ಪ್ಲಾಸ್ಟಿಕ್ ಕುಟೀರ ಉದ್ಘಾಟನೆ- ಮನೆ ಮನೆಗೆ ಗೋಣಿ ವಿತರಣೆ, ಪ್ಲಾಸ್ಟಿಕ್ ಬಗ್ಗೆ ಅರಿವು
ಪುತ್ತೂರು: ಕೋಡಿಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಡಿಂಬಾಡಿ ಗ್ರಾಮದ ಎರಡನೇ ವಾರ್ಡಿನಲ್ಲಿ ಗ್ರಾಮ ಪಂಚಾಯತ್ ಸದಸ್ಯ ಜಯಪ್ರಕಾಶ್ ಬದಿನಾರುರವರ ನೇತೃತ್ವದಲ್ಲಿ ಸೇಡಿಯಾಪು ಫ್ರೆಂಡ್ಸ್ ಕ್ಲಬ್ ಸಹಭಾಗಿತ್ವದೊಂದಿಗೆ ‘ಸ್ವಚ್ಛ ಮನ- ಸ್ವಚ್ಛ ಗ್ರಾಮ’ ಎಂಬ ವಿನೂತನ ಕಾರ್ಯಕ್ರಮ ಅ.30ರಂದು ನಡೆಯಿತು. ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಚಂದ್ರಶೇಖರ ಕುಲಾಲ್, ಕಾರ್ಯದರ್ಶಿ ಸತೀಶ್ ಮಡಿವಾಳ, ಸಂಚಾಲಕ ರಫೀಕ್ ಆನಿಲಕೋಡಿ, ಸದಸ್ಯರಾದ ಗಣೇಶ್ ಹೆಗ್ಡೆ, ವಾಸಪ್ಪ ಸೇಡಿಯಾಪು, ಗಂಗಾಧರ, ಸಂತೋಷ್, ರಂಜಿತ್, ಸುನಿತ್ ನಾಯಕ್, ರಾಘವೇಂದ್ರ ಆಚಾರ್ಯ, ಭರತ್ ಶೆಟ್ಟಿ, ಸತೀಶ್ ಕುಲಾಲ್, ಅನಿಲ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಸೇಡಿಯಾಪು ಕ್ರೀಡಾಂಗಣದಲ್ಲಿ ಸ್ಥಳೀಯರು ನಿರ್ಮಿಸಿದ ಪ್ಲಾಸ್ಟಿಕ್ ಕುಟೀರವನ್ನು ಕಾರ್ಯಕ್ರಮದಲ್ಲಿ ಉದ್ಘಾಟನೆ ಮಾಡಲಾಯಿತು. ನಂತರ ಮನೆ, ಮನೆಗೆ ಗೋಣಿಯನ್ನು ಉಚಿತವಾಗಿ ಕೊಡಲಾಯಿತಲ್ಲದೆ ಪ್ಲಾಸ್ಟಿಕ್ ಬಗ್ಗೆ ಅರಿವು ಮೂಡಿಸಲಾಯಿತು.
ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ- ಜಯಪ್ರಕಾಶ್ ಬದಿನಾರು
ವಾರ್ಡಿನ ಸುಮಾರು ನೂರು ಮನೆಗಳಿಗೆ ಗೋಣಿ ನೀಡಲಾಗಿದ್ದು ಮುಂದಿನ ದಿನಗಳಲ್ಲಿ ಗ್ರಾಮದ ಎಲ್ಲಾ ಮನೆಗಳಿಗೆ ನೀಡುವ ಆಲೋಚನೆ ಮಾಡಲಾಗಿದೆ. ಹದಿನೈದು ದಿನಕ್ಕೊಮ್ಮೆ ಒಣಕಸ ಸಂಗ್ರಹ ಮಾಡುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಗ್ರಾಮಸ್ಥರಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಮ್ಮ ವಾರ್ಡ್ ಮಾದರಿ ವಾರ್ಡ್ ಮಾಡಬೇಕೆಂಬ ಆಲೋಚನೆಯಲ್ಲಿ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಗ್ರಾ.ಪಂ.ಸದಸ್ಯ ಜಯಪ್ರಕಾಶ್ ಬದಿನಾರು ತಿಳಿಸಿದ್ದಾರೆ.