಾರಂಭಗೊಂಡಿದೆ. 10 ವರ್ಷದ ಬಳಿಕ ಮಂಗಳೂರು ಡೊಂಗರಕೇರಿಯಲ್ಲಿ ಮಳಿಗೆ ಹಾಗೂ 2017 ರಲ್ಲಿ ಸುರತತ್ಕಲ್‌ನಲ್ಲಿ ಮಳಿಗೆಯನ್ನು ಪ್ರಾರಂಭಗೊಂಡಿದೆ. 2020ರಲ್ಲಿ ಎಲ್ಲಾ ಸೌಲಭ್ಯಗಳೊಂದಿಗೆ ಮನೆ ಮನೆಗೆ ತೆರಳಿ ಚಿಕಿತ್ಸೆ ನೀಡುವ ಮೊಬೈಲ್ ಐ ಕೇರ್‌ನ್ನು ಪ್ರಾರಂಭಿಸಿದೆ. 2022ರಲ್ಲಿ ಸಂಸ್ಥೆಯ ಸ್ವರ್ಣಮಹೋತ್ವವನ್ನು ಆಚರಿಸಿದೆ. ಐಎಸ್‌ಐ ಸರ್ಟಿಫೈಡ್ ಮಳಿಗೆಯಾಗಿರುವ ಕಾಮತ್ ಅಪ್ಟಿಕಲ್ಸ್ ಕಣ್ಣಿನ ಚಿಕಿತ್ಸೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಸೇವೆ ನೀಡುತ್ತಿದೆ. ಸಂಸ್ಥೆಯಲ್ಲಿ ಅರ್ಹ ಆಪ್ಟೋಮೆಟ್ರೀಸ್(ಕಣ್ಣಿನ ತಜ್ಞರು), ಕಂಪ್ಯೂಟರೈಸ್‌ಡ್ ಕಣ್ಣಿನ ಪರೀಕ್ಷೆ, ದೃಷ್ಠಿ ತೀಕ್ಷ್ಣತೆ ಮತ್ತು ವಕ್ರೀಭವನ, ಕಲರ್ ವಿಷನ್ ಸ್ಕ್ರೀನಿಂಗ್, ಕನ್ನಡಕ ಹಾಗೂ ಕಾಂಟ್ಯಾಕ್ಟ್ ಲೆನ್ಸ್ ವಿತರಣೆ ಮೊದಲಾದ ಸೌಲಭ್ಯಗಳನ್ನು ಹೊಂದಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ವಿಷನ್ ಕ್ಯಾರ್‌ನ ಮಾರಾಟ ವಿಭಾಗದ ಮುಖ್ಯಸ್ಥ ವಿಕಾಸ್ ಸ್ವಾಮಿ, ಮಾತನಾಡಿ, ಕಾಮತ್ ಅಪ್ಟಿಕಲ್ಸ್ ಜನರಿಗೆ ಉತ್ತಮ, ಗುಣಮಟ್ಟದ ಸೇವೆ ನೀಡುತ್ತಿದೆ. ಅನುಭವೀ ವೈದ್ಯರು ಹಾಗೂ ಆಧುನಿಕ ತಂತ್ರಜ್ಞಾನ ಆಧಾರಿತವಾಗಿರುವ ಮಳಿಗೆಯು 5 ಸ್ಟಾರ್ ಕ್ಲಿನಿಕ್ ಆಗಿ ಸೇವೆ ನೀಡುತ್ತಿದೆ ಎಂದರು.
ಸಂಸ್ಥೆಯ ಅಪ್ತಮಾಲಾಜಿಸ್ಟ್ ಎ.ಎನ್‌ಸುಧೀಂದ್ರ ರಾವ್, ಮಂಜುನಾಥ ಕಾಮತ್, ರಾಧಾಕೃಷ್ಣ ಕಾಮತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಮಿತಾ ಕಾಮತ್ ತಂಡ ಪ್ರಾರ್ಥಿಸಿದರು. ನರಸಿಂಹ ಕಾಮತ್ ಸ್ವಾಗತಿಸಿದರು. ನಿತಿನ್ ಕಾಮತ್ ವಂದಿಸಿದರು, ಖ್ಯಾತ ನಿರೂಪಕಿ ಸೌಜನ್ಯ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಅಶ್ವಿನ್ ಕಾಮತ್ , ಮನೋಜ್ ಕಾಮತ್, ರವೀಂದ್ರ ಕಾಮತ್, ರಾಘವೇಂದ್ರ ಕಾಮತ್ ಅತಿಥಿಗಳನ್ನು ಸ್ಮರಣಿಕೆ ನೀಡಿ ಗೌರವಿಸಿದರು.